ಅತೀ ಶೀಘ್ರದಲ್ಲಿ ಬಸ್ ಪ್ರಯಾಣ ದರ ಏರಿಕೆ!

ತುರುವೇಕೆರೆ:

     ಮುಖ್ಯಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿಗಳ ಜೊತೆ ಚರ್ಚಿಸಿ ಅತೀ ಶೀಘ್ರದಲ್ಲಿಯೇ ಬಸ್ ಪ್ರಯಾಣ ಧರವನ್ನು ಏರಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

      ಹಾಸನಕ್ಕೆ ಪ್ರಯಾಣ ಬೆಳಸುವ ಸಲುವಾಗಿ ಶನಿವಾರ ಸಂಜೆ ಪಟ್ಟಣಕ್ಕೆ ಆಗಮಿಸಿ ಸಾರಿಗೆ ಬಸ್ ನಿಲ್ದಾಣಕ್ಕೆ ಬೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು ನಾನು ಸಾರಿಗೆ ಸಚಿವನಾದ ದಿನದಲ್ಲಿಯೇ ಶೇ 18 ರಷ್ಟು ಪ್ರಯಾಣ ದರವನ್ನು ಏರಿಸುವ ನಿರ್ದಾರಕ್ಕೆ ಬರಲಾಗಿತ್ತು. ಕಳೆದ ವಾರದಲ್ಲಿ ಡೀಜಲ್ ಬೆಲೆ ಏರಿಕೆಯಾದದಿನದೊಂದು ಬೆಲೆ ಏರಿಸಲು ನಿರ್ದರಿಸಲಾಗಿತ್ತು ಆದರೆ ಮುಖ್ಯಮಂತ್ರಿಗಳ ತಡೆ ಇಡಿದರು. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೇ 18 ರೊಳಗೆ ಕಡಿಮೆ ಮಾಡಿ ಪ್ರಯಾಣ ಧರವನ್ನು ಏರಿಸದೆ ವಿದಿ ಇಲ್ಲ ಎಂದು ತಿಳಿಸಿದರು.

      ಪಟ್ಟಣದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವಂತೆ ಶಾಸಕ ಮಸಾಲ ಜಯರಾಮ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಬಸ್ ನಿಲ್ದಾಣವನ್ನು ವಿಸ್ತರಿಸಿ ಆದುನಿಕರಣಗೊಳಿಸಿ ಹೈಟೆಕ್ ಬಸ್ ನಿಲ್ದಾಣ ಮಾಡುವ ಭರವಸೆ ನೀಡಿದರು.

      ಕೆಎಸ್.ಆರ್.ಟಿ.ಸಿ.ಕನ್ನಡಿಗರ ಸಂಸ್ಥೆ: ಸಾರಿಗೆ ಇಲಾಖೆ ರಾಜ್ಯ 1ಲಕ್ಷದ 20 ಸಾವಿರ ಜನಕ್ಕೆ ಉದ್ಯೋಗ ನೀಡಿದೆ. ಇದರಲ್ಲಿ ಬಹುತೇಖ ಕರ್ನಾಟಕ ರಾಜ್ಯದ ಹಳ್ಳಿಗಾಡಿನ ಜನರು ಉದ್ಯೋಗ ಪಡೆದಿದ್ದಾರೆ. ನಿಮ್ಮ ಸಂಸ್ಥೆಯಾಗಿದ್ದು ಸಿಬ್ಬಂದಿಗಳು ಎಲ್ಲರು ಸರಿಯಾಗಿ ಕೆಲಸ ಮಾಡಬೇಕು. ಸಂಸ್ಥೆ ಈಗಾಗಲೇ 600 ಕೋಟಿ ನಷ್ಟದಲ್ಲಿದ್ದು ಮುಂದೆ ಯಾವುದಾರು ಸರ್ಕಾರ ನಷ್ಟದಲ್ಲಿಯೇ ಎಂದು ಸಂಸ್ಥೆ ಮುಚ್ಚಿದರೆ ರಾಜ್ಯದ ಜನರು ನಿರುದ್ಯೋಗಳಾಗಬೇಕಿದೆ ಅದ್ದರಿಂದ ಸರಿಯಾಗಿ ಕರ್ತವ್ಯ ನಿರ್ವಹಿಸಿ ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.

     ಬಾಡಿಗೆ ಸರ್ಕಾರಿ ಕಛೇರಿಗಳು ನಿಲ್ದಾಣದ ಕಟ್ಟಡಗಳಿಗೆ ಚಿಂತನೆ : ರಾಜ್ಯದ 30 ತಾಲೂಕುಗಳಲ್ಲಿ ಸರ್ಕಾರಿ ಕಛೇರಿಗಳು ಭಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಅದ್ದರಿಂದ ಸಾರಿಗೆ ಬಸ್ ನಿಲ್ದಾಣದಲ್ಲಿ ಮಳಿಗೆಗಳಿಗೆ ಸರ್ಕಾರಿ ಕಛೇರಿಗಳನ್ನು ಸ್ಥಳಾಂತರ ಮಾಡಿದರೆ ಜನರಿಗೂ ಅನುಕೂಲವಾಗಲಿದೆ ಹಾಗೂ ಸಾರಿಗೆ ಇಲಾಕೆಗೆ ಆದಾಯ ಹೆಚ್ಚಲಿದ್ದು ಸರ್ಕಾರದ ಹಣವು ಉಳಿಯಲಿದೆ ಎಂಬ ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.

                       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap