ಬೆಂಗಳೂರು
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥೂರಾಂ ಗೋಡ್ಸೆಯು ತಾನು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‍ಎಸ್‍ಎಸ್)ದಲ್ಲಿ ಸಕ್ರಿಯವಾಗಿರುವುದನ್ನು ಪತ್ರಿಕೆಯೊಂದರಲ್ಲಿ ಉಲ್ಲೇಖಿಸಿದ್ದ ಎಂದು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರು ಬಹಿರಂಗಪಡಿಸಿದರು.
ಮಹಾತ್ಮ ಗಾಂಧಿ ಹತ್ಯೆಗೂ ಮುನ್ನ ಬೆಂಗಳೂರಿಗೆ ಬಂದಿದ್ದ ಗೋಡ್ಸೆಯು ನಾನು ನಡೆಸುತ್ತಿದ್ದ ಪತ್ರಿಕೆಯಲ್ಲಿ ಆರ್‍ಎಸ್‍ಎಸ್‍ನಲ್ಲಿ ಗುರಿತಿಸಿಕೊಂಡಿರುವುದನ್ನು ಉಲ್ಲೇಖಿಸಿದ್ದನು ಇದನ್ನು ಕೆಲವರು ನನ್ನನ್ನು ಪ್ರಶ್ನೆ ಮಾಡಿದ್ದರು.ತದನಂತರ ಪುರಾವೆಗಳನ್ನು ನೀಡಿದ್ದೇ ಆದರೆ ಇದನ್ನು ಗಂಭೀರವಾಗಿ ಪರಿಗಣಿಸದೇ ಸುಳ್ಳು ಎನ್ನಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಏರ್ಪಡಿಸಿದ್ದ, ‘ನಮ್ಮೊಳಗಿನ ಗಾಂಧಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಎರಡು ಶತಮಾನಕ್ಕಿಂತಲೂ ಹೆಚ್ಚು¬ಕಾಲ ಭಾರತ ದೇಶ, ಬ್ರಿಟಿಷರ ದಾಸ್ಯವನ್ನು ಅನುಭವಿಸಿತ್ತು. ಗುಲಾಮಗಿರಿ ಕೊನೆಗೊಳ್ಳ-ಬೇಕೆಂದು ಗಾಂಧೀಜಿ ಎಂಬ ದೈತ್ಯಶಕ್ತಿ ಎದ್ದುಬಂತು. ಪ್ರತಿಯೊಂದು ಹೋರಾಟವೂ ಹೋರಾಟ¬ಗಾರನಿಗೆ ಜನ್ಮ ನೀಡುತ್ತದೆ ಎಂದರು.
ಸ್ವಾತಂತ್ರ್ಯ ಸಂಗ್ರಾಮ ಗಾಂಧೀಜಿ ಅನ್ನುವ ಸತ್ಯಾಗ್ರಹಿಯ ಹುಟ್ಟಿಗೆ ಕಾರಣವಾಯಿತು. ಗಾಂಧೀಜಿ ತನ್ನ ಹೋರಾಟಕ್ಕೆ ಇಟ್ಟುಕೊಂಡಂತಹ ದೇಶಪ್ರೇಮ ಅರ್ಥಪೂರ್ಣವಾಗಿತ್ತು. ತನ್ನ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲೇಬೇಕು ಎನ್ನುವ ಅದಮ್ಯ ಉತ್ಸಾಹ ಗಾಂಧೀಜಿಗೆ ಇತ್ತು.ವಿದೇಶಿ ಉಡುಪುಗಳನ್ನು ತೊರೆಯಬೇಕು, ಸ್ವದೇಶಿ ಉಡುಪುಗಳನ್ನು ಧರಿಸಬೇಕು. ಸ್ವದೇಶಿ ಆಂದೋಲನದ ಬಿಸಿಯನ್ನು ಬ್ರಿಟಿಷರಿಗೆ ಮುಟ್ಟಿಸಬೇಕೆಂಬ ಸದಾಶಯವು ಗಾಂಧಿ ತತ್ವದಲ್ಲಿ ಸೇರಿತ್ತು.ಆದರೆ, ಇದೀಗ, ವಿದೇಶ ಬಂಡವಾಳಗಾರರನ್ನು ಆದ್ಯತೆ ನೀಡಿ, ಸ್ವದೇಶಿ ಸಂಸ್ಕೃತಿ ನಾಶಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
ಕೇಂದ್ರ ವಿವಿಯ ಕುಲಪತಿ ಎಸ್.ಜಾಫೆಟ್ ಮಾತನಾಡಿ, ಮಹಾತ್ಮ ಗಾಂಧಿಯವರ ಇಡೀ ಜೀವನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ನುಡಿದರು.
ನಿರುದ್ಯೋಗ ಸಮಸ್ಯೆ, ಬಡತನ, ಕೋಮುವಾದ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿದೆ.ಇದಕ್ಕೆ ಪರಿಹಾರಗಳನ್ನು ಗಾಂಧೀಜಿ ತತ್ವ ಗಳಿಂದ ಬಗೆಹರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗಾಂಧೀಜಿಯವರು ಅಹಿಂಸೆ, ಸತ್ಯಾಗ್ರಹ, ಅಸಹಕಾರದ ಮೂಲಕ ಬ್ರಿಟೀಷರಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಜೀವನದ ಕೊನೆಯ ವರೆಗೆ ಸಚ್ಚಾರಿತ್ರ್ಯ ಮತ್ತು ನೈತಿಕ ಮೌಲ್ಯಗಳಿಗೆ ಬದ್ಧರಾಗಿದ್ದರು. ಆದ್ದರಿಂದಲೇ ಅವರನ್ನು ಮಹಾತ್ಮ ಎಂದು ಗೌರವಿಸಲಾಗುತ್ತದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
