ಮುಖ್ಯವಾಹಿನಿಗೆ ಬರಲು ವಿಕಲಚೇತನರಿಗೆ ಕರೆ

ದಾವಣಗೆರೆ:

      ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದು ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಜಿಲ್ಲಾಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞ ಡಾ.ಮಂಜುನಾಥ ಕರೆ ನೀಡಿದರು.

      ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕಿವುಡರ ಸಂಘ, ಸ್ವಾಮಿ ವಿವೇಕಾನಂದ ಜಿಲ್ಲಾ ವಿಕಲಚೇತನರ ಸಂಘ ಹಾಗೂ ದಿ.ಅಸೋಷಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಇವರ ಸಂಯುಕ್ತಾಶ್ರಯಲ್ಲಿ ಏರ್ಪಡಿಸಿದ್ದ ವಿಶ್ವ ವಾಕ್ ಮತ್ತು ಶ್ರವಣದೋಷವುಳ್ಳವರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

     ದೇಶದ ಜನಸಂಖ್ಯೆಯ ಶೇ. 5-6 ರಷ್ಟು ಅಂಕವಿಕಲರು ಇದ್ದಾರೆ. ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿಯೇ ವಾಸಿಸುತ್ತಿದ್ದಾರೆ. ಇಂತಹ ಅಂಗವಿಕಲ ಮಕ್ಕಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿ, ಅವರನ್ನು ಮುಖ್ಯವಾಹಿನಿಗೆ ತರವುದು ಅಗತ್ಯವಾಗಿದೆ ಎಂದರು.
ಮನುಷ್ಯನಿಗೆ ಕಿವಿ ಮತ್ತು ಭಾಷೆ ಪ್ರಮುಖವಾಗಿದೆ.

     ಕಿವಿ ಕೇಳದಿದ್ದರೆ, ಮಾತು ಬಾರದಿದ್ದರೆ, ಜೀವನ ಪೂರ್ತಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ , ಮಕ್ಕಳು ಚಿಕ್ಕವರಿದ್ದಾಗಲೇ ಈ ಬಗ್ಗೆ ಗಮನ ಹರಿಸಿ, ಸೂಕ್ತ ಚಿಕಿತ್ಸೆ ನೀಡಬೇಕೆಂದು ಮಕ್ಕಳು 7 ತಿಂಗಳಲ್ಲಿಯೇ ಶಬ್ದ ಬಂದ ಕಡೆ ನೋಡುವುದು, ಹ್ಞಾ, ಹೂಂ ಎನ್ನುವುದು ಮಾಡುತ್ತದೆ. ಈ ರೀತಿಯಾಗಿ ವರ್ತಿಸಿದರೆ ಆ ಮಗುವಿನ ಕಿವಿ ಕೇಳುತ್ತದೆ, ಮಾತು ಬರುತ್ತದೆ ಎಂದು ತಿಳಿಯಬೇಕು. ಇಲ್ಲದಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಅವರಿಂದ ಸೂಕ್ತ ಚಿಕಿತ್ಸೆ ಪಡೆದು ಮಗುವಿನ ಕಿವುಡುತವನ್ನು ದೂರ ಮಾಡಬಹುದಾಗಿದೆ ಎಂದರು.

     ಕಿವುಡ ಮತ್ತು ಮೂಗ ಮಕ್ಕಳಿಗೆ ಸರಕಾರದಿಂದ ಹಲವಾರು ಸೌಲಭ್ಯಗಳು ಇವೆ. ಕಿವಿ ಕೇಳದಿದ್ದರೆ ಶ್ರವಣ ಸಾಧನ ಯಂತ್ರ ನೀಡಲಾಗುತ್ತದೆ. ಶಸ್ತ್ರ ಚಿಕಿತ್ಸೆ ಅಗತ್ಯ ಇದ್ದರೆ, ಬಿಪಿಎಲ್ ಕಾರ್ಡ್ ಹೊಂದಿರುವ ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ಕ್ಲಾಕಿಯ ಜೋಡಣೆ ಮಾಡಲಾಗುತ್ತದೆ ಎಂದರು.

      ತರಬೇತುದಾರ ರವಿ ಆರ್. ಮಾತನಾಡಿ ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಅಭ್ಯುದಯಕ್ಕಾಗಿ 1969ರಲ್ಲಿ ಎಪಿಡಿ ಸಂಸ್ಥೆ ಪ್ರಾರಂಭಿಸಲಾಗಿದೆ. ಸೆ.26ರಂದು ಅಂಗವಿಕಲರ ದಿನಾಚರಣೆಯನ್ನು 130 ರಾಷ್ಟ್ರಗಳಲ್ಲಿ ಆಚರಣೆ ಮಾಡಲಾಗುತ್ತದೆ. ರಾಜ್ಯದ 14 ಜಿಲ್ಲೆಗಳಲ್ಲಿ ನಮ್ಮ ಸಂಸ್ಥೆ ಕ್ರಿಯಾತ್ಮಕ ಚಟುವಟಿಕೆಯಲ್ಲಿದೆ ಎಂದರು.

     ಭಾಷೆಯ ಕೊರತೆಯಿಂದ ಅಂಗವಿಕಲ ಮಕ್ಕಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಇಂತಹ ಮಕ್ಕಳಿಗೆ ಶಿಕ್ಷಣ ನೀಡಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.

      ವನಿತಾ ಸಮಾಜದ ಸುನಿತಾ ಮಾತನಾಡಿ, ವನಿತಾ ಸಮಾಜದಿಂದ ಅಂಗವಿಕಲ ಮಕ್ಕಳಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

     ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ಸಯಾಹಕ ನಿರ್ದೇಶಕ ಜನಾರ್ಧನ್ ಎ.ಎಲ್ ಅಧ್ಯಕ್ಷತೆ ವಹಿಸಿದ್ದರು. ವಿಜಯ ಅಕ್ಕಿ, ಗಿರೀಶ್ ಬಿ.ಟಿ. ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.ಕಾರ್ಯಕ್ರಮ ಆರಂಭಕ್ಕೆ ಮುನ್ನ ನಗರದ ಜಯದೇವ ವೃತ್ತದಿಂದ ಕುವೆಂಪು ಕನ್ನಡ ಭವನದವರೆಗೆ ಜಾಥಾ ನಡೆಯಿತು.

                        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap