ಶಿರಾ
ತಾಲ್ಲೂಕಿನ ಬುಕ್ಕಾಪಟ್ಟಣದ ಕರೆಮಾದೇನಹಳ್ಳಿ ಗ್ರಾಮದ ಡಾ.ಕೆ.ಪಿ.ಸುರೇಶ್ ಅವರು ಭಾರತ ವಿದ್ಯಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಹಾಯಕ ಪ್ರಾಧ್ಯಾಪಕರು, ಅರ್ಥಶಾಸ್ತ್ರ ಆರ್ಥಿಕ ವಿಶ್ಲೇಷಕರು, ಚಿಂತಕರೂ ಆದ ಇವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ವಿಚಾರವನ್ನೂ ಮಂಡಿಸಿದ್ದರು. ಇವರು ಆರ್ಥಿಕ ಮತ್ತು ಸಾಮಾಜಿಕ ಗ್ರಾಮಾಭಿವೃದ್ಧಿಗಾಗಿ ನೀಡಿರುವ ವಿಚಾರಧಾರೆಯನ್ನು ಗುರುತಿಸಿ ನವದೆಹಲಿಯ ಇಂಟರ್ ನ್ಯಾಷನಲ್ ಬ್ಯುಸಿನೆಸ್ ಕೌನ್ಸಿಲ್ ಹಾಗೂ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಮಂಡಳಿಯು ಡಿ.14 ರಂದು ದೆಹಲಿಯ ಸುಪ್ರೀಂ ಕೋರ್ಟ್ ಆವರಣದ ಕೃಷ್ಣ ಮೆನನ್ ಸಭಾಂಗಣದಲ್ಲಿ ಕೈಗೊಂಡಿರುವ ಕಾರ್ಯಕ್ರಮದಲ್ಲಿ ಸುರೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ