ಇಂದಿರಾ ಕ್ಯಾಂಟೀನ್ ಉದ್ಘಾಟನೆ

ಪಾವಗಡ:

      ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬರುತ್ತೇವೆ ಎಂಬುದು ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ತಿರುಕನ ಕನಸು. ಸರ್ಕಾರ ಅಲುಗಾಡಿಸಲು ಸಾಧ್ಯವಿಲ್ಲ. ಸರ್ಕಾರಕ್ಕೆ ಯಾವುದೇ ಅಭದ್ರತೆ ಇಲ್ಲ ಎಂದು ರಾಜ್ಯ ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದ್ದಾರೆ.

      ಶನಿವಾರ ಪಾವಗಡ ದಲ್ಲಿ ನಡೆದ ಪಶುವೈದ್ಯ ಇಲಾಖೆ ಕಟ್ಟಡ ಹಾಗೂ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿ ಕಡಿಮೆ ಬೆಲೆಗೆ ತಿಂಡಿಕೊಡುವ ಉದ್ದೇಶದಿಂದ ರಾಜ್ಯದೆಲ್ಲೆಡೆ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದೆ ಇದರ ಸದುಪಯೋಗ ಜನತೆ ಪಡೆಯಬೇಕು ಎಂದು ತಿಳಿಸಿದರು.

      ಪಾವಗಡಕ್ಕೆ ಭಧ್ರ ಮೇಲ್ಡಂಡೆ ಯೋಜನೆ ನೀರು ಬಂದೇ ಬರುತ್ತದೆ. ಕಳೆದ ಹಲವು ದಿನಗಳ ಕಾಲ ಸರಣಿ ಸಭೆ ನಡೆಸಿ ಭಧ್ರಾ ಮೇಲ್ಡಂಡೆ ಯೋಜನೆಯ ಸಮಗ್ರ ಪರಾಮರ್ಶೆಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ವಿವಿಸಾಗರಕ್ಕೆ ನೀರು ಹರಿಯಲಿದ್ದು ಕೆಲವೇ ಮೀಟರ್ ಉದ್ದದ ಸುರಂಗ ಮಾರ್ಗ ಕೊರೆಯುವುದು ಪೂರ್ಣವಾದರೆ ಚಿತ್ರದುರ್ಗ ಚಾಲನ್‍ಗೆ ನೀರು ಹರಿಯಲಿದೆ.

      ಆನಂತರ ಪಾವಗಡ ನೀರು ಹರಿಸುವ ಚಾನಲ್‍ಗೆ ಸರ್ವೆ ಇಷ್ಟರಲ್ಲೇ ಪ್ರಾರಂಭವಾಗಲಿದೆ. ಸಿದ್ದೇಶ್ವರನ ದುರ್ಗದಲ್ಲಿ ಲಿಫ್ಟ್ ಮಾಡಿ ಶೈಲಾಪುರದವರೆಗೆ ನೀರು ಹರಿಸಿ ಅಲ್ಲಿ ಲಿಫ್ಟ್ ಮಾಡಿ ತಾಲ್ಲೂಕಿಗೆ ಕೊಳವೆ ಗಳ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ ಎಂದು ತಿಳಿಸಿದರು.

       ತುಂಗ ಭದ್ರಾ ಹಿನ್ನೀರಿನ ಕುಡಿಯುವ ನೀರು ಯೋಜನೆಗೆ ಟೆಂಡರ್ ಅಗ್ರಿಮೆಂಟ್ ಮುಗಿದು ಯೋಜನೆ ಕಾಮಕಾರಿ ಪಾವಗಡದ ಮೂಲಕ ಪ್ರಾರಂಭವಾಗುವ ಹಂತದಲ್ಲಿದೆ. ಇಷ್ಟರಲ್ಲೆ ಪಾವಗಡದಲ್ಲಿ ಗುದ್ದಲಿ ಪೂಜೆ ನಡೆಯಲಿದೆ ಮತ್ತು ಎತ್ತಿನ ಹೊಳೆ ಯೋಜನೆಯಿಂದ ತಾಲ್ಲೂಕಿಗೆ ನೀರು ತರುವ ಯೋಜನೆ ಪ್ರಗತಿಯಲ್ಲಿದ್ದು ಮಡಕಶಿರಾ ಮೂಲಕ ವೆಂಕಟಾಪುರ ಹಾಗೂ ತಿರುಮಣಿ ಕೆರೆಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ ಇದರ ಸರ್ವೆಕೆಲಸ ಪ್ರಾರಂಭವಾಗಲಿದೆ ಎಂದರ.

        ಸಂಯುಕ್ತ ಸರ್ಕಾರಕ್ಕೂ ಹಿಂದಿನ ಸರ್ಕಾರದ ಯೋಜನೆಗಳನ್ನು ಮುಂದುವರೆಸುವ ಆಸಕ್ತಿ ಇದೆ ಸಿದ್ದರಾಮಯ್ಯ ರೂಪಿಸಿದ ಅನೇಕ ಯೋಜನೆಗಳು ಇಂದು ಮುಂದುವರೆದು ಕೊಂಡು ಹೋಗುತ್ತಿವೆ ಎಂದರು.

        ರೈಲು ಯೋಜನೆ ಭೂಸ್ವಾಧೀನ ಕಾರ್ಯ ಪಾವಗಡ ಕೊರಟಗೆರೆ ಮಧುಗಿರಿ ತಾಲ್ಲುಕಿನಲ್ಲಿ ನಡೆಯಬೇಕಿದೆ. ವೇಗವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

        ಚಿತ್ರದುರ್ಗ ಲೋಕಸಭಾ ಸದಸ್ಯ ಎಂ ಚಂದ್ರಪ್ಪ ನದಿನೀರು ಯೋಜನೆಗಳಿಗೆ ಚುರುಕುನೀಡುವ ಕೆಲಸ ಮಾಡಲಾಗಿದೆ. ತಾಲ್ಲೂಕಿಗೆ ನೀರು ಕೊಡುವ ವಿಚಾರದಲ್ಲಿ ಸರ್ಕಾರ ಉತ್ಸುಕತೆಯಿಂದ ಇದೆ. ಜಾರಕಿ ಹೊಳಿ ಅವರು ಸರ್ಕಾರಕ್ಕೆ ಕಂಟಕ ಮಾಡುತ್ತೇನೆ ಎಂಬ ಮಾತು ಎಂದೂ ಹೇಳಿಲ್ಲ ಎಂದು ಹೇಳಿದರು.

         ಅನ್ನದಾಸೋಹಕ್ಕೆ ಶರಣರು ಕೊಟ್ಟ ಮಹತ್ವದ ಹಿನ್ನೆಲೆಯಲ್ಲಿ ಅನ್ನಕೊಟ್ಟ ಮನೆಯನ್ನು ಜನ ಎಂದಿಗೂ ಮರೆಯೋದಿಲ್ಲ ಎಂಬುದನ್ನು ಮನದಲ್ಲಿ ಇಟ್ಟುಕೊಂಡು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದೆ ಎಂದರು.

        ಚೆನ್ನಕೇಶವಪುರದಲ್ಲಿ ಕುಡಿಯುವನೀರು ಘಟಕ ಹಾಗೂ ಅಂಗಡಿ ಮಳಿಗೆಗಳ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಸುಮಾ ಅನಿಲ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೊಗಡು ವೆಂಕಟೇಶ್. ಉಪಾಧ್ಯಕ್ಷೆ ಕೃಷ್ಣವೇಣಮ್ಮ. ಪುರಸಭೆ ಉಪಾಧ್ಯಕ್ಷೆ ಲಕ್ಷಮ್ಮ ಪುರಸಭೆ ಮಾಜಿ ಸದಸ್ಯ ಫಜುಲುಲ್ಲಾ ಹಾಗೂ ಪುರಸಭೆ ಸದಸ್ಯ ಸುದೇಶ್‍ಬಾಬು ರಾಜೇಶ್ ರಿಜ್ವಾನ್ ಫೋಟೋ ಅಮರ್ ಉಪಸ್ಥಿತರಿದ್ದರು.

                       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap