ಬೆಂಗಳೂರು
ಇವತ್ತು ನಡೆಯುತ್ತಿರುವ ಚುನಾವಣೆಗಳು ನೈತಿಕ ಆಧಾರದಲ್ಲಿ ನಡೆಯುತ್ತಿಲ್ಲ.ಜನರು ಎಚ್ಚೆತ್ತುಕೊಂಡು ಮತದಾನ ಮಾಡುವವರಿಗೆ ನೈತಿಕ ಆಧಾರದ ಮೇಲೆ ಚುನಾವಣೆ ನಡೆಯುವುದೂ ಇಲ್ಲ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಪ್ರೆಸ್ಕ್ಲಬ್ಆಫ್ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಮಾಧ್ಯಮ ಮಾತು-ಮಂಥನ” ಸಂವಾದಕಾರ್ಯಕ್ರಮದಲ್ಲಿ ಮಾತನಾಡಿದಅವರು, ಮತದಾರರು ಇನ್ನಾದರೂ ಜಾಗೃತರಾಗಬೇಕಿದೆಎಂದುಅಭಿಪ್ರಾಯಪಟ್ಟರು.ಚುನಾವಣಾಅಕ್ರಮತಡೆಯಲು ಸಿಟಿಜನ್ ಆಯಪ್ ಬಿಡುಗಡೆ ಮಾಡಲಾಗಿದೆ. ಆದರೆ ಸರಿಯಾಗಿಅದರ ಸದುಪಯೋಗಆಗುತ್ತಿಲ್ಲ. ಆ?ಯಪ್ ಮೂಲಕ 1688 ದೂರುಗಳು ಬಂದಿವೆ.
ಅದರಲ್ಲಿ 476 ದೂರುಗಳು ಸರಿಯಾಗಿವೆ. ಆ?ಯಪ್ ಬಗ್ಗೆ ಜನರಲ್ಲಿಅಷ್ಟೊಂದುಅರಿವು ಮೂಡಿಲ್ಲ. ಕೇರಳ ದಲ್ಲಿ 8 ಸಾವಿರ ದೂರುಗಳು ಬಂದಿವೆ. ಈ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಿದೆ. ಚುನಾವಣಾ ಆಮಿಷಗಳು ಹಾಗೂ ಅಕ್ರಮತಡೆಯಲುಜನರ ಸಹಕಾರ ಮುಖ್ಯಎಂದರು.
ಸರ್ಕಾರಿ ಸ್ವಾಮ್ಯದ ಆಸ್ತಿ ಪಾಸ್ತಿ ದುರುಪಯೋಗ, ಸರ್ಕಾರಿ ಅಧಿಕಾರಿಗಳ ಪಕ್ಷಪಾತಿಧೋರಣೆಕಂಡುಬಂದರೆತಕ್ಷಣದೂರು ನೀಡಬಹುದುಎಂದರು.
ಫಲಿತಾಂಶ ಮೂರುಗಂಟೆತಡ : ಸುಪ್ರೀಂಕೋರ್ಟ್ಒಂದು ವಿಧಾನಸಭಾ ವ್ಯಾಪ್ತಿಯ 5 ಮತಗಟ್ಟೆಯ ವಿವಿಪ್ಯಾಟ್ ಮತ್ತು ಇವಿಎಂಗಳಲ್ಲಿ ಬಿದ್ದ ಮತಗಳನ್ನು ತಾಳೆ ಮಾಡಬೇಕುಎಂದು ಆದೇಶಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜೀವ್ಕುಮಾರ್, ಈ ಬಾರಿಯ ಲೋಕಸಭಾಚುನಾವಣೆಯ ಫಲಿತಾಂಶ 3 ಗಂಟೆತಡವಾಗಬಹುದುಎಂದು ಹೇಳಿದರು. ಚುನಾವಣಾ ನೀತಿ ಸಂಹಿತೆಉಲ್ಲಂಘನೆಆರೋಪದಡಿ 263 ಸುದ್ದಿ ಪತ್ರಿಕೆಗಳು, 59 ವಿದ್ಯುನ್ಮಾನ ಮಾಧ್ಯಮಗಳು ಹಾಗೂ 194 ಸಾಮಾಜಿಕ ಜಾಲತಾಣಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಮಾಧ್ಯಮಗಳಲ್ಲಿ ಯಾವರೀತಿಜಾಹೀರಾತು, ಸುದ್ದಿಗಳು ಪ್ರಕಟವಾಗುತ್ತಿವೆಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಎಲ್ಲಾರೀತಿಯ ಮುಂಜಾಗ್ರತಾಕ್ರಮ ಕೈಗೊಳ್ಳಲಾಗಿದೆ.ನಗದು, 8 ಲಕ್ಷ ಲೀಟರ್ ಮದ್ಯ ಸೇರಿದಂತೆ ವಿವಿಧರೀತಿಯ 63 ಕೋಟಿರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕೆಎಲ್ಲಾರೀತಿಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ನಾಗರಿಕರ ಪಾತ್ರ ಬಹಳ ದೊಡ್ಡದು. 1950 ಟೋಲ್ ಫ್ರೀ ನಂಬರ್ ಮೂಲಕವೂ ಜನರುದೂರುಕೊಡಬಹುದು. ಇದವರೆಗೆ ಈ ಟೋಲ್ ಫ್ರೀ ನಂಬರ್ ಮೂಲಕ 3350 ಚುನಾವಣಾಅಕ್ರಮದ ದೂರುಗಳು ಬಂದಿವೆ. ರಾಜ್ಯದಲ್ಲಿರುವ 5.11 ಕೋಟಿ ಮತದಾರರು ಈ ಟೋಲ್ ಫ್ರೀ ನಂಬರ್ ಸದುಪಯೋಗ ಪಡೆಯಬೇಕುಎಂದು ಸಲಹೆ ನೀಡಿದರು.
ರಾಜ್ಯದಲ್ಲಿ 4.30 ಲಕ್ಷ ದಿವ್ಯಾಂಗ ಮತದಾರರನ್ನುಗುರುತಿಸಲಾಗಿದೆ. ದಿವ್ಯಾಂಗ ಮತದಾರರಿಗೂ ಮತಗಟ್ಟೆಯಲ್ಲಿ ವೀಲ್ಚೇರ್ ವ್ಯವಸ್ಥೆ ಮಾಡಲಾಗಿದೆ. ಅದೇರೀತಿ 58.186 ಮತಗಟ್ಟೆಗಳಲ್ಲಿ ದಿವ್ಯಾಂಗರಿಗಾಗಿ ವಾಹನ ವ್ಯವಸ್ಥೆಕಲ್ಪಿಸಲಾಗುತ್ತಿದೆ. ಸ್ವಯಂ ಸೇವಕರ ನೇಮಕ ಸಹ ಮಾಡಲಾಗಿದೆಎಂದು ಮಾಹಿತಿ ನೀಡಿದರು.
ನೀತಿ ಸಂಹಿತೆಉಲ್ಲಂಘನೆಕುರಿತುಆದಾಯತೆರಿಗೆಆಯುಕ್ತರುದೂರು ನೀಡಿದ್ದಾರೆ. ಇದರ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ಈಗಾಗಲೇ ಪೋಲಿಸ್ ಠಾಣೆಗಳಲ್ಲಿ ದೂರುದಾಖಲಾಗಿದೆ. ಆದಾಯತೆರಿಗೆ ಇಲಾಖೆ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ. ಅವರ ಕೆಲಸ ಮುಂದುವರಿಸಲುಯಾವುದೇಅಡ್ಡಿಇಲ್ಲಎಂದರು.ಈ ವೇಳೆ ಅಪರ ಮುಖ್ಯಚುನಾವಣಾಧಿಕಾರಿಕೆ.ಜಿ.ಜಗದೀಶ್, ಮಾಧ್ಯಮ ವಿಶೇಷ ಅಧಿಕಾರಿ ಹಾಗೂ ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ್, ಉಪ ಮುಖ್ಯಚುನಾವಣಾಧಿಕಾರಿರಾಘವೇಂದ್ರ, ಪ್ರೆಸ್ಕ್ಲಬ್ಅಧ್ಯಕ್ಷರಾದ ಸದಾಶಿವ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








