ಬಿಜೆಪಿಯಿಂದ ಜಿ ಎಸ್ ಬಿ ಗೆ ಟಿಕೆಟ್ ಡೌಟ್: ಡಿ ಕೆ ಸುರೇಶ್

ಕುಣಿಗಲ್

         ಕುಣಿಗಲ್ ಕ್ಷೇತ್ರದ ಜನರ ಮತ ಪಡೆದು ನಾಲ್ಕುಬಾರಿ ಸಂಸದರಾಗಿದ್ದು ಆ ಜನರ ಋಣವನ್ನೇ ಮರೆತು ಬಿಟ್ಟಿರುವ ನಿಮಗೆ ಲೋಕಸಭಾ ಚುನಾವಣೆಗೆ ಟಿಕೇಟೇ ಗ್ಯಾರಂಟಿ ಇಲ್ಲಾ ಆಗಿದ್ದರೂ ಈಗ ಹೇಮಾವತಿ ನೀರಿನ ರಾಜಕಾರಣ ಮಾಡುವ ಮೂಲಕ ಜಿಲ್ಲೆಯಲ್ಲಿ ಜನರನ್ನ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದೀರಾ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಮೇಲೆ ಬೆಂಗಳುರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಟೀಕಾ ಪ್ರಹಾರ ಮಾಡಿದರು.

         ತಾಲ್ಲೂಕಿನ ಅಮೃತೂರು ಸರ್ಕಾರಿ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ನಡೆದ ಹೆಬ್ಬೂರು ಮತ್ತು ಯಡೆಯೂರು ವ್ಯಾಪ್ತಿಯ ಹೇಮಾವತಿ ಅಚ್ಚುಕಟ್ಟು ರಸ್ತೆಗಳ 140 ಕೋಟಿ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಯ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತುಮಕೂರಿನ ಮಾಜಿ ಸಂಸದ ಜಿ.ಎಸ್.ಬಸವರಾಜ್ ಅವರ ಹೆಸರು ಹೇಳದೇ ಆಕ್ರೋಶವ್ಯಕ್ತಪಡಿಸುತ್ತ ಡಿ.ಕೆ.ಸುರೇಶ್ ಡಿ.ಕೆ.ಸಿ. ಕುಟುಂಬದವರು ಎಕ್‍ಪ್ರೆಸ್ ಕೆನಾಲ್ ಮೂಲಕ ರಾಮನಗರಕ್ಕೆ ನೀರು ಕೊಂಡೊಯ್ಯಲು ಯತ್ನಿಸುತ್ತಿದ್ದಾರೆಂದು ಜಿಲ್ಲೆಯಲ್ಲಿ ಜನರನ್ನ ಎತ್ತಿಕಟ್ಟುತ್ತಿದ್ದಾರೆ ನಾವು ಪೈಪ್ ಲೈನ್ ಮುಕಾಂತರ ಕುಣಿಗಲ್ ತಾಲ್ಲೂಕಿಗೆ ಕುಡಿಯುವ ನೀರನ್ನ ತರುತ್ತಿದ್ದೇವೆ ಇದನ್ನ ತಪ್ಪಾಗಿ ಅರ್ಥೈಸುತ್ತಿದ್ದಾರೆ .

          ನಿಮ್ಮಗಳ ಹೋರಾಟ ಆರಂಭವಾದರೆ ಕುಣಿಗಲ್ ಜನತೆ ಕಡಲೆಕಾಯಿ ತಿನ್ನುತ್ತ ಕೂತಿಲ್ಲ ಪ್ರತಿಯಾಗಿ ನಾವೂ ಹೋರಾಟ ಮಾಡುತ್ತೇವೆ ನಮ್ಮ ತಾಲ್ಲೂಕಿನ ನೀರಿನ ಪಾಲು ನಮಗೆ ಬೇಕು ಇಲ್ಲಿವರೆಗೂ ನೀವು ಮಾಡಿದ್ದೇನು ಈ ಭಾಗದ ಜನರ ಓಟು ಪಡೆದು ನಾಲ್ಕು ಬಾರಿ ಸಂಸದರಾಗಿದ್ದೀರಿ ಜನರ ಕುಡಿಯುವ ನೀರಿನ ಬಗ್ಗೆ ಚಿಂತಿಸಲಿಲ್ಲ ನಿಮಗೆ ಓಟು ನೀಡಿದ್ದಕ್ಕಾದರೂ ಜನರ ಋಣ ತೀರಿಸಬೇಕು ಎನ್ನಿಸುತ್ತಿಲ್ಲವೇ ಕುಣಿಗಲ್ ಜನರ ಆಶೀರ್ವಾದ ಇರುವ ವರೆಗೆ ನೀವು ಸಂಸದರಾದಿರಿ ಈಗ ಮನೆಯಲ್ಲಿ ಕೂತಿದ್ದೀರಿ ಮುಂದೆ ಸಂಸದರಾಗುವ ಕನಸು ನನಸಾಗುವುದಿಲ್ಲಾ ಎಂದ ಅವರು ಆರಂಭದಲ್ಲಿ ಹೇಮಾವತಿಗಾಗಿ ಹೋರಾಟ ಮಾಡಿ ನೀರು ತಂದವರಿಗೆ ಇಂದು ಅದನ್ನು ಪಡೆಯಲು ಹೋರಟ ಮಾಡುವುದು ಗೊತ್ತಿಲ್ಲವೇ ನಿಮ್ಮಿಂದ ಈ ಜನರು ಕಲಿಯ ಬೇಕಿಲ್ಲ ನಿಮಗಿನ್ನೂ ಬಿಜೆಪಿಯಲ್ಲಿ ಟಿಕೇಟೇ ಗ್ಯಾರಂಟಿ ಇಲ್ಲಾ ಎಂದು ಅಕ್ರೋಶ ವ್ಯಕ್ತಪಡಿಸಿದರು.  

        ಅಭಿವೃದ್ಧಿ ಮಾಡುವ ಸರ್ಕಾರವನ್ನ ಕೆಲವೇ ದಿನಗಳಲ್ಲಿ ಬಿದ್ದು ಹೋಗುತ್ತದೆಂದು ಎಡೆಯೂರಪ್ಪನವರು ಬೊಬ್ಬೆಯೊಡೆದರೂ ಏನು ಆಗಲಿಲ್ಲ ಈಗ ರಾಷ್ಟ್ರೀಯ ನಾಯಕರಾದ ಅಮಿತ್ ಷಾ ಅವರು ಬೊಬ್ಬೆಯೊಡೆಯುತ್ತಿದ್ದಾರೆ. ಬರೀ ಕುತಂತ್ರ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ ಇವರಿಗೆ ನಾಚಿಗೆ ಆಗುವುದಿಲ್ಲವೇ ನಮಗೆ 22 ಸೀಟುಗಳನ್ನ ಗೆಲ್ಲಿಸಿ ಕೊಡಿ ಮಾದರಿ ರಾಜ್ಯ ಮಾಡುತ್ತೇವೆ ಎನ್ನುತ್ತಾರೆ 17 ಸೀಟು ಗೆದ್ದಾಗ ಏನೂ ಅಭಿವೃದ್ಧಿ ಮಾಡಲಾಗದವರು 22 ಸೀಟು ಕೊಟ್ಟರೆ ಏನು ಮಾಡ್ಯಾರು ಎಂದು ವ್ಯಂಗ್ಯವಾಡಿದರು. ಅಭಿವೃದ್ದಿ ಹೆಸರಿನಲ್ಲಿ ನೀಡಿರುವ ಜನರ ತೆರಿಗೆ ಹಣವು ದುರುಪಯೋಗವಾಗಬಾರದು, ಕಾಮಗಾರಿ ಕಳಪೆಯೂ ಆಗಬಾರದು, ನನಗೆ ಗುತ್ತಿಗೆದಾರ ಮುಖ್ಯನಲ್ಲ ಜನರೇ ಮುಖ್ಯ. ಕಾಮಗಾರಿ ಕಳಪೆ ಎಂದು ಗೊತ್ತಾದಲ್ಲಿ ಕಾಮಗಾರಿಯನ್ನ ನಿಲ್ಲಿಸಿಬಿಡಿ ಎಂದು ಸಂಸದ ಜನರಿಗೆ ಕರೆ ನೀಡಿದರು.

       ನಾವೂ ಭಾರತೀಯರೇ ಇದು ನಿಮ್ಮ ಸ್ವತ್ತಲ್ಲ 130 ಕೋಟಿ ಜನರ ಸ್ವತ್ತು ನೀವು ನೀರಿನ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಪಾಕಿಸ್ತಾನದ ಉಗ್ರಗಾಮಿಗಳನ್ನ ಸದೆ ಬಡೆಯಲು ಸಹಕಾರ ಇದೆ ಎಂದು ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ, ಕೀಳು ರಾಜಕಾರಣ ಬಿಟ್ಟು ದುಡಿಯುವ ಕೈಗೆ ಕೆಲಸ ನೀಡಿ ಮಾನವೀಯ ಮೌಲ್ಯ ಹಾಗೂ ಸಂವಿಧಾನಗಳನ್ನ ಉಳಿಸಿ ಅಂಬೇಡ್ಕರ್ ಬರೆದ ಸಂವಿಧಾನವನ್ನ ಬದಲಾವಣೆ ಮಾಡುತ್ತೇವೆ ಎಂಬುದು ಪ್ರಜಾಪ್ರಭುತ್ವದಕ್ಕೆ ವಿರುದ್ದವಾಗಿದೆ ಎಂದರು.

       ಹೇಮಾವತಿ ನೀರು ಕಾವೇರಿ ವಲಯದವರಿಗೆ ಸೇರಬೇಕು ಆದರೆ ಕೃಷ್ಣಾವಲಯದವರಿಗೆ ನೀರು ಕೊಟ್ಟಿದ್ದೇವೆ ಅದೂ ಕೂಡ ನಿಮ್ಮ ಕಾಲದಲ್ಲಿಯೇ ಆಗಿತ್ತು ಎಂದು ಜಿ.ಎಸ್ ಬರಸವರಾಜ್ ಅವರಿಗೆ ಕುಟುಕಿದರು. ಏನೇ ಇರಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರವು ತುಮಕೂರು ಜಿಲ್ಲೆಯ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬದ್ಧವಾಗಿದೆ, ಕುಣಿಗಲ್ ನೀರಿನ ಪಾಲು ಕೇಳುವಾಗ ಜಿಲ್ಲೆಯ ಮುಖಂಡರು ಅಡ್ಡಿಪಡಿಸಿದ್ದಲ್ಲಿ ತಾಲ್ಲೂಕಿ ಬಿಜೆಪಿ ಪಕ್ಷದವರು ತಾಲ್ಲೂಕಿ ಪರ ನಿಲ್ಲಬೇಕೆಂದು ಕಿವಿಮಾತು ಹೇಳಿದರು.

          ಶಾಸಕ ಡಾ.ರಂಗನಾಥ್ ಮಾತನಾಡಿ ತಾಲ್ಲೂಕಿನಲ್ಲಿ ಶೆ. 80 ರಷ್ಟು ಮಣ್ಣಿನ ರಸ್ತೆಗಳಿದ್ದವು, ಅಂತಹ ರಸ್ತೆಗಳ ಅಭಿವೃದ್ದಿಗೆ ಡಿ.ಕೆ.ಶಿವಕುಮಾರ್ 60 ಕೋಟಿ ಹಣ ಬಿಡುಗಡೆ ಮಾಡಿಸಿದ್ದಾರೆ. ರೈತರ ಸಮಸ್ಯೆಗಳು ಸಾಕಷ್ಟಿವೆ , ನಾನೂ ರಾಜಕೀಯಕ್ಕೆ ಹೊಸಬ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ ಸಮಸ್ಯೆಗಳನ್ನ ಖುದ್ದು ಪರಿಶೀಲಿಸಿ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೆನೆ. ಅದಕ್ಕಾಗಿ ಜನತಾದರ್ಶನ, ಆರೋಗ್ಯ ಶಿಬಿರ ಹಾಗೂ ಗ್ರಾಮಸಭೆಗಳನ್ನ ಮಾಡುವ ಮೂಲಕ ನಿಮ್ಮಗಳ ಕಷ್ಟಕ್ಕೆ ಸ್ಪಂಧಿಸುತ್ತಿದ್ದೇನೆ ಎಂದರು.

         ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಅನುಸೂಯಮ್ಮ ವೈಕೆಆರ್, ತಾ.ಪಂ. ಸದಸ್ಯೆ ವಿಶ್ವನಾಥ್, ಪುರಸಭಾ ಅಧ್ಯಕ್ಷೆ ನಳಿನಾಭೈರಪ್ಪ, ಸದಸ್ಯರಾದ ಪಾಪಣ್ಣ, ಶಂಕರ್, ಸರಸ್ವತಿ, ರಹಮನ್‍ಷರೀಪ್, ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷ ವೆಂಕಟರಾಮು, ರಂಗಣ್ಣಗೌಡ, ಮುಖಂಡರಾದ ಆಡಿಟ್ ನಾಗರಾಜು,ನಂಜೇಗೌಡ, ಗೂಳಿಗೌಡ, ಬೇಗೂರು ನಾರಾಯಣ್, ಗುತ್ತಿಗೆದಾರ ಸಂಘದ ಆಲ್ಕೆರೆನಾರಾಯಣ್,ಅಲ್ಲಾಬಕಾಸ್, ಗ್ರಾ.ಪಂ. ಅಧ್ಯಕ್ಷ ವೆಂಕಟರಾಮು, ಶ್ರೀನಿವಾಸ್, ಇತರೆ ಮುಖಂಡರು ಭಾಗವಹಿಸದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap