ಅದಿರು ಸಾಗಿಸಲು ಅನುಮತಿ ಕೊಡಿ

0
9

ಚಿತ್ರದುರ್ಗ

        ಸ್ಥಳೀಯ ಗಣಿಬಾಧಿತ ಟಿಪ್ಪರ್ ಲಾರಿಗಳಿಗೆ ಅದಿರು ಸಾಗಿಸಲು ಅನುವು ಮಾಡಿಕೊಂಡುವುದರ ಮೂಲಕ ನಮ್ಮ ಬದುಕಿಗೆ ಅನುಕೂಲ ಮಾಡಿಕೊಂಡುವಂತೆ ಒತ್ತಾಯಿಸಿ ಶ್ರೀ ತರಳಬಾಳು ಟಿಪ್ಪರ್ ಲಾರಿ ಮಾಲಿಕರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

        ಚಿತ್ರದುರ್ಗ ತಾಲ್ಲೂಕಿನಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಇದರಲ್ಲಿ ಸ್ಥಳಿಯರಿಗೆ ಉದ್ಯೋಗವನ್ನು ನೀಡಿದ ನಂತರ ಹೊರಗಿನವರಿಗೆ ನೀಡಬೇಕೆಂದು ಕಾಯ್ದೆ ಇದ್ದರು ಸಹಾ ಸೆಸಾಗೋವ ಮೈನ್ಸ್ ಕಂಪನಿಯವರು ಕಳೆದ 5 ವರ್ಷದಿಂದ ಸ್ಥಳೀಯರಿಗೆ ಲಾರಿ ಲೋಡ್ ಮಾಡಲು ಆವಕಾಶ ನೀಡಿದೆ ಗೋವಾದಿಂದ ಲಾರಿಗಳನ್ನು ತರಿಸಿಕೊಂಡು ಅದಿರನ್ನು ಸಾಗಾಟ ಮಾಡಲಾಗುತ್ತಿದೆ, ಇದರಿಂದ ಸ್ಥಳೀಯರಿಗೆ ತುಂಬ ತೊಂದರೆಯಾಗಿದೆ. ಜೀವನ ನಿರ್ವಹಣೆ ಕಷ್ಠವಾಗಿದೆ ಎಂದು ತಿಳಿಸಿದ್ದಾರೆ.

       ಈ ವಿಷಯದ ಬಗ್ಗೆ ಸಿರಿಗೆರೆಯ ಶ್ರೀಗಳ ಸಮ್ಮಖದಲ್ಲಿ ಅದಿರು ಸಾಗಾಟ ಮಾಡುವುದರ ಬಗ್ಗೆ ಗೇಟ್ 1 ರಿಂದ ಅದಿರು ಸಾಗಾಟ ಮಾಡುವಂತೆ ಸೂಚನೆ ನೀಡಿದ್ದರು ಸಹ ಕಂಪನಿಯವರು ಶ್ರೀಗಳ ಆದೇಶವನ್ನು ಧಿಕ್ಕರಿಸಿ ಗೇಟ್ 2 ರಿಂದ ದೊಡ್ಡದಾದ ಲಾರಿಗಳ ಮೂಲಕ ಅದಿರನ್ನು ಸಾಗಾಟ ಮಾಡಲಾಗುತ್ತಿದೆ, ಇದರಿಂದ ನಮ ಬದುಕಿಗೆ ತೊಂದರೆಯಾಗಿದೆ, ಗೇಟ್ 1 ರಲ್ಲಿ ಟಿಪ್ಪರ್ ಲಾರಿಗಳಿಗೆ ಕೆಲಸ ಇಲ್ಲದೆ ಸುಮಾರು 320 ಲಾರಿಗಳ ಮಾಲಿಕರು ಮತ್ತು ಚಾಲಕರು ಇದನ್ನು ನಂಬಿಕೊಂಡಿರುವ ಸುಮಾರು 3000ಕ್ಕೂ ಅಧಿಕ ಜನತೆ ಬೀದಿಗೆ ಬರಲಿದ್ದಾರೆ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

       320 ಟಿಪ್ಪರ್ ಲಾರಿಗಳಲ್ಲಿ 120 ಲಾರಿಗಳಿಗಾದರೂ ಅದಿರನ್ನು ಸಾಗಟ ಮಾಡಲು ಅವಕಾಶ ನೀಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದು, ಕಂಪನಿಯವರು ದೊಡ್ಡದಾದ ಲಾರಿಗಳ ಮೂಲಕ ಅದಿರನ್ನು ಗ್ರಾಮಾಂತರ ಪ್ರದೇಶದ ಮೂಲಕ ಸಾಗಾಟ ಮಾಡಿದರೆ, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಪರಿಸರ ನಾಶವಾಗುತ್ತಿದೆ. ಎಂಬ ಸಬೂಬನ್ನು ಹೇಳುವುದರ ಮೂಲಕ ರೈಲ್ವೆ ಮೂಲಕ ಸಾಗಾಟ ಮಾಡಲಾಗುತ್ತದೆ ಇದರಿಂದ ಗ್ರಾಮದ ಜನತೆಗೆ ತೊಂದರೆಯಾಗುತ್ತದೆ ಎಂದು ತಮ್ಮ ನೋವನ್ನು ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕುಮಾರ್ ನಾಯ್ಕ್, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶೀ ಓಂಕಾರ್ ಮೂರ್ತಿ, ಹನುಮಂತಪ್ಪ, ಮಂಜುನಾಥ್, ವಿಶ್ವನಾಥ್, ಸತ್ ವುಲ್ಲಾ ಸೇರಿದಂತೆ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here