ಹರಿಹರ;
ನಗರ ಪೊಲೀಸ್ ಠಾಣೆ ನಿರ್ಮಾಣಕ್ಕಾಗಿ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಆರ್. ನಿವೇಶನಗಳ ಪರಿಶೀಲನೆ ನಡೆಸಿದರು.
ನಗರದ ದಾವಣಗೆರೆ ಪಾಲಿಕೆ ಹಳೆ ನೀರು ಸರಬರಾಜು ಕೇಂದ್ರ ಹಾಗೂ ಹರಪನಹಳ್ಳಿ ರಸ್ತೆ ಹಳೆ ಜೆಎಂಎಫ್‍ಸಿ ನ್ಯಾಯಾಲಯದ ಆವರಣವನ್ನು ಪರಿಶೀಲಿಸಿದ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಪಿಐ ಕಚೇರಿ ಇರುವ ಆವರಣದಲ್ಲಿ (ಹಳೆ ನಗರಠಾಣೆ ಜಾಗ) ನಗರಠಾಣೆ ನಿರ್ಮಿಸಲೆಂದು ಈಗಾಗಲೆ ಅನುದಾನ ಬಿಡುಗಡೆಯಾಗಿದೆ, ಟೆಂಡರ್ ಆಗಿ ಏಜೆನ್ಸಿ ಫಿಕ್ಸ್ ಆಗಿದೆ. ಆದರೆ ಅಲ್ಲಿ ಠಾಣೆ ಕಟ್ಟಡ ನಿರ್ಮಿಸಿದರೆ ಸಿಬ್ಬಂದಿ ವಾಹನ, ಪ್ರಕರಣಗಳ ವಾಹನಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶ ಇಲ್ಲದಂತಾಗುತ್ತದೆ.
ಪಾಲಿಕೆ ನೀರು ಸರಬರಾಜು ಕೇಂದ್ರದ ಜಾಗ ನಗರದಿಂದ ದೂರ ಅನಿಸುತ್ತದೆ. ಹಳೆ ಜೆಎಂಎಫ್‍ಸಿ ಜಾಗವು ಸೂಕ್ತವಾಗಿದೆ. ಠಾಣೆ ಇಲ್ಲಿದ್ದರೆ ನೊಂದವರ ನೆರವಿಗೆ ಆದಷ್ಟು ಶೀಘ್ರ ಧಾವಿಸಲು ಅನುಕೂಲವಾಗುತ್ತದೆ. ನಗರಸಭೆಯವರಿಗೆ, ಶಾಸಕರಿಗೆ ಈ ಜಾಗವನ್ನು ಠಾಣೆಗೆ ನೀಡಲು ಕೋರಿಕೆ ಸಲ್ಲಿಸಲಾಗುವುದು.
ಸಿಪಿಐ ಐ.ಎಸ್.ಗುರುನಾಥ್ ಮಾತನಾಡಿ, ಸಿಪಿಐ ಕಚೇರಿ ಆವರಣದಲ್ಲಿ ನಗರಠಾಣೆ ನಿರ್ಮಿಸಿದರೆ ಮಿನಿ ವಿಧಾನಸೌಧದ ಸ್ಥಿತಿ ಬರುತ್ತದೆ. ಮಿನಿ ವಿಧಾನಸೌಧ ಮುಂದೆ ವಾಹನ ನಿಲುಗಡೆಗೆ ಜಾಗವಿಲ್ಲದೆ ಸಿಬ್ಬಂದಿ ಹಾಗೂ ಸಾರ್ವಜನಿಕರು ತ್ಮ ವಾಹನಗಳನ್ನು ರಸ್ತೆ ಮೇಲೆ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ರಸ್ತೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ.ತರಾತುರಿಯಲ್ಲಿ ಸಿಪಿಐ ಕಚೇರಿ ಆವರಣದಲ್ಲಿಯೆ ಠಾಣೆ ನಿರ್ಮಿಸಿದರೆ ಅನಾನುಕೂಲತಗಳಿಂದಾಗಿ ಕೆಲವೇ ವರ್ಷಗಳಲ್ಲಿ ಠಾಣೆಗಾಗಿ ಹೊಸ ಜಾಗ ಹಾಗೂ ಅನುದಾನ ಬೇಕಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಸೂಕ್ತ ಜಾಗದಲ್ಲಿಯೆ ಠಾಣೆ ನಿರ್ಮಿಸುವುದು ಒಳಿತು ಎಂದರು.ನಗರ ಠಾಣೆ ಪಿಎಸ್‍ಐ ಪ್ರಭು ಕೆಳಗಿನಮನೆ, ಗ್ರಾಮಾಂತರ ಪಿಎಸ್‍ಐ ರವಿಕುಮಾರ್ ಡಿ. ಉಪಸ್ಥಿತರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
