ಮಿಡಿಗೇಶಿ
ಮಧುಗಿರಿಯಿಂದ ಪಾವಗಡಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿ ಲೋಕಾರ್ಪಣೆಗೊಂಡ ನಂತರ ಅಪಘಾತಗಳು ಹೆಚ್ಚಾಗಿವೆ. ಪ್ರಮುಖ ಕಾರಣ ಅತಿಯಾದ ವೇಗ, ರಸ್ತೆ ದಾಟುವಾಗ ಹಿಂದೆ-ಮುಂದೆ ವೀಕ್ಷಿಸದಯೇ ಮುನ್ನುಗುತ್ತಿರುವುದು. ನಾಲ್ಕು ಚಕ್ರದ ಕೆಲವು ವಾಹನಗಳು ಹಳೆಯವುಗಳಾಗಿದ್ದು, ಇನ್ಸೂರೆನ್ಸ್ ಸಕಾಲಕ್ಕೆ ಪ್ರೀಮಿಯಮ್ ಪಾವತಿಸದಯೇ, ಪ್ರೀಮಿಯಂ ಪಾವತಿಸುವ ಸಮಯ ಸಮೀಪಿಸುತ್ತಿದ್ದಂತೆ ತಮ್ಮ ವಾಹನಗಳನ್ನು ಅಪಘಾತಕ್ಕಿಡಾದಂತೆ ನಟಿಸಿ ಇನ್ಸೂರೆನ್ಸ್ ಹಣ ಪಡೆಯುತ್ತಾರೆಂಬ ಆರೋಪಗಳು ಸಹ ಕೇಳಿ ಬರುತ್ತಿವೆ.
ಸೆ.23 ರಂದು ಮಧ್ಯಾಹ್ನ 3-25 ಗಂಟೆಯ ಸಮಯದಲ್ಲಿ ಹೊಸಕೆರೆ ಗ್ರಾಮದ ಸಮೀಪ ದ್ವಿಚಕ್ರವಾಹನ ಸವಾರ ಹೊಸಕೆರೆ ಸುರೇಶ ತನ್ನ ವಾಹನದಲ್ಲಿ ರಸ್ತೆಯಲ್ಲಿ ಬರುತ್ತಿರುವಾಗ ಹಿಂಬದಿಯ ದ್ವಿಚಕ್ರವಾಹನ ಸವಾರ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿಯವಾಸಿ ಮಹಲಿಂಗಪ್ಪ ಸುರೇಶನಿಗೆ ಡಿಕ್ಕಿ ಹೊಡೆದಿದ್ದಾನೆ. ಸುರೇಶನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸದರಿ ಗಾಯಾಳುಗೆ ಮಧುಗಿರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಹಚ್ಚಿನ ಚಿಕಿತ್ಸೆ ಪಡೆಯತ್ತಿದ್ದಾನೆ. ಮಹಾಲಿಂಗಪ್ಪನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಮಧುಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಿಡಿಗೇಶಿ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ