ನಗರದಲ್ಲಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ : ಅಲೋಕ್ ಕುಮಾರ್

ಬೆಂಗಳೂರು

    ನಗರದಲ್ಲಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಿ ಮಟ್ಕಾ, ಭೂ ಒತ್ತುವರಿ ಮುಂತಾದ ಸಂಘಟಿತ ಅಪರಾಧಗಳನ್ನು ಹತ್ತಿಕ್ಕಲು ಶ್ರಮಿಸಬೇಕು ಇಲ್ಲದಿದ್ದರೇ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿಸಿಬಿಯ ಹೆಚ್ಚವರಿ ಪೊಲೀಸ್ ಆಯಕ್ತ ಅಲೋಕ್ ಕುಮಾರ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಿಸಿಬಿಯ ಡಿಸಿಪಿಗಳು ಎಸಿಪಿಗಳು ಇನ್ಸ್ ಪೆಕ್ಟರ್ ಸಬ್‍ಇನ್ಸ್‍ಪೆಕ್ಟರ್‍ಗಳ ಸಭೆ ನಡೆಸಿದ ಅಲೋಕ್ ಕುಮಾರ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ನಗರದಲ್ಲಿ ಕಾರ್ಯಪ್ರವೃತ್ತರಾಗಿರುವ ರೌಡಿಗಳನ್ನ ಪತ್ತೆ ಮಾಡಿ ನಿಗಾ ಇಡಿ.ಮುಖ್ಯಮಂತ್ರಿಗಳು ನನ್ನ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಕರೆಸಿಕೊಂಡಿದ್ದಾರೆ. ನಂಬಿಕೆ ಉಳಿಸಿಕೊಳ್ಳಬೇಕಿದೆ. ಹೀಗಾಗಿ ಎಲ್ಲರೂ ಕೂಡಲೇ ಶಕ್ತಿಮೀರಿ ಕೆಲಸ ಮಾಡಿ ಎಂದು ಸೂಚನೆ ನೀಡಿದರು.

     ಇಸ್ಪೀಟ್ ಅಡ್ಡೆ, ಮಟ್ಕಾ, ಭೂ ಒತ್ತುವರಿ ಬ್ರೇಕ್ ಹಾಕಬೇಕು. ಮಸಾಜ್ ಪಾರ್ಲರ್ ಗಳಿಗೆ ಕಡಿವಾಣ ಹಾಕಿ. ಇಲ್ಲಂದ್ರೆ ಸಿಎಂ ಡಿಸಿಎಂ ಕೇಳಿದಾಗ ಏನು ಹೇಳೋದು. ಸಿಸಿಬಿ ಅಂದ್ರೆ ವಾರ್ ರೂಂ, ಹಗಲು ರಾತ್ರಿ ಕೆಲಸವಾಗಬೇಕು ಡೇಟ್ ಇಟ್ಕೊಂಡು ಕೆಲಸ ಮಾಡಬೇಡಿ.ನಮ್ಮ ಕೆಲಸ ನೋಡಿ ಹಿರಿಯ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಜನರಿಗೆ ನಂಬಿಕೆ ಬರಬೇಕು ಎಂದು ಅಲೋಕ್ ಕುಮಾರ್ ಅಧಿಕಾರಿಗಳಿಗೆ ತಿಳಿಸಿದರು.

    ರಿಯಲ್ ಎಸ್ಟೇಟ್ ಸಿವಿಲ್ ಕೇಸ್ ಗಳಲ್ಲಿ ಮಧ್ಯಪ್ರವೇಶ ಬೇಡ. ಸಿಸಿಬಿ ದಾಳಿ ಬಗ್ಗೆ ಬೇರೆಯವರ ಜತೆ ಚರ್ಚೆ ಮಾಡಬೇಡಿ. ಪದೇ ಪದೇ ಅಪರಾಧ ಮಾಡುವವರಿಗೆ ಎಚ್ಚರಿಕೆ ಮಾಡಿ. ಇಲ್ಲದಿದ್ದರೇ ಗೂಂಡಾ ಕೇಸ್ ದಾಖಲಿಸಿ ಉತ್ತಮ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ