ಹರಪನಹಳ್ಳಿ :
ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹ ಹಾಗೂ ಘೋಷಣ್ ಮಾಸದ ಜನಾಂದೋಲನ ಜಾಥಕ್ಕೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಸಂತೋಷಕುಮಾರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸುವರ್ಣಮ್ಮ ಆರುಂಡಿ ಬುಧವಾರ ಚಾಲನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ತಾಲ್ಲೂಕು ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಕುಟುಂಬ ಕಲ್ಯಾಣ ಇಲಾಖೆ, ಸ್ತ್ರೀಶಕ್ತಿ ಸಂಘಟನೆಗಳ ಸಹಯೋಗದಲ್ಲಿ ನಡೆದ ಕಾಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗರ್ಭಿಣಿ ಸ್ತ್ರೀಯರು ಅಪೌಷ್ಠಿಕತೆಯಿಂದ ನರಳ ಬಾರದು, ಬಾಣಂತಿಯರು, ಕಿಶೋರಿಯರು ಮತ್ತು ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ಸರ್ಕಾರ ವಿವಿಧ ರೀತಿಯ ಸಹಾಯಧನ ನೀಡುತ್ತಿದೆ.
ಆದರೆ ಸರ್ಕಾರ ಗರ್ಭಿಣಿಯರಿಗೆ ನೀಡುವ 21ರೂ ಯಾವ ಪೌಷ್ಠಿಕಾಂಶ ಆಹಾರ ನೀಡಲು ಸಾಕಾಗುವುದಿಲ್ಲ. ಏಕೆಂದರೆ ಸರ್ಕಾರದಿಂದ ಹಣ ಗರ್ಭಿಣಿಯರಿಗೆ ತಲಪುವ ವೇಳೆಗೆ ಅರ್ಧ ಖಾಲಿಯಾಗಿರುತ್ತದೆ. ಅಲ್ಲದೇ ಗರ್ಭಿಣಿಯರು ಪ್ರತಿ ದಿನ ಅಂಗನವಾಡಿಗೆ ತೆರಳಿ ಅವರು ನೀಡಿದ ಊಟವನ್ನು ಮಾಡಲು ಸಾಧ್ಯವಾಗುವುದಿಲ್ಲ ಅದರ ಬದಲು ಗರ್ಭಿಣಿಯರ ಬ್ಯಾಂಕ್ ಖಾತೆಗೆ ಕೇವಲ ರೂ 15 ನೇರವಾಗಿ ಹಾಕಿದರೆ ಉತ್ತಮ ಆಹಾರವನ್ನು ಸೇವೆಸಲು ಸಹಕಾರಿಯಾಗತ್ತದೆ ಎಂದರು.
ಇಂದು ಸೀಮಂತ ಪಡೆದ ಗರ್ಭಿಣಿಯರು ಒಳ್ಳೆಯ ಆಹಾರ ಸೇವಿಸಿ ಸದೃಡ ಮಕ್ಕಳಿಗೆ ಜನ್ಮನೀಡಿ. ಮುಂದಿನ ಹೆರಿಗೆಗೆ ಅಂತರವಿರಲಿ. ಮಿತ ಸಂತಾನಕ್ಕೆ ಆದ್ಯತೆ ನೀಡಿ ಎಂದು ಕಿವಿಮಾತು ಹೇಳಿದರು.
ಜಾಥದಲ್ಲಿ ಹಳ್ಳಿ ಸ್ವಚ್ಚವಾದರೆ ದಿಲ್ಲಿ ಸ್ವಚ್ಚವಾಗುತ್ತದೆ, ನೀರಿದ್ದರೆ ಜೀವ ಇಲ್ಲದಿದ್ದರೆ ಬರೀ ದೇಹ, ಶುದ್ಧ ಕುಡಿಯುವ ನೀರು ಕುಡಿದರೆ ಆರೋಗ್ಯ ಭಾಗ್ಯ, ಹೆಣ್ಣು ಕಲಿತರೆ ಮನೆಯ ಕಣ್ಣು ಎಂದು ಘೋಷಣೆಗಳ ಜಾಗೃತಿ ಮೂಡಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಆರುಂಡಿ ನಾಗರಾಜ, ಸಿಡಿಪಿಓ ಮಹಾಂತಸ್ವಾಮಿ ಪೂಜಾರ, ಟಿಹೆಚ್‍ಓ ರೇಣುಕಾನಂದ, ಮೆನಸಿನಕಾಯಿ, ಅಯುಷ್ಯ ವೈದ್ಯಾಧಿಕಾರಿ ಶೃತಿ, ಗೌರಮ್ಮ, ಆಶಾ, ತ್ರಿವೇಣಿ, ರತ್ನಮ್ಮ ಬೆಣ್ಣಿ, ಜಯಶ್ರೀ ಹಿರೇಮಠ, ಅಂಗನವಾಡಿ, ಆಶಾ ಕಾರ್ಯಕರ್ತರು ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ