ಶ್ರೀವೀರಭದ್ರಸ್ವಾಮಿಯ ಗುಗ್ಗಳ ಮಹೋತ್ಸವ

ಚಿತ್ರದುರ್ಗ

      ನಗರದ ವೀರಶೈವ ಸಮಾಜದವತಿಯಿಂದ ಹಮ್ಮಿಕೊಳ್ಳಲಾಗಿದ್ದು ಶ್ರೀ ವೀರಭದ್ರಸ್ವಾಮಿಯ ಗುಗ್ಗಳ ಮಹೋತ್ಸವವೂ ಶ್ರದ್ದಾ ಭಕ್ತಿಯಿಂದ ನಡೆಯಿತು. 

     ಇಂದು ಬೆಳಿಗ್ಗೆ 7 ಗಂಟೆಗೆ ನಗರದ ರಂಗಯ್ಯನ ಬಾಗಿಲ ಬಳಿಯ ಉಜ್ಜಯಿನಿ ಮಠದಿಂದ ಪ್ರಾರಂಭವಾದ ಗುಗ್ಗಳ ಮಹೋತ್ಸವವು ಸುಮಾರು 10 ಗಂಟೆಗೆ ನೀಲಕಂಠೇಶ್ವರ ದೇವಾಲಯದ ಮುಂಭಾಗದಲ್ಲಿ ನಿರ್ಮಾಣ ಮಾಡಲಾದ ಕೆಂಡವನ್ನು ತುಳಿಯುವುದರ ಮೂಲಕ ಮಹೋತ್ಸವವನ್ನು ಸಮಾಪ್ತಿ ಮಾಡಲಾಯಿತು.

      ಗುಗ್ಗಳ ಮಹೋತ್ಸವನ್ನು ರಾಣೆಬೆನೂರು ತಾಲ್ಲೂಕಿನ ಚೌಡಯ್ಯ ದಾನಪುರದ ಶ್ರೀ ವೀರಭದ್ರೇಶ್ವರ ಪುರವಂತಿಕೆ ಜನಪದ ಕಲಾತಂಡದಿಂದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಮತ್ತು ಅಗ್ನಿಕುಂಡ ಕಾರ್ಯಕ್ರಮವನ್ನು ನಡೆಸಲಾಯಿತು.

       ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಗುಗ್ಗಳ ಮಹೋತ್ಸವವೂ ಉಜ್ಜಯಿನಿ ಮಠದಿಂದ ಪ್ರಾರಂಭವಾಗಿ ದೊಡ್ಡಪೇಟೆ, ಚಿಕ್ಕಪೇಟೆ, ಆನೆಬಾಗಿಲು, ಮಹಾತ್ಮಗಾಂಧಿ ವೃತ್ತದ ಮೂಲಕ ಹಾದು ದೇವಾಸ್ಥಾನವನ್ನು ತಲುಪಿತು. ಈ ದಾರಿಯಲ್ಲಿ ಗುಗ್ಗಳ ಮಹೋತ್ಸವ ಆಗಮಿಸುವಾಗ ಮನೆಯ ಮುಂದೆ ಭಕ್ತಾಧಿಗಳು ವಿವಿಧ ಚಿತ್ರ ವಿಚಿತ್ರವಾದ ರಂಗೋಲಿಯನ್ನು ಬಿಡಿಸುವುದರ ಮೂಲಕ ಸ್ವಾಮಿಯನ್ನು ಸ್ವಾಗತಿಸಲಾಯಿತು. ಇದೆ ಸಂದರ್ಭದಲ್ಲಿ ವೀರಭದ್ರಸ್ವಾಮಿಗೆ ಪೂಜೆಯನ್ನು ಸಹಾ ಮಾಡಿಸಲಾಯಿತು.

        ಇಂದು ಬೆಳಿಗ್ಗೆ 07 ಗಂಟೆಯಿಂದ ಪ್ರಾರಂಭವಾದ ಸ್ವಾಮಿಯ ಕೆಂಡಾರ್ಚನಾ ಕಾರ್ಯಕ್ರಮ ಸ್ವಾಮಿಯ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಉಜ್ಜಯಿನಿ ಮಠದಿಂದ ಪ್ರಾರಂಭಿಸಿ ನಂತರ ನೀಲಕಂಠೇಶ್ವರ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಿದ ಕೆಂಡದ ಗುಂಡಿಯನ್ನು ಪಲ್ಲಕ್ಕಿ ಹೊತ್ತ ಭಕ್ತಾಧಿಗಳು ಅದನ್ನು ತುಳಿಯುವುದರ ಮೂಲಕ ಸ್ವಾಮಿಗೆ ಕೆಂಡಾರ್ಚನೆಯ ಸೇವೆಯನ್ನು ಸಲ್ಲಿಸಲಾಯಿತು.

        ಸ್ವಾಮಿಯ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಶ್ರೀ ವೀರಭದ್ರೇಶ್ವರ ಪುರವಂತಿಕೆಯ ವೀರಭದ್ರನ ಭಕ್ತರಾದ ಪುರವಂತ ಜನಪದ ಕಲಾತಂಡದಿಂದ ಕಲಾವಿದರು. ಅತನ ನಾಮ ಸ್ಮರಣೆಯನ್ನು ಒಡಪಿನ ರೂಪದಲ್ಲಿ ಹೇಳುವುದರ ಮೂಲಕ ಆಗಮಿಸಿದ ಭಕ್ತರಿಗೆ ಆತನ ಬಗ್ಗೆ ತಿಳಿಸಿದರು ಈ ಸಂದರ್ಭದಲ್ಲಿ ಅವರು ಧರಿಸಿದ್ದವೀರಭದ್ರನ ವೇಷಭೂಷಣ ಮತು ಒಡುಪನ್ನು ಹೇಳುವಾಗ ಆವರ ಅಭಿನಯ ನೋಡುಗರಲ್ಲಿ ಮೈನೆವಿರೆಳಿಸಿತು. ಈ ಸಂದರ್ಭದಲ್ಲಿ ಆಗಮಿಸಿದ್ದ ಭಕ್ತ ಸಮೂಹ ಜೈ ವೀರಭದ್ರ ಜೈ. ಎಂಬ ನಾಮಸ್ಮರಣೆ ಕೇಳಿ ಬಂದವು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರು, ಗಣ್ಯರು, ಮಹಿಳೆಯರು ಭಾಗವಹಿಸಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap