ಎಂ ಎನ್ ಕೋಟೆ :
ತುಮಕೂರು ಜಿಲ್ಲೆಯ ಕಲೆ ಸಾಹಿತ್ಯ ಸಂಸ್ಕೃತಿಯ ತವರೂರು ಗುಬ್ಬಿ ತಾಲ್ಲೂಕು ಹಲವು ರಾಜಮನೆತನಗಳ ಸ್ಥಳೀಯ ಪಾಳೇಗಾರರ ಆಳ್ವಿಕೆಯ ಬೀಡು ಕಲೆ ಸಾಹಿತ್ಯ ಸಂಸ್ಕೃತಿಗೆ ವಿಶೇಷವಾದ ಕೊಡುಗೆ ನೀಡಿ ಹಲವು ದೇವಾಲಯಗಳನ್ನು ನಿರ್ಮಿಸಿ ಪಾವನರಾಗಿದ್ದಾರೆ.
ಈ ಪೈಕಿ ಹಾಗಲವಾಡಿಯ ಶ್ರೀ ಕರಿಯಮ್ಮ ದೇವಿಯ ಸನ್ನಿಧಿಯೂ ಒಂದು. ಹಲವು ಶತಮಾನಗಳ ಐತಿಹಾಸಿಕ ತಾಣ ಹಾಗಲವಾಡಿ ಗ್ರಾಮದ ಗ್ರಾಮದೇವತೆ ಕರಿಯಮ್ಮ ದೇವಿ ಕೆರೆಯ ಮುಂಭಾಗದಲ್ಲಿ ನೆಲೆಸಿದ್ದಾಳೆ. ಬರುವ ದೇವಾನು ದೇವತೆಗಳು ಈ ಕೆರೆಯಲ್ಲಿ ಈಗಲೂ ಗಂಗಾಸ್ನಾನ ಮಾಡುಲೂ ಬರುತ್ತವೆ.
ಹಾಗಲವಾಡಿ ಗ್ರಾಮ ಗ್ರಾಮದೇವತೆ ಶ್ರೀ ಕರಿಯಮ್ಮ ತಾಯಿ ಭಕ್ತರು ಪಾಲಿನ ನಿಜದೇವ ಈ ಮಾಹಾ ಮಾತೆ ಎಂದು ನಂಬಿದ್ದಾರೆ. ಮಾ. 24ರಂದುಶ್ರೀ ಕರಿಯಮ್ಮ ದೇವಿಯ ಮಹಾ ರಥೋತ್ಸವ ನಡೆಯಲಿದೆ.
ಹಾಗಲವಾಡಿ ಐತಿಹಾಸಿಕವಾಗಿ ಪ್ರಸಿದ್ದಿ ಪಡೆದ ಸಂಸ್ಥಾನವಾಗಿದೆ. ಹಾಗಲವಾಡಿ ಪಾಳೇಗಾರರು ಆಳ್ವಿಕೆ ಮಾಡಿದ ಸಂಸ್ಥಾನ ಈ ಕ್ಷೇತ್ರ. ಪಾಳೇಗಾರರ ಆಳ್ವಿಕೆಯಿಂದ ಪ್ರಖ್ಯಾತ ಪಡೆದ ದೇವಾಲಯಗಳಲ್ಲಿ ಕರಿಯಮ್ಮ ದೇವಾಲಯ , ಗುರುಪಾಕ್ಷ ದೇವಾಲಯ , ಜುಂಜಪ್ಪಸ್ವಾಮಿ , ರಾಮೇಶ್ವರ ದೇವಾಲಯ ಇನ್ನು ಅನೇಕ ದೇವಾಲಯಗಳು ಪ್ರಮುಖವಾಗಿದೆ.
ಐತಿಹ್ಯವೇನು
ಶ್ರೀ ಕರಿಯಮ್ಮ ದೇವಾಲಯಕ್ಕೆ ಸುಮಾರು 300 ವರ್ಷಗಳ ಇತಿಹಾಸವಿದೆ. ಈ ಹಿಂದೆ ಹಾಗಲವಾಡಿ ಗ್ರಾಮವನ್ನು ಮುದ್ದಿಯಪ್ಪ ನಾಯಕ ಎಂಬ ಪಾಳೇಗಾರ ಈ ಊರನ್ನು ಆಳ್ವಿಕೆ ಮಾಡುತ್ತಿದ್ದ.ಹಾಗಲವಾಡಿ ಪಾಳೇಗಾರರು ಕೆರೆಕಟ್ಟುವಾಗ ಈ ತಾಯಿ ಇಲ್ಲಿ ನೆಲೆಗೊಂಡಿದ್ದಾಳೆ.
ಪಾಳೇಗಾರರು ಆರಾಧಿಸುವ ಅಗ್ರಗಣ್ಯರಲ್ಲಿ ಈ ತಾಯಿಯು ದೇವಾಲಯ ಪ್ರಮುಖವಾಗಿದೆ. ಮೋಟಿಹಳ್ಳಿ ಗ್ರಾಮದಿಂದ ಬಂದು ಹಾಗಲವಾಡಿಯಲ್ಲಿ ಬಂದು ಗುಂಡದಕಲ್ಲು ಆಗಿ ಬಂದು ಈ ತಾಯಿ ನೆಲೆಸಿದ್ದಾಳೆ. 1760 ಇಸವಿಯಲ್ಲಿ ಮುದ್ದಿಯಪ್ಪ ನಾಯಕ ಕೆರೆಕಟ್ಟಿಸಲು ಬಂದಾಗ ಒಂದು ಹೆಣ್ಣು ಮಗುವಿನ ಮೇಲೆ ಬಂದು ದೇವಿ ಹೇಳಿದಾಗ ನಾನು ಗುಂಡು ಕಲ್ಲಾಗಿ ಬಂದು ಇಲ್ಲಿ ನೆಲೆಸಿದ್ದಾನೆ. ನಾನು ಇರುವ ಜಾಗದಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಬೇಕು. ಎಂದು ಹೇಳಿದಾಗ
ಅದೇ ಜಾಗದಲ್ಲಿ ದೇವಾಲಯವನ್ನು ನಿರ್ಮಾಣ ಮಾಡಿದರು. ನಂತರ ಹಾಗಲವಾಡಿ ಗ್ರಾಮಸ್ತರು ಅಜುಬಾಜು ಗ್ರಾಮಸ್ತರು ಸೇರಿ ಪುಟ್ಟದಾದ ದೇಗುಲ ನಿರ್ಮಾಣ ಮಾಡಿದರು. ನಂತರ ಹಂತ ಹಂತವಾಗಿ ದೇಗುಲ ನಿರ್ಮಿಸಿದರು. ದೇವಾಲಯ ಶಿಥೀಲಾವ್ಯಸ್ಥೆ ತಲುಪಿದಾಗ ಇಂದಿನ ಜನರು ಮನಗಂಡು ಸಮಿತಿ ರಚಿಸಿ ದೇಗುಲವನ್ನು ಹೊಸದಾಗಿ ನಿರ್ಮಿಸಿದರು. ನಂತರ ಪ್ರತಿ ವರ್ಷವು ಕೂಡ ಶಿವರಾತ್ರಿ ಹಬ್ಬ ಮುಗಿದ 15ದಿನಗಳಿಗೆ ಈ ಜಾತ್ರಾ ಮೋತ್ಸವ ನಡೆಯುತ್ತದೆ. ಹಿಂದಿನ ಕಾಲದಿಂದಲು ಈ ಜಾತ್ರೆ ನಡೆಯುತ್ತಲೆ ಬಂದಿದೆ.
ಶ್ರೀ ಕೋಲ್ಲಾಪುರದಮ್ಮ ದೇವಾಲಯದ ಪ್ರಥಮದಲ್ಲಿ ಅಮ್ಮನವರ ಬಲ ಪಕ್ಕದಲ್ಲಿ ಗಂಡು ಬೆತ್ತಾಳ ಹಾಗೂ ಎಡ ಬಾಗದಲ್ಲಿ ಹೆಣ್ಣು ಬೆತ್ತಾಳವಿದ್ದು ಅಮ್ಮನವರಿಗೆ ಪ್ರಭಾಲವಾದ ಶಕ್ತಿಯನ್ನು ತುಂಬುತ್ತದೆ. ಮುಂಬಾಗದಲ್ಲಿ ಅವಸರಮ್ಮ , ದಾಳಿಯಮ್ಮ , ದೇವರುಗಳು ಅಮ್ಮನವರಿಗೆ ಪ್ರಭಾಲ ಅಸ್ತ್ರವಾಗಿದ್ದು ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಪ್ರತಿ ಶುಕ್ರವಾರ ಹಾಗು ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.
ಈ ಗ್ರಾಮವನ್ನು ಮುದ್ದಿಯಪ್ಪ ನಾಯಕ ಎಂಬ ರಾಜ ಆಳ್ವಿಕೆಯನ್ನು ಮಾಡುತ್ತಿದ್ದ ಈ ನಾಯಕನಿಂದಲೇ ಈ ಗ್ರಾಮಕ್ಕೆ ಹಾಗಲವಾಡಿ ಎಂಬ ಹೆಸರು ಬಂದಿದೆ. ಈ ದೇವಾಲಯದ ಸನ್ನಿಧಿಯಲ್ಲಿ ಹಾಗೂ ಬರುವ ಭಕ್ತರಿಗೆ ಯಾವುದೇ ತೊಂದರೆಗಳು ಇದ್ದರೂ ಕೂಡ ತಮ್ಮ ಕಷ್ಠಗಳನ್ನು ಹೇಳಿಕೊಂಡರೆ ಅವರ ಕಷ್ಠಗಳು ನಿಜಕ್ಕೂ ಕೂಡ ನೆರವಹಿಸುತ್ತದೆ ಎಂಬುಂದು ಭಕ್ತರ ಮಾತು.
ಶತಮಾನಗಳಿಂದ ನಂಬಿ ಬಂದ ಭಕ್ತರನ್ನು ಎಂದಿಗೂ ನಿರಾಸೆಗೊಳಿಸಿಲ್ಲ ಹರಕೆ ಕೊಂಡಿದ್ದನ್ನು ನೆರವೇರಿಸದೆ ಬಿಡುವುದಿಲ್ಲ ಎಂಬ ದೃಢ ವಿಶ್ವಾಸ ಇಲ್ಲಿದೆ. ಜೂತೆಗೆ ನಿರ್ಲಕ್ಷ ತಾತ್ಸರ ಮಾಡಿದರೆ ಶಿಕ್ಷೆಯ ನಿಶ್ವಿತ ಎನ್ನುವ ಭಯ ಭಕ್ತಿ ಈ ಮೂಗನಾಯಕನಕೋಟೆ ಭಕ್ತರ ಮನದಲ್ಲಿದೆ.
ಜಾತ್ರೆಯ ವಿಶೇಷತೆಗಳು
ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವ 9 ದಿವಸಗಳ ಕಾಲ ನಡೆಯಲದ್ದು ಪ್ರಥಮದಲ್ಲಿ ಮಾ,22ರಂದು ಬಾನದ ಸೇವೆ , ಮಾ.23ರಂದು ಆರತಿ ಅಗ್ನಿಕೊಂಡ , ಮಾ.24ರಂದು ಭಾನುವಾರ ಬೆಳಗಿನ ಜಾವ ಬಾಯಿಬೀಗ ಮಾಹಾ ರಥೋತ್ಸವ ನೆಡೆಯಲಿದೆ. ಮಾ.25ರಂದು ಸಿಡಿ ಉತ್ಸವ ಮಾ.26ರಂದು ಕೋಲ್ಲಾಪುರದಮ್ಮನ ತೇರು ನಡೆಯಲಿದ್ದು ಮಾ.27ರಂದು ಅಮ್ಮನವರ ಸಿಂಹವಾಹನೋತ್ಸವ ಮಾ.28ರಂದು ಬೆಳ್ಳಿಪಲ್ಲಕ್ಕಿ ಉತ್ಸವ ಮಾ, 29ರಂದು ವ್ಯಾಘ್ರಸೇವೆ ಗಂಗಾಸ್ನಾನ ಮಾ.30 ರಂದು ಗವಿ ಸೇವೆ ನಡೆಯಲಿದೆ.
ನಂಬಿಕೆ ಆತ್ಮವಿಶ್ವಾಸ ಅಚಲ , ಬಕ್ತಿ , ಶ್ರದ್ಧೆ ಮತ್ತು ಆಚಾರ ವಿಚಾರಗಳ ಉಸಿರಾಗಿರುವ ಗ್ರಾಮೀಣ ಜನಜೀವ ಜೀವಿಗಳಿಗೆ ಆಗ್ರಸ್ತಾನ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮದ ಶ್ರೀ ಕರಿಯಮ್ಮ ದೇವರನ್ನು ಹತ್ತಾರು ಗ್ರಾಮಗಳು ಆರಾಧಿಸುವ ಹತ್ತಾರು ಗ್ರಾಮಗಳ ನಂಬಿಕೆ ಮತ್ತು ಆಚರಣೆ ಕೌತುಮಯವಾಗಿದೆ.
ದೇವಾಲಯಕ್ಕೆ ತಲುಪುವುದು ಹೇಗೆ…..?
ಗುಬ್ಬಿ ತಾಲ್ಲೂಕಿನ ಪಡುವಣ ದಿಕ್ಕಿನಲ್ಲಿರುವ ಈ ಐತಿಹಾಸಿಕ ತಾಣ ಹಾಗಲವಾಡಿ ಶ್ರೀ ಕರಿಯಮ್ಮ ದೇವಸ್ಥಾನಕ್ಕೆ ರಾಜಧಾನಿ ಬೆಂಗಳೂರಿಗೆ 120 ಕಿ.ಮೀ.ಜಿಲ್ಲಾ ಕೇಂದ್ರ ತುಮಕೂರಿಗೆ 50 ಕಿ.ಮೀ.ಹಾಗೂ ತಾಲ್ಲೂಕ್ ಕೇಂದ್ರ ಗುಬ್ಬಿಗೆ 40 ಕೀ.ಮೀ. ಹೋಬಳಿ ಕೇಂದ್ರ ನಿಟ್ಟೂರಿಗೆ 20 ಕಿ.ಮೀ. ದೂರದಲ್ಲಿದೆ.ಈ ಎಲ್ಲಾ ಭಾಗಗಳಿಂದ ಸದಾ ಬಸ್ ಸೌಕರ್ಯಗಳು ಇವೆ.ಪ್ರತಿ ಅರ್ಧಗಂಟೆಗೊಮ್ಮೆ ಖಾಸಗಿ ಕೆ ಎಸ್ ಆರ್ ಟಿ ಸಿ ಬಸ್ ಸೌಲಭ್ಯವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
