ದಾವಣಗೆರೆ
ಲೋಕಸಭಾ ಸಾರ್ವತ್ರಿಕ ಚುನಾವಣೆ 2019ಕ್ಕೆ ಸಂಬಂಧಿಸಿದಂತೆ ಉಪ ಆಯುಕ್ತರು ಕಂದಾಯ ಹಾಗೂ ದಾವಣಗೆರೆ ಉತ್ತರ-106 ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಕೆ.ಎಸ್. ಬಾಲಕೃಷ್ಣ ಇವರ ನೇತೃತ್ವದಲ್ಲಿ ನಗರದ ನಿಟುವಳ್ಳಿಯ ಆದರ್ಶ ಸ್ಕೂಲ್ ವಿದ್ಯಾರ್ಥಿಗಳಿಗೆ ಮಾ.26 ರಂದು ಮತದಾನದ ಬಗ್ಗೆ ಅರಿವು ಮೂಡಿಸಲಾಯಿತು.ನಂತರ ಆದರ್ಶ ಸ್ಕೂಲ್ ಆವರಣದಿಂದ ನಿಟುವಳ್ಳಿಯ ಎಚ್.ಕೆ.ಆರ್ ವೃತ್ತದ ವರೆಗೆ ಮತದಾನ ಜಾಗೃತಿ ಜಾಥಾ ನಡೆಸಿ, ವಿದ್ಯಾರ್ಥಿಗಳಿಗೆ ಮತದಾನ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಎಚ್.ಕೆ.ಆರ್ ವೃತ್ತದಲ್ಲಿ ವಿದ್ಯಾರ್ಥಿಗಳಿಂದ ಮಾನವ ಸರಪಳಿ ರಚಿಸಿ ನೆರದಿದ್ದ ಜನರಿಗೆ ಚುವಣೆಯಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಿದರು. ಈ ವೇಳೆ ಕಂದಾಯ ಅಧಿಕಾರಿಗಳಾದ ಕೆ. ನಾಗರಾಜ, ಚಂದ್ರಶೇಖರ್, ಶಾಲಾ ಶಿಕ್ಷಕ ವಿನಾಯಕ್ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
