ದಾವಣಗೆರೆ :
ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಹೋಬಳಿವಾರು ಜನಸ್ಪಂದನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಈ ಜನಸ್ಪಂದನ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಶೀಲಾ ಕೆ.ಆರ್ ಅವರು ಸಾರ್ವಜನಿಕರಿಗೆ ಕರೆ ನೀಡಿದರು.
ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯ್ತಿ, ಹರಿಹರ ಇವರ ಸಹಯೋಗದೊಂದಿಗೆ ಮಲೇಬೆನ್ನೂರು ಪಟ್ಟಣದ ಸುನ್ನಿ ಜಾಮೀಯಾ ಶಾದಿ ಮಹಲ್‍ನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನಸಾಮಾನ್ಯರು ಸರ್ಕಾರದ ಸೌಲತ್ತುಗಳನ್ನು ಪಡೆಯಲು ತಮ್ಮ ಅಹವಾಲುಗಳನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ನೀಡಲು ಆಗಮಿಸಿದ್ದಾರೆ.
ಅರ್ಹ ಪಲಾನುಭವಿಗಳಿಗೆ ಸಾಧ್ಯವಾದಷ್ಟು ಬೇಗನೆ ಸರ್ಕಾರದ ಸೌಲತ್ತುಗಳು ದೊರೆಯುವಂತಾಗಲಿ. ಈ ನಿಟ್ಟಿನಲ್ಲಿ ಅಧಿಕಾರಿಗಳ ಪಾತ್ರವು ಪ್ರಮುಖವಾಗಿದೆ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಿ ಸೌಲಭ್ಯ ದೊರಕಿಸುವಂತೆ ತಿಳಿಸಿದರು.
ಸರ್ಕಾರವು ಘೋಷಿಸಿದ ಬರಪೀಡಿತ ತಾಲ್ಲೂಕುಗಳಲ್ಲಿ ಹರಿಹರ ತಾಲ್ಲುಕು ಸಹ ಒಂದಾಗಿದೆ. ರೈತ ಬಿತ್ತನೆ ಮಾಡಿದಾಗ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಬೆಳೆ ಒಣಗುತ್ತದೆ. ಕಷ್ಟ ಪಟ್ಟು ಬೆಳೆ ಬೆಳೆಸಿದರೇ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾಗುತ್ತದೆ. ಇದರಿಂದ ರೈತ ಸಮುದಾಯ ತೊಂದರೆಗಿಡಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ ಅವರು ಪ್ರಾಸ್ತಾವಿಕ ಮಾತನಾಡಿ, ಸರ್ಕಾರದ ವಿವಿಧ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದೆ ಎಂದರು. ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ತಕ್ಷಣವೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ನೀಡಲಾಗುವುದು. ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಬೇಕು. ಈ ಜನಸ್ಪಂದನ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ವೃದ್ಧಾಪ್ಯ ವೇತನ, ಹಕ್ಕುಪತ್ರ ವಿತರಣೆ, ಉಜ್ವಲ ಯೋಜನೆ, ಕೃಷಿ ಭಾಗ್ಯ, ಅಂತರ್ ಜಾತಿ ವಿವಾಹಿತರಿಗೆ ಪ್ರೋತ್ಸಾಹಧನ ಚೆಕ್ ವಿತರಣೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಈ ಕಾರ್ಯಕ್ರಮದಲ್ಲಿ ವಿತರಣೆ ಮಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎಂ.ವಾಗೀಶಸ್ವಾಮಿ ಹಾಗೂ ಮಲೇಬೆನ್ನುರು ಪುರಸಭೆ ಅಧ್ಯಕ್ಷೆ ಶ್ರೀಮತಿ ಬಿ.ಕೆ.ಅಂಜಿನಮ್ಮ ಅವರು ಮಾತನಾಡಿ, ಮಲೇಬೆನ್ನೂರಲ್ಲಿ ಕಸ ವಿಲೇವಾರಿ ಮಾಡುವುದು ಸಮಸ್ಯೆಯಾಗಿದೆ. ಇದರಿಂದ ಪಟ್ಟಣದ ಸ್ವಚ್ಚತೆಗೆ ತೋದರೆಯಾಗಿದ್ದು ಕಸವಿಲೇ ಮಾಡಲು ಸೂಕ್ತ ಸ್ಥಳದ ಅವಶ್ಯಕತೆಯಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು. ಮಲೇಬೆನ್ನುರು ಪುರಸಭೆಯಾಗಿರುವುದರಿಂದ ಇಲ್ಲಿಗೆ ಒಂದು ಅಗ್ನಿಶಾಮಕ ಠಾಣೆ, ಕಚೇರಿಗಳಿಗೆ ಸೂಕ್ತ ಕಟ್ಟಡ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಅಗತ್ಯವಿದೆ ಎಂದರು.
ಹರಿಹರ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹೆಚ್ ಎಸ್ ಶ್ರೀದೇವಿ ಮಂಜಪ್ಪ ಅವರು ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಯಾಪ್ಯ ಯೋಜನೆ, ಅಂಗವಿಕ ವೇತನ ಸೇರಿದಂತೆ ಮತ್ತಿತರ ಯೋಜನೆಗಳು ಸರಿಯಾದ ಅರ್ಹರಿಗೆ ಶೀರ್ಘ ದೊರೆಯಲಿ ಎಂದು ಅಭಿಪ್ರಾಯಪಟ್ಟರು.
ಹರಿಹರ ಶಾಸಕ ಎಸ್ ರಾಮಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಸ್ಪಂದನ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಇಲ್ಲಿ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಸಲ್ಲಿಸಬಹುದು. ಹಾಗೂ ಪರಿಹಾರವನ್ನು ಪಡೆಯಬಹುದಾಗಿದೆ. ಅರ್ಹರಿಗೆ ಸರ್ಕಾರದಿಂದ ಸರಿಯಾಗಿ ಹಕ್ಕುಪತ್ರ ವಿತರಣೆ ಆಗಬೇಕು ಎಂದರು.
ಇಂದಿನ ಕಾರ್ಯಕ್ರಮಲ್ಲಿ ಒಟ್ಟು 365 ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಜೂರಾತಿ ಪತ್ರಗಳನ್ನು ನೀಡಲಾಯಿತು. ಹಾಗೂ 49 ಫಲಾನುಭವಿಗಳಿಗೆ ಹಕ್ಕುಪತ್ರಗಳು ಸೇರಿದಂತೆ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಸ್ಥಳದಲ್ಲೆ ಮಂಜುರಾತಿ ಆದೇಶ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅರ್ಚನಾ ಬಸವರಾಜ್, ಶ್ರೀಮತಿ ಹೇಮಾವತಿ ವಿ.ಡಿ, ಹರಿಹರರ ಕೃರಷಿಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಗೌಡ್ರ ಶೇಖರಪ್ಪ, ತಾಪಂ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಮಾಂತೇಶ, ಭಾಗ್ಯಲಕ್ಷ್ಮೀ,ಕೆ.ಬಸನಗೌಡ, ಮಹಾಂತೇಶ, ತಾಪಂ ಉಪಾಧ್ಯಕ್ಷೆ ಜಯಮ್ಮ ಬಸಲಿಂಗಪ್ಪ, ತಹಶೀಲದಾರ ರೆಹಾನ್‍ಪಾಷಾ, ತಾಪಂ ಇಓ ಕೆ.ನೀಲಗಿರಿಯಪ್ಪ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
