ಫೆ.23ರಿಂದ ಮತದಾರರಪಟ್ಟಿ ವಿಶೇಷ ಪರಿಷ್ಕರಣೆ ಸೇರ್ಪಡೆ

ಚಿತ್ರದುರ್ಗ;

      ಮುಂಬರುವ ಲೋಕಸಭಾಚುನಾವಣೆಗೆ ಸಿದ್ದತೆ ನಡೆಯುತ್ತಿದ್ದು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯನ್ನು ಫೆಬ್ರವರಿ 23, 24 ಹಾಗೂ ಮಾರ್ಚ್ 2 ಮತ್ತು 3 ರ ಶನಿವಾರ ಹಾಗೂ ಭಾನುವಾರಗಳಂದು ಎಲ್ಲಾ ಮತಗಟ್ಟೆಗಳಲ್ಲಿ ಹಮಿಕೊಳ್ಳಲಾಗುತ್ತಿದೆ ಎಂದುಜಿಲ್ಲಾಧಿಕಾರಿ ಹಾಗೂ ಜಿಲ್ಲಾಚುನಾವಣಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು

      ಯಾರಿಗೆ 2019 ರಜನವರಿ 1 ಕ್ಕೆ 18 ವರ್ಷ ತುಂಬುತ್ತದೆ, ಈ ಯುವ ಮತದಾರರು ಸೇರಿದಂತೆ ವರ್ಗಾವಣೆ, ತಿದ್ದುಪಡಿಗಳಿದ್ದಲ್ಲಿ ಹಾಗೂ ತಮ್ಮ ಹೆಸರು ಭಾವಚಿತ್ರವಿರುವ ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದಲ್ಲಿ ಸೇರ್ಪಡೆ ಮಾಡಲು ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು

       ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಅಥವಾ ಇಲ್ಲವೋ ಎಂದು ಖಾತರಿ ಮಾಡಿಕೊಳ್ಳಬೇಕಾಗಿದೆ. ನಿಮ್ಮಲ್ಲಿ ಎಫಿಕ್‍ಕಾರ್ಡ್‍ಇದ್ದರೆ ಸಾಲದು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಾತರಿಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಈ ವಿಶೇಷ ಪರಿಷ್ಕರಣೆ ದಿನಗಳಂದು ಎಲ್ಲಾ ಮತಗಟ್ಟೆಗಳಲ್ಲಿ ಬಿ.ಎಲ್.ಓ.ಗಳು ಲಬ್ಯವಿದ್ದು ತಮ್ಮ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಇಂತಹ ಅವಕಾಶವನ್ನು ಎಲ್ಲಾ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

      ಜಿಲ್ಲೆಯಲ್ಲಿ ಜನಸಂಖ್ಯೆಯ ಬೆಳವಣಿಗೆ ದರವನ್ನಾಧರಿಸಿ 60 ಸಾವಿರಯುವ ಮತದಾರರು ಇರಬಹುದೆಂದು ಅಂದಾಜಿಸಲಾಗಿದೆ. ಹೊಸದಾಗಿ 27231 ಮತದಾರರು ನೊಂದಾಯಿಸಿದ್ದಾರೆ. ಹೊಸದಾಗಿಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕಾಲೇಜುಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆದರೂ ಸಹ ವಿಶೇಷ ಪರಿಷ್ಕರಣಾ ದಿನಗಳಲ್ಲಿ ಯುವ ಮತದಾರರಿಗೆ ಆದ್ಯತೆ ನೀಡಲಾಗುತ್ತದೆ ಎಂದರು.

       ಜಿಲ್ಲೆಯಲ್ಲಿ ವಿಶೇಷ ಚೇತನ ಮತದಾರರು 34 ಸಾವಿರ ಇದ್ದು ಇದರಲ್ಲಿ ಈಗಾಗಲೇ 14541 ವಿಕಲಚೇತನ ಮತದಾರರು ಎಂದು ಗುರುತಿಸಲಾಗಿದೆ. ಮತದಾನದ ವೇಳೆ ಈ ವಿಶೇಷ ಚೇತನ ಮತದಾರರಿಗೆ, ಅವರಿಗೆತಕ್ಕಂತೆ ಪರಿಕರಗಳು ಹಾಗೂ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಆದ್ದರಿಂದ ವಿಕಲಚೇತನರ ಮತದಾರರೆಂದು ಗುರುತಿಸದೆ ಇರುವ ಮತದಾರರು ವಿವರವನ್ನು ತಮ್ಮ ಬಿ.ಎಲ್.ಓ.ಗಳಿಗೆ ನೀಡಲು ತಿಳಿಸಿದರು.

      ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಿದ್ದತೆಗಳು ನಡೆಯುತ್ತಿದ್ದು ಈಗಾಗಲೆ ಸೆಕ್ಟರ್ ಅಧಿಕಾರಿಗಳಿಗೆ ಅಗತ್ಯವಿರುವ ತರಬೇತಿ ಮತ್ತು ವಿವಿಧ ಹಂತದ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಹಾಗೂ ಜಿಲ್ಲೆಗೆ ಅಗತ್ಯವಿರುವ ವಿದ್ಯುನ್ಮಾನ ಮತಯಂತ್ರ, ವಿ.ವಿ.ಪ್ಯಾಟ್‍ಗಳು ಇದ್ದು ಈಗಾಗಲೇ ಪರಿಶೀಲನೆ ಹಂತವನ್ನು ಮುಕ್ತಾಯ ಮಾಡಲಾಗಿದೆ.

     ಹಾಗೂ ವಿದ್ಯುನ್ಮಾನ ಮತಯಂತ್ರ ಮತ್ತು ವಿ.ವಿ.ಪ್ಯಾಟ್ ಬಗ್ಗೆ ಮತದಾರರಿಗೆ ಪ್ರಾತ್ಯಾಕ್ಷಿತೆಯ ಮೂಲಕ ಅರಿವು ಮೂಡಿಸಲಾಗುತ್ತಿದೆ. ಈ ಬಗ್ಗೆ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಪ್ರಾತ್ಯಾಕ್ತಿತೆ ಮೂಲಕ ಅರಿವು ಮೂಡಿಸುವ ಉದ್ದೇಶ ಇದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.ಉಪವಿಭಾಗಾಧಿಕಾರಿ ವಿಜಯಕುಮಾರ್, ಚುನಾವಣಾ ತಹಶೀಲ್ದಾರ್ ಪ್ರತಿಭಾ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap