ಚಿತ್ರದುರ್ಗ:
ತರಬೇತಿಯ ಮೂಲಕ ಎನ್.ಟಿ.ಎಸ್.ಇ.ಮತ್ತು ಎನ್.ಎಂ.ಎಂ.ಎಸ್.ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಕಂಡುಕೊಳ್ಳಬಹುದು ಎಂದು ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ಮಹೇಶ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಎಂಟನೆ ತರಗತಿಯ ಎನ್.ಎಂ.ಎಂ.ಎಸ್.ಪರೀಕ್ಷೆ ಹಾಗೂ ಹತ್ತನೆ ತರಗತಿಯ ಎನ್.ಟಿ.ಎಸ್.ಇ.ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆ ಆಡಳಿತ ಮಂಡಳಿ ಹಾಗೂ ಶಾಲೆ ವತಿಯಿಂದ ಪ್ರತಿ ಶನಿವಾರ ಬೆಳಿಗ್ಗೆ 11-30 ರಿಂದ 2-30 ರವರೆಗೆ ಉಚಿತವಾಗಿ ನೀಡುವ ತರಬೇತಿಯಲ್ಲಿ ಪ್ರತಿ ವಿದ್ಯಾರ್ಥಿಗಳು ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳು ಹೇಳುವ ವಿಚಾರಗಳನ್ನು ಶ್ರದ್ದೆಯಿಂದ ಕೇಳಿ ಎನ್.ಟಿ.ಎಸ್.ಇ. ಮತ್ತು ಎನ್.ಎಂ.ಎಂ..ಎಸ್.ಪರೀಕ್ಷೆಗಳಲ್ಲಿಯಶಸ್ಸು ಕಂಡುಕೊಳ್ಳಿ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹರೀಶ್ ಪರೀಕ್ಷೆ ಬರೆಯುವ ವಿಧಾನ, ಪಠ್ಯಕ್ರಮ ಹಾಗೂ ಪರೀಕ್ಷೆಗೆ ಯಾವ ರೀತಿ ಸಿದ್ದತೆ ನಡೆಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಐವತ್ತು ವಿದ್ಯಾರ್ಥಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ