ಸೌಹಾರ್ದ ಸಮಾವೇಶ

ಹರಿಹರ;

          ದೇಶದಲ್ಲಿ ವೈದಿಕ ಧರ್ಮವನ್ನೇ ಹಿಂದೂ ಧರ್ಮ ಎಂದು ಪ್ರತಿಪಾದಿಸಲಾಗುತ್ತಿದೆ, ದೇಶಕ್ಕೆ ವೈದಿಕ ಚಾತುರ್ವರ್ಣದ ಧರ್ಮಕ್ಕಿಂತ ಅನ್ನ, ಆಶ್ರಯ,ಅರಿವು ಹಾಗೂ ಔಷಧ ನೀಡುವಂತಹ ಚಾತುರ್ವರ್ಣದ ಧರ್ಮ ಬೇಕಾಗಿದೆ, ಎಂದು ಬೈಲೂರಿನ ಚನ್ನಬಸವೇಶ್ವರ ಮಠದ ನಿಜಗುಣಾನಂದ ಸ್ವಾಮೀಜಿ ಆಶಿಸಿದರು..

         ನಗರದ ಗಾಂಧಿ ಮೈದಾನದಲ್ಲಿ ಮಾನವ ಬಂಧುತ್ವ ವೇದಿಕೆಯ ಸಹಯೋಗದೊಂದಿಗೆ ಜನ ಜಾಗೃತಿ ವೇದಿಕೆ ವತಿಯಿಂದ ನಡೆದ ಜಾತಿ ಧರ್ಮಗಳನ್ನು ಮೀರಿದ ಸಹಬಾಳ್ವೆ ಹಾಗೂ ಸ್ವಾಭಿಮಾನಿ ಮಾನವ ಬದುಕಿಗಾಗಿ ನಡೆಸಿದ ಸೌಹಾರ್ದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

           ದೇಶದಲ್ಲಿ ಇಂದು ವೈದಿಕ ಚಾತುರ್ವರ್ಣ ಧರ್ಮವನ್ನೇ ಹಿಂದೂ ಧರ್ಮವೆಂದು ಪ್ರತಿಪಾದಿಸಲಾಗುತ್ತಿದೆ ಚಾತುರ್ವರ್ಣದ ಮನಸ್ಸಿನ ವ್ಯವಸ್ಥೆಯು ಈ ದೇಶಕ್ಕೆ ತುಂಬಾ ಅಪಾಯಕಾರಿ ಬೆಳವಣಿಗೆಗಳಲ್ಲಿ ಒಂದಾಗಿದ್ದು ಇದನ್ನು ಮುಂದಿನ ದಿನಗಳಲ್ಲಿ ಹತೋಟಿಯಲ್ಲಿಡುವ ಕೆಲಸವಾಗಬೇಕಾಗಿದೆ ಎಂದರು.

          ಈ ಕೆಲಸಕ್ಕಾಗಿ ನಾನು ಕಳೆದ ನಲವತ್ತು ವರ್ಷಗಳಿಂದ ಹೇಳುತ್ತಾ ಬಂದಿದ್ದೇನೆ, ಆಗ ನನ್ನ ಮಾತನ್ನು ಕೇಳುವ ಒಬ್ಬರೂ ಸಹ ಇರಲಿಲ್ಲ ಆದರೆ ಇಂದು ನನ್ನನ್ನು ಕರೆದರೆ ಇಲ್ಲ ಆದರೂ ನನಗೆ ತೃಪ್ತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

           ಜಗತ್ತಿನಲ್ಲಿ ಅತಂತ್ರ, ಕುತಂತ್ರ, ಪರತಂತ್ರ ಮತ್ತು ಸ್ವಾತಂತ್ರ್ಯ ಎನ್ನುವ ನಾಲ್ಕು ವಿಧವಾದ ತಲೆಗಳಿವೆ. ಕುತಂತ್ರದಿಂದ ಕಲ್ಲನ್ನು ದೇವರನ್ನಾಗಿಸಿ ಮೋಸ ಮಾಡುತ್ತಲಿವೆ,ಕಾವಿ ಬಟ್ಟೆ ಧರಿಸಿರುವ ಕೆಲವರು ಆಶೀರ್ವಾದ, ಉಪದೇಶಗಳಿಂದ ಜನರನ್ನು ವಂಚಿಸಿ ಕುತಂತ್ರದಿಂದ ದೇಶವನ್ನು ಆಳುತ್ತಿದ್ದಾರೆ.

        ದೇಶವು ಧರ್ಮ,ತತ್ತ್ವದಿಂದ ಉಳಿಯುವುದಿಲ್ಲ ಧರ್ಮವೆಂದರೆ ಪೂಜೆ, ನಮಾಜ್, ಪ್ರಾರ್ಥನೆ, ನದಿಗಳಲ್ಲಿ ಮುಳುಗಿ ಹೇಳುವುದಲ್ಲ. ವ್ಯವಸ್ಥೆಯನ್ನು, ವ್ಯಕ್ತಿಯನ್ನು, ತತ್ತ್ವ ನಿಷ್ಠೆಯನ್ನು ಎತ್ತಿ ಹಿಡಿಯುವುದೇ ಧರ್ಮವಾಗುತ್ತದೆ. ಅಂತಹ ಧರ್ಮ ಜಾಗೃತಗೊಂಡಾಗ ದೇಶ ಶಾಂತಿಯುತ ವಾಗಿರುತ್ತವೆ.

         ವಿಶ್ವದಲ್ಲಿ ಯಾವುದೇ ದೇವರುಗಳು ಪವರ್ ಫುಲ್ ಇಲ್ಲ ಆದರೆ ದೇವರ ಪೂಜಾರಿಗೆ ನಾವು ಕೊಡುವ ಹಣ ಮಾತ್ರ ಪವರ್ ಫುಲ್ ಆಗಿದೆ.ಬಿಎ ಎಂಎ ಪದವಿ ಓದುವ ಬದಲು ದೇವರ ಮುಂದೆ ಕುಳಿತು ಬರೀ ಗಂಟೆ ಬಾರಿಸಿದರೆ ಸಾಕು, ಸಾಕಷ್ಟು ಹಣವನ್ನು ಇಂದು ಗಳಿಸಬಹುದಾಗಿದೆ ಎಂದು ಹೇಳಿದರು

        ಸಮಾಜದಲ್ಲಿ ಇಂದು ಟಿವಿಯಲ್ಲಿ ಬೆಳಗ್ಗೆ ಬರುವ ಮಾನಸಿಕ ಭಯೋತ್ಪಾದಕರು ವಾಸ್ತುವಿನ ಹೆಸರಿನಲ್ಲಿ ಮನೆಗಳ ಬಾಗಿಲು,ಕಿಟಕಿ,ಗೋಡೆ ಇತ್ಯಾದಿಗಳನ್ನು ಬದಲಾಯಿಸುತ್ತಿದ್ದಾರೆ, ಆದರೆ ಅವರು ಹೆದ್ದಾರಿಗಳನ್ನು ರೈಲ್ವೇ ಹಳಿಗಳನ್ನು ಬದಲಾಯಿಸಲಿ ನೋಡೋಣ ಎಂದು ಸವಾಲು ಹಾಕಿದರು.

        ನಮಾಜು ಮಾಡುವ ಕೈಯಲ್ಲಿ ಬಂದೂಕು, ತಲವಾರು ಇರಬಾರದು. ಶಾಂತಿ ಮತ್ತು ಧರ್ಮವನ್ನು ಕುರಾನಿನಲ್ಲಿರುವಂತೆ ಭಾವೈಕ್ಯತೆಯನ್ನು ಪಾಲಿಸುವ ಬಂಧುಗಳಾಗಿರಿ. ದ್ವೇಷಕ್ಕೆ ದ್ವೇಷ ಪರಿಹಾರವಲ್ಲ,ದ್ವೇಷಕ್ಕೆ ಶಾಂತಿಯ ಪರಿಹಾರ ನೀಡಿರಿ ಮೂಢನಂಬಿಕೆ, ಅಜ್ಞಾನದಿಂದ ಹೊರ ಬನ್ನಿರಿ ಎಂದು ಮುಸ್ಲಿಂ ಭಾಂಧವರಿಗೆ ಕಿವಿಮಾತು ಹೇಳಿದರು

         ಹಿಂದೂ ಧರ್ಮದ ಬಗ್ಗೆ ಮಾತನಾಡಿದ ಶ್ರೀಗಳು ತಂದೆಯ ಹೆಸರಿಲ್ಲದ ಬರೀ ತಾಯಿಯ ಹೆಸರು ಮಾತ್ರ ಇರುವ ಅನೇಕ ದಲಿತರಿದ್ದಾರೆ ಅಂತಹವರಿಗೆ ನಮ್ಮ ಧರ್ಮ ಏನು ಕೊಟ್ಟಿದೆ ಎನ್ನುವುದನ್ನು ಎಂದು ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

         ಕಾರ್ಯಕ್ರಮದಲ್ಲಿ ನಗರದ ಮೌಲಾನಾ ಖಾಜಿ-ಈ-ಶೆಹರ್ ಖಾಜಿ ಸೈಯದ್ ಶಂಸುದ್ದೀನ್,ಆರೋಗ್ಯ ಮಾತೆಯ ಧರ್ಮಗುರು ಡಾ.ಅಂಟೋನಿ ಪೀಟರ್,ಶಾಸಕ ಎಸ್ ರಾಮಪ್ಪ, ಪ್ರಗತಿಪರ ಚಿಂತಕರು ಹಾಗೂ ಪ್ರಾಧ್ಯಾಪಕರು ಡಾ. ಎ.ಬಿ.ರಾಮಚಂದ್ರಪ್ಪ, ಸಾಮಾಜಿಕ ಚಿಂತಕರಾದ,ಮಹೇಂದ್ರಕುಮಾರ್, ಪ್ರಗತಿಪರ ಚಿಂತಕರಾದ ಎಚ್.ವಿಶ್ವನಾಥ್, ಮುಂತಾದವರು ಮಾತನಾಡಿದರು.

      ವೇದಿಕೆಯಲ್ಲಿ ನಿತಿನ್ ರಾಜ್, ನಗರಸಭೆ ಸದಸ್ಯ ಬಿ ರೇವಣಸಿದ್ದಪ್ಪ, ಅಫೆಜ್ ಖಾನ್ ,ಭಾಷಾಅಲಿ, ಹೆಗ್ಗೆರಿ ರಂಗಪ್ಪ,ಮಂಜುನಾಥ್ ಪಟೇಲ್, ಎಲ್.ಎನ್.ನಿರಂಜನ ಮೂರ್ತಿ, ವೇದಿಕೆಯ ಕಾರ್ಯದರ್ಶಿ ಸಂತೋಷ್ ನೊಟದವರ್, ಉಪಾಧ್ಯಕ್ಷರುಗಳಾದ ಜಗಳಿ ಪ್ರಕಾಶ್, ರಾಘು ದೊಡ್ಡಮನಿ, ಎಚ್ಕೆ. ಕೊಟ್ರಪ್ಪ, ಸಿ.ಎನ್. ಹುಲಿಗೇಶ್ ಎಂ.ಬಿ.ಅಣ್ಣಪ್ಪ, ಜಿ.ಎಂ.ಮಂಜುನಾಥ ಕುಂಬಳೂರು ವಾಸು, ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link