ವಸತಿ ಸೌಲಬ್ಯ ಕಲ್ಪಿಸಿಕೊಡಲು ಮನವಿ

ಚಿತ್ರದುರ್ಗ:

   ಪಿಳ್ಳೆಕೆರನಹಳ್ಳಿ ಗ್ರಾಮದಲ್ಲಿ ವಸತಿ ರಹಿತರನ್ನು ಗುರುತಿಸಿ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಪಿಳ್ಳೆಕೆರನಹಳ್ಳಿ ಗ್ರಾಮಸ್ಥರು ಶುಕ್ರವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

     ಚಿತ್ರದುರ್ಗ ತಾಲೂಕು ಮದಕರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಿಳ್ಳೆಕೆರನಹಳ್ಳಿಯಲ್ಲಿ ವಸತಿ ರಹಿತರು 19-12-2018 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ವಸತಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದ್ದರೂ ಇದುವರೆವಿಗೂ ಯಾವುದೆ ಪ್ರಯೋಜನವಾಗಿಲ್ಲ.

     ಮದಕರಿಪುರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಧ್ಯಕ್ಷೆ ಕೆ.ರಜನಿರವರ ಅಧ್ಯಕ್ಷತೆಯಲ್ಲಿ 21-1-2019 ರಂದು ಸಭೆ ಸೇರಿ ಸರ್ವ ಸದಸ್ಯರು ಒಮ್ಮತದಿಂದ ಪಿಳ್ಳೆಕೆರನಹಳ್ಳಿ ಗ್ರಾಮದ ರಿ.ಸ.ನಂ.37/1 ರಲ್ಲಿ ಚಿತ್ರದುರ್ಗ ನಗರಸಭೆ ಅಧ್ಯಕ್ಷರ ಹೆಸರಿನಲ್ಲಿರುವ 15 ಎಕರೆ ಮೂರು ಗುಂಟೆ ಜಮೀನಿನನ್ನು ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮೀಸಲಿಟ್ಟು ಉಳಿದ 4 ಎಕರೆ 36 ಗುಂಟೆ ಜಮೀನು ವಶಪಡಿಸಿ ಕೊಂಡು ಜಿಲ್ಲಾಡಳಿತ ವಸತಿ ರಹಿತರಿಗೆ ವಸತಿ ಒದಗಿಸಲೆಂದು ನಿರ್ಣಯಿಸಲಾಯಿತು ಎಂದು ಪಿಳ್ಳೆಕೆರನಹಳ್ಳಿ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ಗಮನ ಸೆಳೆದರು.

     ಚಿತ್ರದುರ್ಗ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಎ.ಪಿ.ಎಂ.ಸಿ.ಉಪಾಧ್ಯಕ್ಷ ಜಯಣ್ಣ ಸೇರಿದಂತೆ ಪಿಳ್ಳೆಕೆರನಹಳ್ಳಿಯ ವಸತಿ ರಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap