ಹಾಸನ: 
ಹಾಸನ ಲೋಕಸಭಾ ಕ್ಷೇತ್ರದಲ್ಲಿ ವಿಕಲಚೇತನರು ಮತದಾನ ಭಹಿಷ್ಕರಿಸುವುದಾಗಿ ತಿಳಿಸಿದ್ದಾರೆ .
ಏಕೆಂದರೆ ನಮ್ಮ ಸಮಸ್ಯೆಗಳನ್ನು ಯಾವುದೇ ರಾಜಕೀಯ ನಾಯಕರೂ ಕೇಳುತ್ತಿಲ್ಲ. ಆದರಿಂದ ನಮಗಾಗಿ ಕೆಲಸ ಮಾಡದವರಿಗೆ ನಾವು ಯಾಕೆ ಮತ ಹಾಕಬೇಕು ಎಂದು ಪ್ರಶ್ನಿಸಿ ಜಿಲ್ಲೆಯ ಅಂಗವಿಕಲರ ಸಂಘದ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.
ಯಾವುದೇ ಪಕ್ಷದ ನಾಯಕರಾಗಲಿ ಅಂಗವಿಕಲರ ಸಮಸ್ಯೆಗೆ ಸ್ಪಂದಿಸಿಲ್ಲ. ಕಳೆದ 25 ವರ್ಷಗಳಿಂದ ಜಿಲ್ಲೆಯ ಅಂಗವಿಕಲ ಕ್ಷೇಮಾಭಿವೃದ್ದಿಗೆ ಸಂಘವನ್ನು ಸ್ಥಾಪಿಸಿಕೊಂಡಿದ್ದೇವೆ. ಇದೂವರೆಗೆ ಸುಮಾರು 79 ಬಾರಿ ರಾಜ್ಯದ ಮುಖ್ಯಮಂತ್ರಿಗಳೂ ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಮನವಿಗಳನ್ನು ಕೊಟ್ಟಿದ್ದೇವೆ. ಆದರೂ ಯಾರೊಬ್ಬರೂ ಕೂಡ ನಮ್ಮ ಮನವಿಗೆ ಕಿವಿಗೊಡುತ್ತಿಲ್ಲ. ವಿಕಲಚೇತನರ ಸಮಸ್ಯೆಗಳು ಹಲವಾರು ಇವೆ, ಅವುಗಳನ್ನು ಪರಿಹರಿಸಿಲ್ಲ. ಹೀಗಿರುವಾಗ ಯಾವ ಸಾರ್ಥಕತೆಗಾಗಿ ಮತ ಹಾಕಬೇಕು ಎಂದು ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರಶ್ನಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








