ಚಿತ್ರದುರ್ಗ
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳವತಿಯಿಂದ ಇಲ್ಲಿನ ಸ್ಟೇಡಿಯಂ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಅಗಂವಾಗಿ ಇಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಮೆರವಣಿಗೆ ಅರಂಭವಾಗಲಿದ್ದು, ತಡರಾತ್ರಿ ವೇಳೆಗೆ ಗಣಪತಿಯ ವಿಸರ್ಜನೆ ಮಾಡಲಾಗುವುದು. ಶೋಭಾ ಯಾತ್ರೆಗೆ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ. ಈಗಾಗಲೇ ಶೋಭಾಯಾತ್ರೆಗೆ ಇಡೀ ನಗರವೇ ಸಜ್ಜಾಗಿದೆ.
ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ನಗರದ ಆಯಾ ಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
2 ಲಕ್ಷ ಜನರ ನಿರೀಕ್ಷೆ
ಪ್ರತೀ ವರ್ಷದಂತೆ ಈ ಬಾರೀ ಕೂಡ ಶೋಭಾ ಯಾತ್ರೆಯೂ ಇದೆ ಸೆ. 29 ರಂದು ನಡೆಯಲಿದ್ದು, ಸುಮಾರು 2 ಲಕ್ಷ ಭಕ್ತರು ಸೇರುವ ನಿರೀಕ್ಷೆವಿದೆ. ಹಿಂದು ಮಹಾ ಗಣಪತಿ ಸಮಿತಿ ಅಧ್ಯಕ್ಷ ಬದ್ರಿನಾಥ್ ತಿಳಿಸಿದರು.
ನಗರದ ಗಣಪತಿ ಮಹಾ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶೋಭಾ ಯಾತ್ರೆಯಲ್ಲಿ ಭಾಗವಹಿಸಲು ಪಕ್ಕದ ಜಿಲ್ಲೆಗಳು ರಾಜ್ಯಗಳು ಹಾಗೂ ಇಲ್ಲಿಂದ ವಿದೇಶಗಳಿಗೆ ಹೋಗಿರುವ ವಿಧ್ಯಾರ್ಥಿಗಳು ಬಂದಿದ್ದರು.ಈ ಸಾಲಿನ ಶೋಭಾ ಯಾತ್ರೆಯನ್ನು ಉದ್ಘಾಟನೆಯನ್ನು ವಿಜಯಲಕ್ಷ್ಮಿ ದೇಶ್ ಮಾನೆಯವರು ಮಾಡಲಿದ್ದಾರೆ. ವಿಎಚ್ ಪಿಯ ಪ್ರಾಂತ ಸದಸ್ಯ ಜ ರಾ ರಾಮಮೂರ್ತಿ ಆರ್ ಎಸ್ ಎಸ್ ಹಿರಿಯ ಪ್ರಚಾರಕರು ಸು. ರಾಮಣ್ಣ ಆಗಮಿಸಲಿದ್ದಾರೆ ಎಂದರು.
ಶೋಭಾ ಯಾತ್ರೆಯಲ್ಲಿ ಮಂಗಳೂರಿನಿಂದ ಚಂಡೆ ಮದ್ದಳೆ ಅಗಮಿಸಲಿದ್ದು ಅದೇ ರೀತಿ ಆಂಧ್ರದಿಂದಲೂ ವಾದ್ಯಗಳು ಬರಲಿವೆ. ಆದರೆ ಡಿಜೆ ಅನುಮತಿ ಸಿಕ್ಕಿಲ್ಲ ಕೊಡುತ್ತೇವೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಸಾಮಾಜಿಕ ಸಾಮರಸ್ಯದಿಂದ ಜಾತಿ ಧರ್ಮದ ಬೇಧವಿಲ್ಲದೆ ನಡೆದುಕೊಂಡು ಹೋಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಲ್ಲಿಯವರೆಗೂ ನಡೆದುಕೊಂಡು ಬರುತ್ತಿದೆ. ಇದರಲ್ಲಿ ಭಕ್ತರು ಸಾರ್ವಜನಿಕರು ಹಾಗೂ ಇನ್ನಿತರರು ಬಂದು ಭಕ್ತಿ ಭಾವದಿಂದ ಶೋಭಾ ಯಾತ್ರೆ ನಡೆಯಲಿದೆ. ಯಾರಿಗೂ ಯಾವುದೆ ವಾಹನ ವ್ಯವಸ್ಥೆಯನ್ನು ಮಾಡಿಲ್ಲ. ಎಲ್ಲರು ಸ್ವಯಂ ಆಗಿ ಭಾಗವಹಿಸುತ್ತಿದ್ದಾರೆ, ಇದೇ ರೀತಿ ಸಂಘ-ಸಂಸ್ಥೆಯವರು ಸ್ವಯಂ ಆಗಿ ಶೋಭಾಯಾತ್ರೆಯಲ್ಲಿ ಭಾಗವಹಿಸುವ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ತೆಯನ್ನು ಮಾಡುತ್ತಿದ್ದಾರೆ ಎಂದರು.
ಎಲ್ಲಾ ದಾರ್ಶಿನಿಕರು ನಮಗೆ ಸಮಾನರು ಇದೊಂದು ಊರಿನ ಜಾತ್ರೆ ಊರಿನ ಹಬ್ಬ ಅಂಬೇಡ್ಕರ್ ಅವರಿಗೆ ಹೆಚ್ಚಿನ ಗೌರವ ಕೊಟ್ಟರೆ ಅದನ್ನು ವಿರೋಧಿಸುತ್ತಾರೆ. ಅಲಂಕಾರವನ್ನು ವಿರೋಧಿಸಿ ಷಡ್ಯಂತರ ಮಾಡುತ್ತಾರೆ ಇದು ನಮಗೆ ತಿಳಿಯಲಾರದ ರಹಸ್ಯವಾಗಿದೆ. ಪೊಲಿಸರು ಮಾತ್ರ ನಮಗೆ ಅಂಬೇಡ್ಕರ್ ಅವರ ಪ್ರತಿಮಗೆ ಅಲಂಕಾರವನ್ನು ಮಾಡುವುದನ್ನು ತಡೆಯುತ್ತಿದ್ದಾರೆ. ನಾವು ಅಲಂಕಾರ ಮಾಡಿಯೇ ತೀರುತ್ತೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ