ವಿಳಾಸ ಕೇಳುವ ನೆಪದಲ್ಲಿ ಕೈಚಳಕ ತೋರಿಸಿದ ಕಳ್ಳರು.

ಚಳ್ಳಕೆರೆ

      ನಗರದ ವಿವಿಧ ಬಡಾವಣೆಗಳಲ್ಲಿ ಹಾಡುಹಗಲೇ ವೃದ್ದೆಯರನ್ನು ಹಿಂಬಾಲಿಸಿ ಮಾಂಗಲ್ಯ ಸರವನ್ನು ದೋಚುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಶುಕ್ರವಾರವೂ ಸಹ ಇಲ್ಲಿನ ವಾಸವಿ ಕಾಲೋನಿಯಲ್ಲಿ ಅಂಗಡಿಗೆ ಹೊರಟಿದ್ದ ವೃದ್ದೆಯ ಸರವನ್ನು ಅಪರಿಸಿದ ಘಟನೆ ನಡೆದಿದೆ.

       ಇಲ್ಲಿನ ವಾಸವಿ ಕಾಲೋನಿ ನಿವಾಸಿ ಸಾವಿತ್ರಮ್ಮ(70) ಎಂಬುವವರು ಶುಕ್ರವಾರ ಮಧ್ಯಾಹ್ನ 10.30ರ ಸಮಯದಲ್ಲಿ ತಮ್ಮ ಮನೆಯ ಸಮೀಪದ ಅಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೋಟಾರ್ ಬೈಕ್‍ನಲ್ಲಿ ಆಗಮಿಸಿದ ಇಬ್ಬರು ವಿಳಾಸ ಕೇಳುವ ನೆಪದಲ್ಲಿ ಒಬ್ಬ ಮಾತ್ರ ಬೈಕ್ ಮೇಲೆ ಕುಳಿತು ಇನ್ನೊಬ್ಬ ವೃದ್ಧೆಯ ಬಳಿ ಬಂದು ಈ ವಿಳಾಸ ಎಲ್ಲಿ ಬರುತ್ತದೆ ಎಂದು ಕೇಳಿದ್ದು, ವೃದ್ದೆ ಸಾವಿತ್ರಮ್ಮ ಉತ್ತರ ಕೊಡುವ ಮುನ್ನವೆ ಕುತ್ತಿಯಲ್ಲಿದ್ದ ಸುಮಾರು 60 ಗ್ರಾಂ ತೂಕದ 2 ಲಕ್ಷ ಮೌಲ್ಯದ ಬಂಗಾರದ ಸರವನ್ನು ಎಳೆದು ಕಿತ್ತಿದ್ದಾನೆ.

    ಈ ಸಂದರ್ಭದಲ್ಲಿ ಕಿತ್ತ ಸರ ಕಿವಿಗೆ ಸಿಕ್ಕಿಕೊಂಡ ಹಿನ್ನೆಲೆಯಲ್ಲಿ ಜೋರಾಗಿ ಎಳೆದ ಪರಿಣಾಮವಾಗಿ ಬಲಗಡೆ ಕಿವಿ ಹರಿದಿದ್ದು, ಸಾವಿತ್ರಮ್ಮ ನೆಲಕ್ಕೆ ಬಿದಿದ್ದಾರೆ. ಕೂಡಲೇ ಸುಧಾರಿಸಿಕೊಂಡ ಸಾವಿತ್ರಮ್ಮ ಮನೆಗೆ ತೆರಳಿ ವಿಷಯ ತಿಳಿಸಿದ್ದು, ಮನೆಯವರು ಸಾವಿತ್ರಮ್ಮನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಕಿವಿಗೆ ಹೊಲಿಗೆ ಹಾಕಿಸಿರುತ್ತಾರೆ.

      ಹಾಡುಹಗಲೇ ವೃದ್ದೆಯ ಸರ ಅಪಹರಣ ಮಾಹಿತಿ ತಿಳಿದ ಪೊಲೀಸರು ಆಗುಂತಕರ ಚಹರೆಯ ಬಗ್ಗೆ ಸಾವಿತ್ರಮ್ಮನದಿಂದ ಮಾಹಿತಿ ಪಡೆದು ಸರಗಳ್ಳರ ಪತ್ತೆಗಾಗಿ ಪ್ರಯತ್ನ ನಡೆಸುತ್ತಿದ್ಧಾರೆ. ನಗರದ ಹಲವಾರು ಬಡಾವಣೆಗಳಲ್ಲಿ ಸರಗಳ್ಳತನ ಪ್ರಕರಣಗಳು ಆಗಾಗ ನಡೆಯುತ್ತಿದ್ದರು ಸಹ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಕಾರಣ ನಗರದಲ್ಲಿ ಅಳವಡಿಸಿರುವ ಬಹುತೇಕ ಸಿಸಿ ಕ್ಯಾಮರಗಳು ಕೆಟ್ಟುಹೋಗಿದ್ದು ಇವುಗಳ ರಿಪೇರಿಗೆ ನಗರಸಭೆಯಾಗಲಿ, ಪೊಲೀಸ್ ಇಲಾಖೆಯಾಗಲಿ ಮುಂದಾಗುತ್ತಿಲ್ಲ. ಸಿಸಿ ಕ್ಯಾಮರಗಳು ಕಾರ್ಯನಿರ್ವಹಿಸಿದಲ್ಲಿ ಇಂತಹ ಪ್ರಕರಣಗಳ ನಿಯಂತ್ರಣ ಸಾಧ್ಯವೆಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ಧಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link