ಆರು ತಿಂಗಳೊಳಗೆ ಆಶ್ರಯ ಮನೆಗೆ ಶಂಕುಸ್ಥಾಪನೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ

    ನಗರದ ಹೊರವಲಯದ ಮೆದೇಹಳ್ಳಿ ಬಳಿ ಮೊದಲ ಹಂತದಲಿ 10 ಎಕರೆ 20 ಗುಂಟೆಯಲ್ಲಿ ಜಿಪ್ಲಸ್ ಮಾದರಿಯಲ್ಲಿ 1800 ಮನೆ ನಿರ್ಮಾಣಕ್ಕೆ ಇನ್ನು ಆರು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಮತ್ತು ಆಶ್ರಯ ಸಮಿತಿ ಅಧ್ಯಕ್ಷ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

     ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ಆಶ್ರಯ ಸಮಿತಿ ಸಭೆಯ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿ ಆಶ್ರಯ ಮನೆ ಒಂದಕ್ಕೆ 5 ಲಕ್ಷ ರೂಪಾಯಿ ವೆಚ್ಚ. ಇದರಲ್ಲಿ ಸಾಲ 1 ಲಕ್ಷ ಮತ್ತು ಫಲಾನುಭವಿಗಳ ವಂತಿಗೆ 1.50 ಲಕ್ಷ. ಉಳಿದ ಹಣವನ್ನು ಸರ್ಕಾರ ಭರಿಸಲಿದೆ. 1800 ಮನೆ ನಿರ್ಮಾಣ ಮಾಡಿದ ಬಳಿಕ ಕುಂಚಿಗನಾಳ್ ಬಳಿ 40 ಎಕರೆ ಜಮೀನು ಗುರುತಿಸಲಾಗಿದೆ. ಈ ಜಮೀನು ನೀಡಿದರೆ ಇಲ್ಲಿಯೂ ಜನರಿಗೆ ವಸತಿ ಕಲ್ಪಿಸಿ ಕೊಡಲಾಗುವುದು ಎಂದರು.

      ನಿವೇಶನ ಮತ್ತು ವಸತಿ ಕೋರಿ 13 ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿದ್ದು ಅದರಲ್ಲಿ ಅಂತಿಮವಾಗಿ 8 ಸಾವಿರ ಅರ್ಜಿಗಳನ್ನು ಪರಿಗಣಿಸಲಾಗಿದೆ. ಮೂರ್ನಾಲ್ಕು ವರ್ಷದಿಂದ 14 ರಿಂದ 15 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದವು. ನಗರಸಭೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ 9 ಸಾವಿರ ಜನರಿಗೆ ನಿವೇಶನ ಮತ್ತು ವಸತಿ ಪಡೆಯಲು ಅರ್ಹರು ಎಂದು ಗುರುತಿಸಿದ್ದಾರೆ. ಇದರಲ್ಲಿಯೂ ಕೆಲವರು ನಿವೇಶನ ಅಥವಾ ವಸತಿ ಹೊಂದಿರಬಹುದು. ಮೊದಲ ಹಂತದಲ್ಲಿ ಜಿಪ್ಲಸ್ ಮಾದರಿ ಮನೆ ನಿರ್ಮಾಣಕ್ಕೆ ಸಭೆಯಲ್ಲಿ ಅನುಮೋದನೆ ನೀಡಿ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು. ಜಿಲ್ಲಾಧಿಕಾರಿ ರಾಜೀವ್‍ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿ ಅಲ್ಲಿಂದ ಅನುಮೋದನೆಯಾದ ಬಳಿಕ ಮನೆ ನಿರ್ಮಾಣ ಕಾಮಾಗಾರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

     ಅಂಬೇಡ್ಕರ್ ಅವಾಶ್ ಯೋಜನೆಯಡಿ ಸಾಕಷ್ಟು ಮನೆ ಉಳಿದಿದೆ. ಇದಕ್ಕೆ ಯಾವುದೇ ಮೀತಿ ಇಲ್ಲ. ಸ್ವಂತ ಜಾಗವಿದ್ದರೆ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಅಲ್ಲದೆ ರೇ ಯೋಜನೆಯಡಿ ಸ್ವಾಮಿ ವಿವೇಕಾನಂದ ನಗರ, ಗಾಂಧಿನಗರ, ವೆಂಕಟೇಶ್ವರ ಬಡಾವಣೆ, ಬಾಬು ಜಗಜೀವನರಾಂ ನಗರ, ಸಾಧಿಕ್ ನಗರ ಸೇರಿದಂತೆ ಕೊಳಚೆ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಲು 68 ಕೋಟಿ ಸರ್ಕಾರ ಬಿಡುಗಡೆ ಮಾಡಿದೆ. ಈ ಮನೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದರು. ಪೌರಾಯುಕ್ತ ಸಿ,ಚಂದ್ರಪ್ಪ, ಅಧಿಕಾರಿಗಳಾದ ವೆಂಕಟೇಶ್, ಲೋಕೇಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link