ಹರಪನಹಳ್ಳಿ:
ವಚನ ಸಾಹಿತ್ಯ ಕ್ರಿಸ್ಚೇಯನ್ರ ಬೈಬಲ್, ಮುಸ್ಲಿಂರ ಕುರಾನ್ ನಂತೆ ಧಾರ್ಮಿಕ ಮನ್ನಣೆ ಗಳಿಸಿದೆ ಎಂದ ಅವರು ವಚನ ಸಾಹಿತ್ಯದ ವಿಶ್ಲೇಷಣೆ ಕಠಿಣತೆಯನ್ನು ಅರಿತು ಅದನ್ನು ವಿಶ್ಲೇಷಿಸಲು ಚನ್ನಬಸವ ಶಿವಯೋಗಿಗಳು ಪ್ರಯತ್ನಿಸಿ ಸಫಲರಾದರು. ಶಿವಯೋಗಿ ಹಾಗೂ ಶಿವ ಎಂಬುದು ಬೆರೆಯಲ್ಲ ಶಿವನ ಸ್ವರೂಪದಲ್ಲಿ ಶರಣರು ನಡೆದುಕೊಳ್ಳುತ್ತಿದ್ದರು ಗದುಗಿನ ಡಂಬಳದ ತೋಂಟದಾರ್ಯ ಸಂಸ್ಥಾನದ ಜದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಕಮ್ಮತ್ತಹಳ್ಳಿ ವಿರಕ್ತಮಠದ ಆವರಣದಲ್ಲಿ ಮಂಗಳವಾರ ಲಿಂ.ಶ್ರೀ ಚನ್ನಬಸವ ಮಹಾಶಿವಯೋಗಿಗಳವರ 12ನೇ ವರ್ಷದ ಸ್ಮರಣೋತ್ಸವ ಹಾಗೂ ಶ್ರೀ ಮಠದ ನೂತನ ಕಟ್ಟಡ ಉದ್ಘಾಟನೆ ಹಾಗೂ ಬಸವ ತತ್ವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗದ ಬೆಕ್ಕಿನ ಕಲ್ಮಠದ ಜದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ವಚನ ಸಾಹಿತ್ಯದ ಮಹತ್ವದ ಅರ್ಥವನ್ನು ಪ್ರತಿಯೊಬ್ಬರು ಅರಿಯಬೇಕು. ನಡೆದು ನುಡಿದಂತೆ ತೋರಿಸುವುದು ವಚನ ಸಾಹಿತ್ಯವಾಗಿದೆ. ಇದರಂತೆ ಪಾಂಡೋಮಟ್ಟಿ ಶ್ರೀ ಚನ್ನಬಸವ ಮಹಸ್ವಾಮಿಗಳು ಬಸವಣ್ಣನವರಂತೆ ನಡೆದುಕೊಂಡರು.
ಶರಣರು ನಡೆ, ನುಡಿಗೆ ಮಹತ್ವ ನೀಡಿದ್ದರು. ಶರೀರ ನೀರಿನ ಮೇಲೆ ಗುಳ್ಲೆ ಇದ್ದಂಗೆ ಅದ್ದರಿಂದ ಅದನ್ನು ಕಾಯುತ್ತ ಕುಳಿತುಕೊಳ್ಳುವುದು ಬೇಡ ಎಂದು ಶರಣರು ಹೇಳುತ್ತಾರೆ. ಮಾನವ ಜನ್ಮ ಸಿಕ್ಕಿದ್ದನ್ನು ಹಾನಿಮಾಡಿಕೊಳ್ಳಬೇಡಿ ಎಂದರು. ಹೆಣ್ಣು, ಹೊನ್ನು ಮಾಹೆಯಲ್ಲ, ಮನದ ಮುಂದಣ ಆಸೆ ಇದೆಯಲ್ಲ ಅದು ಮಾಹೆಯಾಗಿದೆ. ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಕ್ಲೀಷೆಯಾಗುತ್ತಿವೆ ಆದ್ದರಿಂದ ಶರಣರು ನುಡಿದಂತೆ ಎಲ್ಲರೂ ನಡೆಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಕಾಯಕತತ್ವ ಬದುಕಿಗೆ ಅತ್ಯಂತ ಶ್ರೇಷ್ಠವಾಗಿದ್ದು, ತಮ್ಮ ಮಕ್ಕಳನ್ನು ಇಂಜಿನಿಯರ್, ಡಾಕ್ಟರ್ನ್ನು ಮಾಡುವ ಬದಲು ಉತ್ತಮ ಶಿಕ್ಷಕರನ್ನಾಗಿ ಮಾಡಿ ಎಂದ ಅವರು 12ನೇ ಶತಮಾನದ ಶರಣರ ದಾರ್ಶನಿಕ ಇತೀಚಿನ ಸ್ವಾಮಿಗಳಲ್ಲಿ ಎರಡು ವರ್ಗವಿದ್ದು, ಜಾತಿ ಬಿಂಬಿಸುವ ಹಾಗೂ ಸಾಮಾಜವನ್ನು ತಿದ್ದುವ ಸ್ವಾಮಿಗಳ ವರ್ಗವೊಂದು ಇದೆ ಎಂದ ಅವರು ಸಂವಿಧಾನ ಅಪಾಯ ಸ್ಥಿತಿಯಲ್ಲಿದೆ.
ದಲಿತರನ್ನು ಕಗ್ಗೊಲೆ ಮಾಡುವಂತಹ ಸ್ಥಿತಿ ನಿರ್ಮಾಣ ಮಾಡಿದೆ. ಹಳ್ಳಿಗಳು ಅಪಾಯ ಸ್ಥಿತಿಯಲ್ಲಿವೆ ರೈತರಲ್ಲಿ ಆಶೆ ಇರುವುದರಿಂದ ಅವರ ಸ್ಥಿತಿ ದುಸ್ಥಿತಿಯಲ್ಲಿದೆ ಎಂದ ಅವರು ಆಸೆಗಳನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರು.
ವಚನ ಸಾಹಿತ್ಯವನ್ನು ಬೆಳೆಸಿ, ಉಳಿಸಬೇಕು ಶಾಸಕರು ಇಂದು ಮಾರಟಕ್ಕಿರುವುದು ದುರಂತವಾಗಿದ್ದು ಇವರ ಆಸ್ಥಿ ಹೊಂದಿದ್ದಾರೆ. ಲಿಂಗಾಯತ ಧರ್ಮದಲ್ಲಿ ದಾಸೋಹಕ್ಕೆ ಹೆಚ್ಚಿನ ಪ್ರಾಸಸ್ತ್ಯ ನೀಡಲಾಗಿದೆ ಎಂದರು.
ಕಮ್ಮತ್ತಹಳ್ಳಿ ವಿರಕ್ತಮಠದ ಪಾಂಡೋಮಟ್ಟಿ ಶ್ರೀ ಡಾ.ಗುರುಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ ರಾಜಕಾರಣಿಗಳಿಲ್ಲದ ಬಸವತತ್ವ ಭಕ್ತಿಯ ಭಾವದ ಕಾರ್ಯಕ್ರಮ ಇದಾಗಿದೆ. ಒಡೆದ ಮನಸ್ಸು, ಛಿದ್ರ ಸಮಾಜ ಕಟ್ಟುವಲ್ಲಿ ಕಾವಿದಾರಿಗಳಿಂದ ಮಾತ್ರ ಸಾದ್ಯ ಎನ್ನುವುದಕ್ಕೆ ಇಂದಿನ ಬಸವತತ್ವ ಸಮ್ಮೇಳನ ನಿದರ್ಶನವಾಗಿದೆ ಎಂದರು.
ಸಂಸ್ಕಾರ ಬೇಕು ಮಠಗಳಿಂದ ಮಾತ್ರ ಸಿಗಲು ಸಾದ್ಯ. ಮಠವಿದ್ದರೆ ಸುತ್ತಮುತ್ತಲಿನ ಪರಿಸರ ಪರಿವರ್ತನೆಯ ಶಕ್ತಿ ಮಠಗಳಿಗಿವೆ. ಲಿಂಗಾಯತ ತತ್ವಗಳನ್ನು ಅಧ್ಯಯನ ಮಾಡಿ, ಜನರಿಗೆ ತತ್ವದ ಬೋದನೆಯನ್ನು ಮಾರ್ಗದರ್ಶನ ಮಾಡಿದ್ದರೆ ಯಾರು ಅತಂತ್ರವಾಗುತ್ತಿರಲಿಲ್ಲ.
ನೈಜವಾಗಿರುವುದನ್ನು ಹೇಳಿದರೆ ಯಾರು ಕೇಳಲ್ಲ ಬಸವಣ್ಣನ ಕಾಲದಿಂದಲೂ ಸತ್ಯ ಕಠಿವಾಗಿದೆ. ಸಹಜ, ಕಠೊರವಾಗಿರುವುದು. ಬದುಕಿಗೆ, ಜೀವನಕ್ಕೆ ಅಪಾಯ್ಯಮಾನವಾಗಿರುವುದು ಸತ್ಯಕ್ಕೆ. ಸತ್ಯದ ಗುಣಗಳನ್ನು ಪ್ರಾಮಾಣಿಕವಾಗಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಲಿಂ.ಚನ್ನಬಸವ ಶಿವಯೋಗಿಗಳು 90 ವರ್ಷಗಳ ಕಾಲಕ್ಕೂ ಲೇಸಯೆನಿಸಿಕೊಂಡವರು. ಮನಸ್ಸು ಮೈಲಿಗೆಯಾದರು ಕಂದಕಗಳು ಉಂಟಾಗುತ್ತದೆ. ಮಲ್ಲಿಗೆಯ ಸುಗಂದವಾಗಬೇಕು ಅದನ್ನು ಬಸವಾಧಿ ಶರಣರು ಕೊಟ್ಟಿದ್ದಾರೆ. ಕುತಂತ್ರತನಕ್ಕೆ ಹೆಸರಾಗಬಾರದು ಎಂದರು.
ಸಾಧನೆಯ ಹಿಂದೆ ಸಿದ್ದಿ ಇರಬೇಕು ಇದಕ್ಕೆ ಪರಿಶ್ರಮ ಇರಬೇಕು ಆಗ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ ಎಂದರು. ಪೇಪರ ಹಿಡಿದು ಮಾಡುವುದು ಪವಾಡವಲ್ಲ, ಬಾತೃತ್ವ, ಮಾನವೀಯ ಸಂಬಂಧಗಳನ್ನು ಹೊಂದಿರಬೇಕು. ಇದು ಸಾಧನೆಯಿಂದ ಬರುತ್ತದೆ ಮುಖ್ಯ ಗುರಿಯೊಂದಿಗೆ ಮಾರ್ಗವಾಗುವ ಬಸವತತ್ವ ಮಾರ್ಗದರ್ಶನವಾಗಲಿದೆ ಎಂದು ಹೆಳಿದರು.
ತುಮಕೂರು ಸಿದ್ದಗಂಗಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಠ ಸಂಸ್ಕತ ನೀಡುವ ಬೆಳಕು ಇದ್ದಂತೆ, ನ್ಯಾಯ, ರಕ್ಷಣೆ, ಪೋಷಣೆ, ಶಿಕ್ಷಣ ಸಮರ್ಪಕವಾಗಿ ಹಂಚುವುದು ಮಠಗಳು. ಇದನ್ನು ಬಿತ್ತರಿಸಲು ಮಠಕ್ಕೆ ಶ್ರೇಷ್ಠ ಗುರುವಿನ ಅವಶ್ಯ ಇಂತಹ ಮಹತ್ಕಾರ್ಯವನ್ನು ಪರಿ ಪೂರ್ಣವಾಗಿ ನಿಬಾಯಿಸಿದವರು ಪಾಂಡೋಮಟ್ಟಿ ಚನ್ನಬಸವ ಶಿವಯೋಗಿಗಳು ಎಂದ ಅವರು ಒಬ್ಬ ತಾಯಿ ಸಂಸ್ಕಾರವಂತರಾದರೆ ಕುಟುಂಬ ಸಂಸ್ಕಾರವಾಗಲಿದೆ ಎಂದು ನುಡಿದರು.
ಚಿತ್ತರಗಿ ಇಳಕಲ್ ಮಹಾಂತಸ್ವಾಮಿ, ಅರಸಿಕೇರಿ ಮೈಸೂರು ಷಡಕ್ಷರಿ ಶ್ರೀಗಳು, ಮಾಡಾಳು ನಿರಂಜನಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು.
ಸಿದ್ದಯ್ಯನಕೋಟೆ ಶ್ರೀಗಳು ಕಮ್ಮತ್ತಹಳ್ಳಿ ಬಸವ ಭಜನಾ ಸಂಘ ಹಾಗೂ ವೇದಿಕ್ ವಿದ್ಯಾಲಯದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಬೆಂಗಳೂರು ದಿವ್ಯಜ್ಯೋತಿ ಸೇವಾ ಟ್ರಸ್ಟ್ ಸಂಸ್ಥಾಪಕಿ ಡಾ.ವೀಣಾ ಅಶೋಕ, ಅಧ್ಯಕ್ಷೆ ಡಾ.ಜ್ಯೋತಿ ಜೆ.ವಿ.ದೇವಿಗಿರಿ ವೀರಭದ್ರಯ್ಯ, ಸಿದ್ದರಾಮಯ್ಯ, ಸೇರಿದಂತೆ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ