ದಾವಣಗೆರೆ:
ಗಣಪತಿ ಹೆಸರಿನಲ್ಲಿ ದುಡ್ಡು ಮಾಡೋ ಹವ್ಯಾಸ ನನಗಿಲ್ಲ. ಎಲ್ಲೆಲ್ಲಿ, ಹೆಂಗೆಗೆ ಕೈ ಇಟ್ಟು ದುಡ್ಡು ಮಾಡಬೇಕೆಂಬುದು ದಿನೇಶ್ ಶೆಟ್ಟಿಗೆ ಚೆನ್ನಾಗಿ ಕರಗತವಾಗಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ್ ಅಂಡ್ ಕೋ ವೃತ್ತದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವವರು ಹೈಸ್ಕೂಲ್ ಮೈದಾನದಲ್ಲಿ ಈ ಬಾರಿ ಗಣಪತಿ ಪ್ರತಿಷ್ಠಾಪಿಸಲು ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಸಮಿತಿಯಿಂದ ಅನುಮತಿ ನೀಡಿದ್ದೇವೆ. ಅಲ್ಲಿ ಟಿಕೇಟ್ ಮಾಡಿರೋದು, ಮತ್ತೊಂದು, ಮಗದೊಂದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ದಾವಣಗೆರೆಯಲ್ಲಿ ಏನೇ ದೊಡ್ಡ ಕಾರ್ಯಕ್ರಮಗಳು ನಡೆದರು ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಾ ಬಂದಿವೆ. ಗಣಪತಿ ಪ್ರತಿಷ್ಠಾಪನೆ ಮಾಡಲು ಜಾಗ ಕೊಡಿ ಅಂತಾ ನನಗ್ಯಾರೂ ಲಮ್ಸಮ್ ಅಮೌಂಟ್ ಏನೂ ನೀಡಿಲ್ಲ. ಅಲ್ಲದೆ, ನನಗೆ ದುಡ್ಡು ಮಾಡೊ ಹವ್ಯಾಸವೂ ಇಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
