ಬಾಳೆ ಎಲೆ’ ಬಳಕೆ ನಿಷೇಧ

ಬೆಂಗಳೂರು-

    ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಸದ ಸಮಸ್ಯೆಯನ್ನು ಹತೋಟಿಗೆ ತರಲು ಮದುವೆ ಮನೆಗಳ ಮೇಲೆ ಕಣ್ಣಿಟ್ಟಿರುವ ಬಿಬಿಎಂಪಿ ಅಧಿಕಾರಿಗಳು ಮದುವೆ ಊಟದಲ್ಲಿ ‘ಬಾಳೆ ಎಲೆ’ ಬಳಕೆಯನ್ನು ನಿಷೇಧಿಸಲು ಮುಂದಾಗಿದ್ದಾರೆ.

    ನಗರದ ಪ್ರತಿ ಕಲ್ಯಾಣ ಮಂಟಪ, ಮದುವೆ ಸಮಾರಂಭ, ಬೃಹತ್ ಸಮಾವೇಶ, ಕಾರ್ಯಕ್ರಮಗಳಲ್ಲಿಸೇರಿದಂತೆ ಇನ್ನಿತರ ಕಡೆ ಬಾಳೆ ಎಲೆ ಬದಲಿಗೆ ಸ್ಟೀಲ್ ಪ್ಲೇಟ್ ಗಳನ್ನೇ ಬಳಸಿದೆ ತ್ಯಾಜ್ಯ ಸಂಗ್ರಹ ಪ್ರಮಾಣ ಭಾರಿ ಪ್ರಮಾನದಲ್ಲಿ ಕಡಿಮೆ ಮಾಡಬಹುದಾದ ಅಂದಾಜು ಮಾಡಿ ಬಾಳೆಎಲೆ ನಿಷೇಧಕ್ಕೆ ಚೀಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

     ಘನತ್ಯಾಜ್ಯ ವಿಲೇವಾರಿ ಸರಳೀಕರಿಸುವ ಗುರಿಯನ್ನು ಇಟ್ಟುಕೊಂಡಿರುವ ಅಧಿಕಾರಿಗಳು ಈಗಾಗಲೆ ಕಲ್ಯಾಣ ಮಂಟಪ ಮಾಲೀಕರ ಸಭೆ ಕರೆದು ಬಾಳೆ ಎಲೆ ನಿಷೇಧಕ್ಕೆ ಮುಂದಾಗುವಂತೆ ಮನವಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ..

    ಮುಂದಿನ ದಿನಗಳಲ್ಲಿ ಬಾಳೆ ಎಲೆ ಬದಲಿಗೆ ಸ್ಟೀಲ್ ಪ್ಲೇಟ್ ಬಳಸುವಂತೆ ನಗರದ ಬಹುತೇಕ ಕಲ್ಯಾಣ ಮಂಟಪ ಮಾಲೀಕರಿಗೆ ಕೆಲವು ಹೋಟೆಲ್ ಗಳಿಗೆ ಸೂಚನೆ ನೀಡಲಾಗುತ್ತದೆ . ಇದರಿಂದಾಗಿ ಕಲ್ಯಾಣ ಮಂಟಪಗಳ ಮಾಲೀಕರು ತಬ್ಬಿಬ್ಬಾಗಿದ್ದಾರೆ. ವಿಲೇವಾರಿ ಕಷ್ಟ ಎನ್ನುವ ಕಾರಣಕ್ಕೆ ಬಾಳೆ ಎಲೆ ಬಳಸಬೇಡಿ ಎಂದು ಮನವಿ ಮಾಡುವ ಬಿಬಿಎಂಪಿ ನಿರ್ಧಾರಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗುತ್ತಿದೆ.

    ಇತ್ತೀಚೆಗೆ ಕಾಗದ ಅಥವಾ ಪ್ಲಾಸ್ಟಿಕ್ಕಿನ ತಟ್ಟೆ-ಲೋಟಗಳನ್ನು ಮದುವೆ-ಸಮಾರಂಭಗಳ ಊಟದಲ್ಲಿ ಬಳಸುವುದನ್ನು ಕಾಣಬಹುದು. ಊಟದ ಸಮಯದಲ್ಲಿ ಇದು ಅತ್ಯಂತ ಉಪಯುಕ್ತವೆಂದು ಕಂಡುಬಂದರೂ ತ್ಯಜಿಸಿದ ಬಳಿಕ ಇದರ ವಿಲೇವಾರಿಯೇ ದೊಡ್ಡ ತಲೆನೋವಿನ ಕೆಲಸವಾಗಿದೆ ಏಕೆಂದರೆ ಪರಿಸರದಲ್ಲಿ ಇವು ಕೊಳೆಯದ ಕಾರಣ ಪ್ರದೂಷಣೆಯನ್ನು ಹೆಚ್ಚಿಸುತ್ತವೆ. ಮಳೆನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನೀರು ಹೊರಹೋಗುವ ತೂತುಗಳನ್ನು ಮುಚ್ಚಿ ಪ್ರವಾಹ ರಸ್ತೆಮೇಲೆ ಹರಿದು ಮನೆಗಳ ಒಳಗೆ ನುಗ್ಗಲು ಕಾರಣವಾಗಿವೆ ಎಂದು ಹೇಳಲಾಗುತ್ತದೆ.

      ಬಾಳೆ ಎಲೆ ಕೊಳೆಯುವ ವಸ್ತುವಾಗಿರುವುರಿಂದ ಗೊಬ್ಬರವಾಗಿ ಪರಿವರ್ತಿಸಿ ಬಳಸಲು ಸಾಧ್ಯವಿದೆ. ಆದರೆ, ಬಿಬಿಎಂಪಿಯ ಜೈವಿಕ ಅನಿಲ ಉತ್ಪಾದನಾ ಘಟಕದಲ್ಲಿ ಆಹಾರ ತ್ಯಾಜ್ಯದ ಜತೆಗೆ ಬಾಳೆ ಎಲೆಯ ಸಂಸ್ಕರಣೆ ಸವಾಲೆನಿಸಿದೆ. ಆಹಾರ ತ್ಯಾಜ್ಯಕ್ಕೆ ಹೋಲಿಸದರೆ ಬಾಳೆಎಲೆ ತ್ಯಾಜ್ಯ ಸಂಸ್ಕರಣೆವಿಳಂಬ. ಹಾಗಾಗಿ ಘಟಕಗಳಲ್ಲಿ ಸಂಸ್ಕರಣೆ ತಡವಾಗುತ್ತಿರುವ ಕಾರಣ, ಪಾಲಿಕೆ ಹೀಗೆ ಮನವಿ ಮಾಡಿದೆ ಎನ್ನುವ ಮಾತುಗಳು ಕೇಳಿಬಂದಿವೆ.

     ಊಟ ಅಥವಾ ತಿಂಡಿ ಸೇವನೆಗೆ ಬಳಸುವ ಬಾಳೆಎಲೆ ಕೊಳೆಯುವ ಜತೆಗೆ ಬಾಳೆ ಎಲೆ ಬಳಕೆಯಿಂದ ತ್ಯಾಜ್ಯದ ಪ್ರಮಾಣ ಹೆಚ್ಚಾಗಲಿದ್ದು, ಸಾಗಣೆಗೂ ಹೆಚ್ಚು ವೆಚ್ಚವಾಗುತ್ತಿದೆ

ತೀವ್ರ ವಿರೋಧ   ರಾಜ್ಯದಲ್ಲಿ ಪ್ಲಾಸ್ಟಿಕ್ ಲೋಟ ಮತ್ತು ಪ್ಲೇಟ್ ಬಳಕೆ ಸಂಪೂರ್ಣ ನಿಷೇಧವಿದೆ. ಕೆಲವೆಡೆ ಕಾಗದದ ತಟ್ಟೆ, ಲೋಟ ಬಳಸಲಾಗುತ್ತಿದೆ. ಹಲವೆಡೆ ಬಾಳೆ ಎಲೆ ಬಳಕೆ ಇದೆ. ಹೀಗಿರುವಾಗ, ಬಾಳೆ ಎಲೆ ಬದಲಿಗೆ ಸ್ಟೀಲ್ ಪ್ಲೇಟ್ ಬಳಸುವಂತೆ ಪಾಲಿಕೆ ಹೇಳುತ್ತಿರುವುದು ಆತಂಕ ಮೂಡಿಸುತ್ತಿದೆ. ತಟ್ಟೆಗಳನ್ನು ಬಳಸಿದರೆ ಪದೇ ಪದೇ ತೊಳೆಯಬೇಕು. ಹೆಚ್ಚಿನ ನೀರು ಬೇಕಾಗುತ್ತದೆ. ಜತೆಗೆ

ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು. ಆಹಾರ ತ್ಯಾಜ್ಯವನ್ನು     ಬಾಳೆ ಎಲೆ ಇಲ್ಲದಿದ್ದರೆ ಆಹಾರ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಾಗಿಸುವ ವ್ಯವಸ್ಥೆ ಮಾಡಬೇಕು. ಒಟ್ಟಾರೆ ಪಾಲಿಕೆ ಮನವಿ ವಿಚಿತ್ರವೆನಿಸಿದೆ ಎಂದು ಹೋಟೆಲ್ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

     ತ್ಯಾಜ್ಯ ಸಂಸ್ಕರಣಾ ಜೈವಿಕ ಅನಿಲ ಘಟಕಗಳಲ್ಲಿ ಬಾಳೆ ಎಲೆ ಸಂಸ್ಕರಣೆ ಕಷ್ಟಕರವೆನಿಸಿದ ಹಿನ್ನೆಲೆಯಲ್ಲಿ ಬಾಳೆ ಎಲೆ ಬಳಕೆ ಕಡಿಮೆ ಮಾಡಲು ಹೇಳಲಾಗಿದೆ.ಆದರೆ, ಬಾಳೆ ಎಲೆ ಬಳಸಲೇಬಾರದು ಎಂದು ಕಡ್ಡಾಯ ಮಾಡಿಲ್ಲ. ಕೆಲವು ಸಂಸ್ಥೆಗಳು ಸ್ಟೀಲ್ ಪ್ಲೇಟ್ ಗಳನ್ನು ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡುತ್ತವೆ. ಕಲ್ಯಾಣ ಮಂಟಪಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

    ಬಾಳೆ ಎಲೆ ಊಟಕ್ಕೆಂದೇ ಸಾಕಷ್ಟು ಮಂದಿ ಹೋಟೆಲ್ ಗಳನ್ನು ಹುಡುಕಿ ಹೋಗುತ್ತಾರೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಕಲ್ಯಾಣ ಮಂಟಪದಲ್ಲಿ ಬಾಳೆಎಲೆ ಮೇಲೆ ಊಟ ಬಡಿಸುವುದು ವಾಡಿಕೆ. ಆದರೆ, ಪ್ಲಾಸ್ಟಿಕ್ ನಿಷೇಧದ ಮಾದರಿಯಲ್ಲೇ ಬಾಳೆಎಲೆ ನಿಷೇಧಕ್ಕೂ ಪೂರ್ವಯೋಜಿತ ಎಂಬಂತೆ ಹೋಟೆಲ್ ಮತ್ತು ಕಲ್ಯಾಣ ಮಂಟಪಗಳಿಗೆ ಬಿಬಿಎಂಪಿ ರೀತಿ ಮನವಿ ಮಾಡಿದೆ ಎಂದು ಕೆಲವರು ದೂರುತ್ತಿದ್ದಾರೆ.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap