ಬೆಂಗಳೂರು:
ಬಿಡದಿಯ ಸ್ವಾಮಿ ನಿತ್ಯಾನಂದ ಇಷ್ಟು ದಿನ ತಾನಾಯಿತು ತನ್ನ ಆಶ್ರಮವಾಯಿತು ಎಂದು ಇದ್ದವರು ಇದ್ದಕಿದ್ದಂತೆ ಸುದ್ದಿಗೆ ಬಂದಿದ್ದಾರೆ. ಅವರು ಗಾಂಜಾ ಸೇವನೆ ಬಗ್ಗೆ ಮಾಡಿದ ಪ್ರವಚನದ ವಿಡಿಯೋ ವೈರಲ್ ಆದ ನಂತರ ನಿತ್ಯಾನಂದನಿಗೆ ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ .
ಗಾಂಜಾ ಸೇದುವುದರಿಂದ ಧ್ಯಾನಕ್ಕೆ ಸಹಾಯವಾಗುತ್ತದೆ ಎಂದು ನಿತ್ಯಾನಂದ ಸ್ವಾಮಿ ಭಕ್ತರಿಗೆ ಹೇಳುತ್ತಿರುವ ಬೋಧನೆ ವೈರಲ್ ಆಗಿದ್ದು ಈ ಸಂಬಂಧ ಸಾರ್ವಜನಿಕರಿಂದ ದೂರು ಬಂದಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿಬಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ ಮತ್ತು ದೇವಮಾನವನಿಗೆ ಕೃಷ್ಣ ಜನ್ಮಸ್ಥಾನ ತೋರಿಸಿ ಎಂದು ಮೊರೆ ಇಟ್ಟಿದ್ದಾರೆ . ಈ ಸಂಬಂಧ ನಿತ್ಯಾನಂದನಿಗೆ ಸಿಸಿಬಿಯಿಂದ ನೋಟಿಸ್ ಜಾರಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
