ರೈತರು ಸೊರಗಿದರೆ ಇಡೀ ದೇಶವೆ ಸೊರಗುತ್ತದೆ

ದೊಡ್ಡೇರಿ

      ರೈತರು ವ್ಯವಸಾಯದ ಜೊತೆಗೆ ಉಪ ಕಸುಬಾಗಿರುವ ಹೈನುಗಾರಿಕೆಯನ್ನು ಅಳವಡಿಸಿಕೊಳ್ಳಬೇಕು. ರೈತರು ಸೊರಗಿದರೆ, ದೇಶವೇ ಸೊರಗುತ್ತದೆ ಎಂದು ಜಿಪಂ ಸದಸ್ಯ ಹೂವಿನ ಚೌಡಪ್ಪ ತಿಳಿಸಿದರು.

    ಅವರು ಜಿ.ಪಂ ಆಡಳಿತ ಮತ್ತು ತಾ.ಪಂ ಆಡಳಿತ ಮಧುಗಿರಿ ಹಾಗೂ ಪಶುಸಂಗೋಪನಾ ಇಲಾಖೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಧುಗಿರಿ, ತುಮಕೂರು ಹಾಲು ಒಕ್ಕೂಟ ಮಲ್ಲಸಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ದೊಡ್ಡೇರಿ ಹೋಬಳಿ ಹಾಲು ಉತ್ಪಾದಕ ಸಹಕಾರ ಸಂಘಗಳ ವತಿಯಿಂದ ಬಡವನ ಹಳ್ಳಿ ಹೋಬಳಿ ಮಟ್ಟದ ಮಿಶ್ರತಳಿ ಕರುಗಳ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ದಿನಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಿಶ್ರತಳಿ ಹೆಣ್ಣು ಕರುಗಳೆ ಬೇಕು ಎಂಬ ಬಯಕೆ ಇರುವುದು ಸಾಮಾನ್ಯವಾಗಿದೆ. ಸರ್ಕಾರವು ಶೇಕಡ 92 ರಷ್ಟು ಮಿಶ್ರತಳಿ ಹೆಣ್ಣು ಕರು ಪಡೆಯುವ ಹಾಗೆ ತಾಂತ್ರಿಕತೆ ಸೃಷ್ಟಿಸಿರುವುದು ನಿಜಕ್ಕೂ ಅಭಿನಂದನೀಯ ಎಂದು ತಿಳಿಸಿದರು.

ಜಿಲ್ಲಾ ಹಾಲು ಉತ್ಪಾದಕರ ಮಹಾ ಮಂಡಳಿಯ ನಿರ್ದೇಶಕ ಕೊಂಡವಾಡಿಚಂದ್ರಶೇಖರ್ ಉತ್ತಮ ಕರುಗಳಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಸದಸ್ಯರಾದ ಬಸವರಾಜು, ಜಿ.ಕೃಷ್ಣಮೂರ್ತಿ, ಕಾಂತರಾಜು ದಬ್ಬೆಘಟ್ಟ, ನಾಗರಾಜು (ಗಬಾಲಿ), ನೂರ್‍ಜಾನ್, ರಾಮಚಂದ್ರಪ್ಪ ಜಕ್ಕೇನಹಳ್ಳಿ, ಪಶುಸಂಗೋಪನಾ ಇಲಾಖಾ ಅಧಿಕಾರಿಗಳಾದ ನಾಗಭೂಷಣ್, ಗಿರೀಶ್, ಶಂಕರ್‍ನಾಗ್ ಮಧುಗಿರಿ ತಾಲ್ಲೂಕು ಡೈರಿವಿಸ್ತರಣಾಧಿಕಾರಿಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ರೈತರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link