ತ್ರಿಪದಿಗಳ ಮೂಲಕ ಬದುಕಿನ ಮಹತ್ವವನ್ನು ಸಾರಿದ ಏಕೈಕ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ

ಚಳ್ಳಕೆರೆ

         ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಎಲ್ಲಾ ಸಮುದಾಯಗಳೊಂದಿಗೆ ಸೌಹಾರ್ಧಿತವಾಗಿ ಜೀವನ ನಡೆಸುತ್ತಿರುವ ಕುಂಬಾರ ಸಮಾಜ ರಾಜಕೀಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಇನ್ನೂ ಹೆಚ್ಚಿನ ಪ್ರಾದಾನ್ಯತೆಯನ್ನು ಪಡೆಯಬೇಕಿದೆ. ಶ್ರೇಷ್ಠ ದಾರ್ಶನಿಕ ಸರ್ವಜ್ಞಕ ಆದರ್ಶಗಳೇ ಈ ಸಮುದಾಯಕ್ಕೆ ದಿಕ್ಸೂಚಿ ಎಂದು ಕ್ಷೇತ್ರದ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

       ಅವರು, ಶನಿವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿವ ಮೂಲ ಉದ್ಘಾಟಿಸಿ ಮಾತನಾಡಿದರು. 16ನೇ ಶತಮಾನದಲ್ಲಿ ಎಲ್ಲಾ ಸಮುದಾಯದ ಜ್ಞಾನದ ದಿಕ್ಕನ್ನೇ ಬದಲಾಯಿಸಿದ ಕೀರ್ತಿ ಸರ್ವಜ್ಞರವರದ್ದು, ಜನಸಾಮಾನ್ಯರೂ ಅರ್ಥೈಸಿಕೊಳ್ಳುವಂತಹ, ಬದುಕಿನ ನೈಜ್ಯ ಸ್ಥಿತಿಯನ್ನು ತಮ್ಮದೇಯಾದ ದಾಟಿಯಲ್ಲಿ ಕೇವಲ ಮೂರೇ ಮೂರು ಸಾಲುಗಳಲ್ಲಿ ರಚಿಸಿ ಸಮಾಜದಲ್ಲಿ ಸಾಮರಸ್ಯ ಮತ್ತು ದಾರ್ಮಿಕ ಜಾಗೃತಿಯನ್ನು ಉಂಟು ಮಾಡಿದವರು ಕವಿ ಸರ್ವಜ್ಞರು.

        ಕುಂಬಾರ ಸಮುದಾಯ ಅಲ್ಪಸಂಖ್ಯಾತ ಸಮುದಾಯವೆಂಬ ಭಾವನೆ ಬೇಡ. ಈ ಸಮುದಾಯದ ಎಲ್ಲಾ ಬೇಡಿಕೆಗಳು ಮತ್ತು ಸವಲತ್ತುಗಳನ್ನು ಒದಗಿಸಲು ನಾನು ಸಿದ್ದ ಸಮುದಾಯದ ವತಿಯಿಂದ ಸರ್ವಜ್ಞನ ಹೆಸರಿನ ವೃತ್ತಕ್ಕೆ ಮನವಿ ಬಂದಿದ್ದು, ಪರಿಶೀಲನೆ ನಡೆಸುವ ಭರವಸೆ ನೀಡಿದರು. ಈಗಾಗಲೇ ಶಾಸಕರ ಅನುದಾನದಲ್ಲಿ 10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿದ್ದು, ಕಾಂಪೌಂಡ್ ಗೋಡೆ ಹಾಗೂ ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದರು. ಈ ಸಮುದಾಯದ ಹಿರಿಯ ನಾಯಕ ದಿವಂಗತ ಎ.ಲಕ್ಷ್ಮಿಸಾಗರ ಈ ಸಮುದಾಯಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿದರು.

         ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, 16ನೇ ಶತಮಾನ ಜ್ಞಾನದ ಶತಮಾನವಾಗಿ ಪರಿವರ್ತನೆಯಾಗಿತ್ತು. ಕಾರಣ ಕವಿ ಸರ್ವಜ್ಞರು ಜನಮಾನಸ ಎಂದೂ ಮರೆಯಲಾಗದಂತಹ ಅನೇಕ ತ್ರಿದವಿ ಪದ್ಯ, ಗದ್ಯಗಳ ಮೂಲಕ ಜನರ ಮನಸೆಳೆದರು. ಸರ್ವಜ್ಞರವರ ಸಕಾಲಿಕ ಎಚ್ಚರಿಕೆಯಿಂದ ಸಮಸ್ತ ಮನುಕುಲ ಉತ್ತಮ ಬದುಕನ್ನು ಕಂಡುಕೊಳ್ಳುವಲ್ಲಿ ಯಶಸ್ಸಿಯಾಯಿತೆಂದರು.

         ಉಪನ್ಯಾಸ ನೀಡಿದ ವಾಣಿಜ್ಯ ತೆರಿಕೆ ಸಹಾಯಕ ಆಯುಕ್ತ ಪಿ.ನಾಗರಾಜ, ಬಸವಾದಿ ಶರಣರ ಕ್ರಾಂತಿಕಾರ ಕಾರ್ಯಕ್ರಮಗಳಿಂದ ಉತ್ತೇಜನರಾದ ಕವಿ ಸರ್ವಜ್ಞರು ತಮ್ಮದೇಯಾದ ಜ್ಞಾನ ಶಕ್ತಿಯಿಂದ ಸಮಾಜದ ವಿವಿಧ ಸಮುದಾಯದ ಜನರ ಜಾಗೃತಿಗೆ ಕಾರಣರಾದರು. ಬದುಕಿನ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇವರ ತ್ರಿಪದಿಗಳು ಯಶಸ್ಸಿಯಾದವು ಎಂದರು.

         ನಗರಸಭಾ ಸದಸ್ಯೆ ಕವಿತಾಬೋರಣ್ಣ ಮಾತನಾಡಿ, ಕವಿ ಸರ್ವಜ್ಞರ ತ್ರಿಪದಿ ಗದ್ಯ, ಪದ್ಯಗಳು ಜನರ ಬದುಕಿಗೆ ಹೊಸ ಸ್ಪರ್ಶವನ್ನೇ ನೀಡಿದವು. ಪ್ರತಿಯೊಬ್ಬರೂ ಸುಲಭವಾಗಿ ಅರ್ಥಮಾಡಿಕೊಳ್ಳುವಂತಹ ತ್ರಿಪದಿ ಸಾಹಿತ್ಯ ಇವರದ್ದು. 500 ವರ್ಷಗಳಿಂದ ನಾವು ಈ ಮಹಾನ್ ಶ್ರೇಷ್ಠ ಜ್ಞಾನಿಯ ಸಾಧನೆಗಳನ್ನು ಜಯಂತಿ ಆಚರಣೆಯ ಮೂಲಕ ನೆನಪಿಸಿಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದು, ಸರ್ಕಾರದ ಈ ಕ್ರಮ ಶ್ಲಾಘನೀಯವೆಂದರು.

          ದಿವ್ಯಸಾನಿಧ್ಯ ವಹಿಸಿದ್ದ ಚಿತ್ರದುರ್ಗ ಕುಂಬೇಶ ಸಂಸ್ಥಾನದ ಶ್ರೀಬಸವ ಕುಂಬ ತಿಪ್ಪೇಸ್ವಾಮಿ ಮಾತನಾಡಿ, ಸಮುದಾಯ ಸಂಘಟನೆಯಾಗದ ಹೊರತು ಸರ್ಕಾರದ ಸವಲತ್ತುಗಳನ್ನು ಪಡೆಯಲು ಅಸಾಧ್ಯ. ಇಂದು ರಾಜಕೀಯ ಕ್ಷೇತ್ರವೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಈ ಸಮುದಾಯವನ್ನು ಗುರುತಿಸುವ ಕಾರ್ಯ ಇನ್ನೂ ನಡೆದಿಲ್ಲ. ಸರ್ವಜ್ಞ ಜಯಂತಿ ಕಾರ್ಯಕ್ರಮ ಆಚರಣೆಗೆ ಮಾತ್ರ ಸೀಮಿತವಾಗದೆ ಸಮಸ್ತ ಸಮುದಾಯದ ಅಭಿವೃದ್ಧಿಗೆ ಪ್ರೇರಕವಾಗಬೇಕೆಂದರು. ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡ ಕೆ.ಎಸ್.ಶೇಷಾದ್ರಿ ಮಾತನಾಡಿದರು.

       ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಣ್ಣಸೂರಯ್ಯ, ಜಿ.ವೀರೇಶ್, ಮಲ್ಲೇಶ್, ನಗರಸಭಾ ಸದಸ್ಯರಾದ ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ಸುಮಾಭರಮಣ್ಣ, ಸುಮಕ್ಕ ಆಂಜನೇಯ, ಎಂ.ಜೆ.ರಾಘವೇಂದ್ರ, ಟಿ.ಚಳ್ಳಕೆರೆಯಪ್ಪ, ಬಿ.ಟಿ.ರಮೇಶ್‍ಗೌಡ, ಪಾಲಮ್ಮ, ಜೈತುಂಬಿ, ಸಿ.ವೈ.ಶಿವರುದ್ರಪ್ಪ, ಹುಲಿಂಗಪ್ಪ, ಸೈಯದ್, ಕುಂಬಾರ ಸಂಘದ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಟಿ.ನರಸಿಂಹಪ್ಪ, ಕಾರ್ಯದರ್ಶಿ ಜಯಪ್ರಕಾಶ್, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಇಒ ಬಿ.ಎಲ್.ಈಶ್ವರಪ್ರಸಾದ್, ಬಿಸಿಎಂ ಅಧಿಕಾರಿ ಜಗನ್ನಾಥ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap