29 ವರ್ಷದಲ್ಲಿ 16 ಸಾವಿರಕ್ಕೂ ಹೆಚ್ಚು ವಿವಾಹ

ಚಿತ್ರದುರ್ಗ :

      ನಮ್ಮಲ್ಲಿ ಲಕ್ಷೋಪಲಕ್ಷ ದೇವಸ್ಥಾನಗಳಿವೆ. ದೇವಸ್ಥಾನದಲ್ಲಿ ದೇವರ ಉತ್ಸವಗಳು, ಜಾತ್ರೆಗಳು, ರಥೋತ್ಸವಗಳು ನಡೆಯುತ್ತವೆ. ಮಠಗಳಲ್ಲಿ ಧಾರ್ಮಿಕ ಉತ್ಸವಗಳು ನಡೆಯುತ್ತವೆ. ಆದರೆ ಮುರುಘಾಮಠದಲ್ಲಿ ಸಂಸಾರಿಗಳ ಉತ್ಸವವಾದ ಕಲ್ಯಾಣ ಮಹೋತ್ಸವ ನಡೆಯುತ್ತದೆ. ಅಲ್ಲಿ ದೇವರನ್ನು ಅಲಂಕರಿಸಿದರೆ ಇಲ್ಲಿ ವಧು-ವರರನ್ನು ಅಲಂಕರಿಸುತ್ತಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಿಸಿದರು.

       ಬಸವಕೇಂದ್ರ ಶ್ರೀಮುರುಘಾಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಇಪ್ಪತ್ತೊಂಬತ್ತನೇ ವರ್ಷದ ಮೂರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶ್ರೀಗಳು ಮಾತನಾಡಿದರು
ಶ್ರೀಮಠದಲ್ಲಿ ಇದುವರೆಗೆ 16 ಸಾವಿರಕ್ಕು ಹೆಚ್ಚು ಮದುವೆಗಳು ಆಗಿವೆ. ಎಲ್ಲರೂ ಸುಖವಾಗಿದ್ದಾರೆ. ಇದು ಮುರಿಗೆ ಶಾಂತವೀರ ಸ್ವಾಮಿಗಳ ತಪೋಭೂಮಿ.

      ಯಾವುದೇ ಅವಘಡಗಳು ನಡೆಯದಂತೆ ಆಶೀರ್ವಾದ ಸಿಗುತ್ತದೆ. ಕೆಲವು ಕಡೆ ಸಂಬಂಧಗಳನ್ನು ಕಸಿಯುತ್ತವೆ. ನಾವು ಕರುಣೆಯ ಹೃದಯದವರಾಗಬೇಕು. ವಧುವವನ್ನು ಕಾಡುವ ಭೂತ ಎಂದರೆ ವರದಕ್ಷಿಣೆ ಎಂದು ನುಡಿದರು.ಮುಖ್ಯಅತಿಥಿ ದಾವಣಗೆರೆ ಚೇತನ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎನ್.ಓಂಕಾರಪ್ಪ ಮಾತನಾಡಿ, ಈ ಉತ್ಸವವನ್ನು ನೋಡಿದರೆ 12ನೇ ಶತಮಾನದ ಬಸವಣ್ಣನವವರು ಹುಟ್ಟುಹಾಕಿದ ಅನುಭವ ಮಂಟಪ ನೆನಪಿಗೆ ಬರುತ್ತದೆ.

      ಎಲ್ಲ ಸಮಾಜದ ಪ್ರತಿಭಾವಂತರನ್ನು ಅಂದು ಒಗ್ಗೂಡಿಸಿ ಸಮಾನತೆ ಸಾರುವ ಕೆಲಸ ಮಾಡಿದರು. ಅಂದಿನ ಹೋರಾಟದ ಫಲದಿಂದ ಇಂದು ಅದು ಸಾಧ್ಯವಾಗುತ್ತಿದೆ. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಬೇರೆ ಬೇರೆ ಸಮಾಜದ ಸ್ವಾಮಿಗಳನ್ನು ಮಾಡಿ ಆ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದ್ದಾರೆ. ನಾವು ಬಸವತತ್ತ್ವದ ಜೊತೆಯಲ್ಲಿ ಹೋಗಬೇಕಿದೆ. ಮುರುಘಾಮಠ ಸದಾ ಪ್ರಯೋಗಶೀಲವಾಗಿದೆ. ಶರಣರ ಇಂತಹ ಪ್ರಯತ್ನ ಯಾವತ್ತೂ ಸಫಲವಾಗುತ್ತದೆ ಎಂದರು.

        ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಮಾತನಾಡಿ, ಮದುವೆ ಮಾಡಿ ಸಾಲ ತೀರಿಸಲಾಗದೆ ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ. ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಇಂಥ ಆರ್ಥಿಕ ಸಂಕಷ್ಟಗಳಿಂದ ಮುಕ್ತರಾಬೇಕು. ಅತ್ಯಂತ ಸರಳವಾದ ಮಾರ್ಗ ಇದು. ಅತ್ಯಂತ ದೊಡ್ಡ ಕಾರ್ಯ. 12ನೇ ಶತಮಾನದ ಕಾರ್ಯಗಳು ಇಂದು ಮುಂದುವರಿಯುತ್ತಿವೆ ಎಂದು ಹೇಳಿದರು.

        ವೇದಿಕೆಯಲ್ಲಿ ಶ್ರೀ ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಗಳು ಇದ್ದರು. ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಹೊಳಲ್ಕೆರೆಯ ಶ್ರೀ ಬಸವ ಪ್ರಜ್ಞಾನಂದ ಸ್ವಾಮಿಗಳು, ಕೆಇಬಿ ಷಣ್ಮುಖಪ್ಪ, ಪೆಲ್ವಾನ್ ತಿಪ್ಪೇಸ್ವಾಮಿ, ಎನ್.ತಿಪ್ಪಣ್ಣ ಮೊದಲಾದವರಿದ್ದರು.ಈ ಸಂದರ್ಭದಲ್ಲಿ ಗಿರೀಶ (ಕಮ್ಮಾರ) – ಕೊಟ್ರಮ್ಮ (ನಾಯಕ) ಅಂತರ್ಜಾತಿ ಸೇರಿದಂತೆ 28 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನೂತನ ವಧು-ವರರಿಗೆ ಎಂ.ಸಿ.ಕೆ.ಎಸ್. ಫೌಂಡೇಶನ್ ವತಿಯಿಂದ ಉಚಿತ ತಾಳಿ, ವಸ್ತ್ರ ಹಾಗು ಅಲಂಕಾರದ ಕಿಟ್ಟನ್ನು ವಿತರಿಸಲಾಯಿತು.
ಪ್ರಾರಂಭದಲ್ಲಿ ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು.  .ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಪ್ರದೀಪ್‍ಕುಮಾರ್ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link