ಚಳ್ಳಕೆರೆ
ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆ ಹಾಗೂ ಉತ್ಸವಗಳು ಜನರಲ್ಲಿ ಅಡಗಿರುವ ಭಕ್ತಿ ಹಾಗೂ ಶ್ರದ್ದೆಯನ್ನು ಎತ್ತಿ ತೋರುತ್ತವೆ. ನೂರಾರು ವರ್ಷಗಳಿಂದಲೂ ಸಹ ನಾಡಿನ ಜನ ದೇವರುಗಳ ಉತ್ಸವಕ್ಕೆ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುತ್ತಾರೆ. ಇದು ಗ್ರಾಮೀಣ ಭಾಗಗಳಲ್ಲಿನ ಸೌಹಾರ್ಥತೆಯನ್ನು ತೋರುತ್ತದೆ ಎಂದು ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ್‍ಬಾಬು ತಿಳಿಸಿದರು.
ಅವರು, ಸೋಮವಾರ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಗ್ರಾಮ ದೇವತೆಯಾದ ಶ್ರೀಗೌರಿದೇವಿ ಜಾತ್ರೆ ಹಿನ್ನೆಲ್ಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ನಂತರ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದರು. ತಾಲ್ಲೂಕಿನಲ್ಲಿ ಬಹುವರ್ಷಗಳಿಂದ ಮಳೆ ವೈಪಲ್ಯದ ಹಿನ್ನೆಲ್ಲೆಯಲ್ಲಿ ರೈತರಲ್ಲಿ ಅಡಗಿರುವ ಆತಂಕ ದೂರ ಮಾಡಲು ದೇವಿಯನ್ನು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಪಿ.ನಾಗೇಶ್‍ರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಲಿಂಗಪ್ಪ, ಹನುಮಂತರಾಯ, ಸಣ್ಣ ತಿಪ್ಪೇಸ್ವಾಮಿ, ಉಮೇಶ್, ಭೀಮಾರೆಡ್ಡಿ, ಹರೀಶ್, ಕೋಡಿಹಳ್ಳಿ ಸೋಮಶೇಖರ, ಒ.ವೆಂಕಟೇಶ್, ರಾಜಣ್ಣ, ನಾಗರಾಜು ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ