ಬೆಂಗಳೂರು
ಹವಾಮಾನದಲ್ಲಿ ವೈಪರೀತ್ಯ ಕಂಡು ಬಂದಿರುವುದರಿಂದ ಗಢ ಗಢ ನಡುಗಿಸುವ ಚಳಿ ಮುಗಿವ ಮುನ್ನವೇ ಧಗಧಗ ಬಿಸಿಲು ಬೆವರಿಳಿಸ ತೊಡಗಿದೆ ಉತ್ತರ ಕರ್ನಾಟಕ ಹೈದರಾಬಾದ್ ಕರ್ನಾಟಕ ಕರಾವಳಿ ಪ್ರದೇಶಗಳಲ್ಲಿ ಸುಡು ಬಿಸಿಲು ಪ್ರಕರವಾಗಿದ್ದರೆ ರಾಜಧಾನಿ ಬೆಂಗಳೂರು ಸೇರಿ ಮೈಸೂರು ಭಾಗಗಳಲ್ಲಿ ಬೇಸಿಗೆಯ ಶಾಖ ಹೆಚ್ಚಾಗ ತೊಡಗಿದೆ.
ಚಳಿಗಾಲದ ಅವಧಿಯೇ ಮುಗಿದಿಲ್ಲ. ಆಗಲೇ ಬೇಸಿಗೆ ಬಂದು ಬಿಟ್ಟಿದೆ. ಶಿವರಾತ್ರಿ ಇನ್ನೂ 20 ದಿನಗಳು ಇರುವಾಗಲೇ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೆತ್ತಿಯ ಮೇಲೆ ಸುಡುವ ಸೂರ್ಯನ ಬಿಸಿಲಿನ ತಾಪದಿಂದ ಜನ ಚಡಪಡಿಸುವಂತಾಗಿದೆ. ಇದ್ದಕಿದ್ದಂತೆ ಕೆಲ ದಿನಗಳಿಂದ ವಾತಾವರಣದಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದೆ.
ಬಿಸಿಲಿನ ಬೇಗೆ ತಾಳಲಾರದೇ ತಂಪು ಪಾನೀಯಗಳಿಗೆ ಜನ ಮಾರು ಮೋರಿ ಹೋಗಿದ್ದರೆ ಕಲ್ಲಂಗಡಿ ಖರ್ಬೂಜ ಇನ್ನಿತ ತಂಪು ನೀಡುವ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಬಿರುಸಿನ ವ್ಯಾಪಾರ ನಡೆಯುತ್ತಿದೆ ಮಧ್ಯಾಹ್ನದ ವೇಳೆ ಜನಸಂದಣಿ ಕಡಿಮೆಯಾಗುತ್ತಿದ್ದು ನೆರಳನ್ನು ಜನ ಆಶ್ರಯಿಸುತ್ತಿದ್ದಾರೆ
ಜನ ಬಿಸಿಲಿನ ಬೇಗೆ ತಾಳಲಾರದೆ ತಂಪು ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ. ದೇಹವನ್ನು ತಂಪು ಮಾಡಿಕೊಳ್ಳಲು ಜನರು ಎಳನೀರು, ಕಲ್ಲಂಗಡಿ, ದ್ರಾಕ್ಷಿ, ಕರ್ಬೂಜಾ, ಪಪ್ಪಾಯಿ, ಕಿತ್ತಳೆ ಹಣ್ಣುಗಳು ಸೇರಿದಂತೆ ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ಸೋಡಾ, ಸರಬತ್ತಿನಂತಹ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಕಾರಣ ಮಹಿಳೆಯರು, ಮಕ್ಕಳು, ವೃದ್ಧರು ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಯುವತಿಯರು ಮುಖಕ್ಕೆ ಸ್ಕಾರ್ಪ್ ಹಾಕಿಕೊಂಡು ಓಡಾಡುವಂತಾಗಿದೆ.ಈ ಸಲ ಗರಿಷ್ಠ ತಾಪಮಾನ ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆ ಕಂಡಿದೆ. ಹಾಗಾಗಿ ಚಳಿ ಮುಗಿಯುವ ಮುನ್ನವೇ ಧಗ ಧಗ ಧಗೆ ಶುರುವಾಗಿದೆ.
ರಾಜ್ಯದಲ್ಲಿ ಕಳೆದ ನಾಲ್ಕಾರು ದಿನಗಳಿಂದ ಒಣ ಹವೆ ಮುಂದುವರಿದಿದೆ. ಬಿಸಿಲ ಧಗೆಯ ಪ್ರಮಾಣ 33 ಡಿಗ್ರಿ ಸೆಲ್ಸಿಯಸ್ ನಿಂದ 36 ಡಿಗ್ರಿ ಸೆಲ್ಸಿಯಸ್ ವರೆಗಿನ ಆಸುಪಾಸಿನಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲಿನ ಪ್ರಮಾಣ ಅಧಿಕ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹವಾಮಾನ ವೈಪರೀತ್ಯವೇ ತಾಪಮಾನ ಹೆಚ್ಚಳಕ್ಕೆ ಕಾರಣ ಹವಾಮಾನ ತಜ್ಞರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
