ಎರಡು ಬೈಕ್‍ಗಳ ಮುಖಾಮುಖಿ ಡಿಕ್ಕಿ

ಬೆಂಗಳೂರು

    ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಯುವಕನೊಬ ಮೃತಪಟ್ಟರೆ, ಇತರ ಮೂವರು ಯುವಕರು ಗಾಯಗೊಂಡಿರುವ ದುರ್ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ತಿಂಡ್ಲು ರಸ್ತೆಯಲ್ಲಿನಡೆದಿದೆ.

    ಮೃತಪಟ್ಟವರನ್ನು ತೊಂಡೆಬಾವಿಯ ದೊಡ್ಡಮಲ್ಲನಕೆರೆಯ ಖಾಸಗಿ ಕಂಪನಿ ಉದ್ಯೋಗಿ ಪರಮೇಶ್ (25)ಎಂದು ಗುರುತಿಸಲಾಗಿದೆ. ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂರ್ತಿ, ಶಿವು ಸೇರಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಿಂಡ್ಲು ರಸ್ತೆಯ ನಂಜಪ್ಪ ಸರ್ಕಲ್‍ನ ತಿರುವಿನ ಬಳಿ ರಾತ್ರಿ 8.15ರ ವೇಳೆ ಪರಮೇಶ್ ಅವರು ಇನ್ನೊಬ್ಬರನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಮತ್ತೊಂದು ಬೈಕ್‍ನಲ್ಲಿ ಬಂದ ಮೂರ್ತಿ ಹಾಗೂ ಶಿವು ಡಿಕ್ಕಿ ಹೊಡೆದಿದ್ದಾರೆ.

     ಡಿಕ್ಕಿಯ ರಭಸಕ್ಕೆ ಮುಖ ಹಾಗೂ ತಲೆಗೆ ಗಂಭೀರವಾಗಿ ಗಾಯಗೊಂಡು ಪರಮೇಶ್ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಮೂವರು ಗಾಯಗೊಂಡರು. ಗಾಯಗೊಂಡವರಲ್ಲಿ ಮೂರ್ತಿಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

     ಪ್ರಕರಣ ದಾಖಲಿಸಿರುವ ಯಲಹಂಕ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾ.ರಾ. ಪಾತಿಮಾ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link