ಹರಿಹರ;
ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಎಸ್‍ಎಸ್‍ಕೆ ಸಮಾಜ, ಕರವೇ ಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ನಾಗರಾಜ್ ಮೆಹರ್ವಾಡೆ ಮಾತನಾಡಿ, ಶಂಕರ ಕಣ್ಣಿನ ಆಸ್ಪತ್ರೆಯವರು ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಶಸ್ತ್ರ ಚಿಕಿತ್ಸೆ ನಿರಂತರವಾಗಿ ಮಾಡುತ್ತಿದೆ. ಇದರಿಂದ ಬಡ ಹಾಗೂ ದುರ್ಬಲ ವರ್ಗದವರಿಗೆ ಅನುಕೂಲವಾಗುತ್ತಿದೆ.
ಹಣ ಇಲ್ಲವೆಂದು ಚಿಕಿತ್ಸೆ ಪಡೆಯದೆ ಮನೆಯಲ್ಲೆ ಉಳಿಯುವ ಜನರೂ ಇದ್ದಾರೆ. ದೇಹದ ಮುಖ್ಯ ಅಂಗವಾದ ಕಣ್ಣಿನ ದೃಷ್ಟಿ ದೋಷದೊಂದಿಗೆ ನರಳುತ್ತಾ ಬದುಕುತ್ತಾರೆ. ಅಂತಹವರಿಗೆ ಹತ್ತಾರು ಸಾವಿರ ರೂ. ಖರ್ಚು ಮಾಡುವ ಶಕ್ತಿ ಇರುವುದಿಲ್ಲ. ಇಂತಹ ಶಿಬಿರದ ಮೂಲಕ ಅವರು ದೃಷ್ಟಿಯನ್ನು ಮರಳಿ ಪಡೆಯುತ್ತಾರೆ ಎಂದರು.
ಶಂಕರ ಆಶ್ಪತ್ರೆಯ ವೈದ್ಯಾಧಿಕಾರಿ ಡಾ.ವಿದ್ಯಾ ಜೋಶಿ ನೇತೃತ್ವದ ವೈದ್ಯರ ತಂಡ ತಪಾಸಣೆ ನಡೆಸಿತು. 585 ಜನರನ್ನು ತಪಾಸಣೆ ಮಾಡಲಾಗಿದ್ದು ಈ ಪೈಕಿ 161 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಎಸ್‍ಎಸ್‍ಕೆ ಸಮಾಜದ ಅಧ್ಯಕ್ಷ ವಸಂತ್ ಎಂ.ಭೂತೆ, ಕರವೇ ತಾಲೂಕು ಅಧ್ಯಕ್ಷ ನಾಗರಾಜ ಗೌಡ, ಮುಖಂಡರಾದ ಆಟೋ ರಾಜು, ನೇತ್ರಾವತಿ ಎ.ಟಿ., ಆಡಳಿತ ವೈದ್ಯಾಧಿಕಾರಿ ಎಲ್.ಹನುಮನಾಯಕ್ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








