ಶುದ್ದ ನೀರಿನ ಘಟಕಗಳಿಗೆ ಹೆಚ್ಚಿನ ಅನುದಾನ

ಚಿತ್ರದುರ್ಗ;

     ಲೋಕಸಭಾ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಹೇಳಿದ್ದಾರೆ

    ನಗರದ ತಿಪ್ಪಜ್ಜಿ ಸರ್ಕಲ್ ಬಳಿ ಇರುವ ಸೆಂಟ್ ಜೋಸೇಫ್ ಕಾನ್ವೆಂಟ್ ಶಾಲೆಯಲ್ಲಿ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಅಭಾವ ಹೆಚ್ಚಿದೆ. ಕ್ಷೇತ್ರದಲ್ಲಿ ನೀರಿನ ವ್ಯವಸ್ಥೆಗಾಗಿ ಸಾಕಷ್ಟು ಅನುದಾನ ನೀಡಲಾಗಿದೆ. ಕೆಲವು ಕಡೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾವಗಡದಂತಹ ತಾಲ್ಲೂಕಿನಲ್ಲಿ ಇಂತಹ ಗಂಭೀರ ಸಮಸ್ಯೆಗಳಿವೆ. ಶುದ್ದ ನೀರು ಸಿಗುವುದು ಕಷ್ಟವಾಗುತ್ತಿದೆ. ಕ್ಲೋರೈಡ್ ಅಂಶವಿರುವ ನೀರು ಸೇವನೆಯಿಂದ ಹಳ್ಳಿಯ ಜನರು ಅನೇಕ ರೀತಿಯ ರೋಗಗಳಿಗೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಅವರು ನುಡಿದರು

      ಸ್ವಚ್ಚತೆ, ಶೌಚಾಲಯ ಮತ್ತು ಶುದ್ದವಾದ ಕುಡಿಯುವ ನೀರಿನ ಸೇವನೆಯ ಬಗ್ಗೆ ಗಮನ ನೀಡುವುದರ ಮೂಲಕ ಮನೆಯಲ್ಲಿ ಪೊಷಕರಿಗೆ ಇದರ ಬಗ್ಗೆ ತಿಳಿಸುವಂತೆ ವಿದ್ಯಾರ್ಥಿಗಳಿಗೆ ಸಂಸದರು ಕರೆ ನೀಡಿದರು.

       ಇಂದಿನ ದಿನಮಾನದಲ್ಲಿ ಮಾನವನಿಗೆ ಶೇ.80 ರಷ್ಟು ವಿವಿಧ ರೀತಿಯ ರೋಗಗಳು ಅತ ಸೇವನೆ ಮಾಡುವ ನೀರಿನಿಂದ ಬರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ ಯಾವುದೋ ನೀರನ್ನು ಸೇವನೆ ಮಾಡುವುದು, ನನಗೆ ಏನು ಆಗುವುದಿಲ್ಲ ನನ್ನದು ಗಟ್ಟಿ ದೇಹ ಎಂದು ಹೇಳುವವರಿದ್ಧಾರೆ ಆದರೆ ಇಂದಿನ ದಿನಮಾನದಲ್ಲಿ ನೀರಿನ ಮೇಲೆ ಅವಲಂಬನೆ ಹೆಚ್ಚಾಗಿದೆ ಕೂಳವೆಬಾವಿಗಳ ಆಳ ಹೆಚ್ಚಾಗಿದೆ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಇದರಿಂದ ಶುದ್ದವಾದ ಕುಡಿಯುವ ನೀರಿನ ಕೊರತೆ ಕಾಣುತ್ತಿದೆ ಆದ್ದರಿಂದ ಸರ್ಕಾರ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭ ಮಾಡಿದೆ ಅದರಲ್ಲಿನ ನೀರನ್ನು ಸೇವನೆ ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಂಸದರು ಕಿವಿ ಮಾತು ಹೇಳಿದರು.

        ಸಂಸದ ಅನುದಾನದಲ್ಲಿ ಬಹುತೇಕ ಅನುದಾನವನ್ನು ಶುದ್ದ ಕುಡಿಯುವ ನೀರಿಗೆ ಬಳಕೆ ಮಾಡಲಾಗಿದೆ, ಮಾನವನ ಆರೋಗ್ಯ ಚನ್ನಾಗಿ ಇದ್ದಾರೆ ದೇಶ ಉತ್ತಮವಾಗಿರುತ್ತದೆ ಇದರಿಂದ ಅರೋಗ್ಯದ ಬಗ್ಗೆ ಗಮನ ನೀಡಬೇಕಿದೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಿ ಕುಡಿಯವ ನೀರಿನ ಅಭಾವ ಇದೆ ಅಲ್ಲಿ ನೀರಿನ ಟ್ಯಾಂಕ್‍ರ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದರು.

        ಕುಡಿಯುವ ನೀರಿನಷ್ಟೇ ಪ್ರಾಮುಖ್ಯವಾದದ್ದು ಶೌಚಾಲಯ ಇದು ಪ್ರತಿಯೊಂದು ಮನೆಗೆ ಅಗತ್ಯವಾಗಿ ಇರಲೇ ಬೇಕಿದೆ. ಹಿಂದೇ ಎಲ್ಲಾ ಬೇರೆ ರೀತಿಯ ವಾತಾವರಣ ಇತ್ತು ಆದರೆ ಈಗ ಪ್ರತಿಯೊಂದು ಮನೆಗೆ ಶೌಚಾಲಯ ಅಗತ್ಯ ಇದೆ, ಸರ್ಕಾರವು ಸಹಾ ಇದರ ಬಗ್ಗೆ ಹೆಚ್ಚನ ಗಮನ ನೀಡುವುದರ ಮೂಲಕ ಅದರ ನಿರ್ಮಾಣಕ್ಕೆ ಧನ ಸಹಾಯ ಮಾಡುತ್ತಿದೆ, ಗ್ರಾಮಾಂತರ ಪ್ರದೇಶವಾದರೆ ಜಿಲಾ ಮತ್ತು ತಾಲ್ಲೂಕು ಪಂಚಾಯಿತಿ, ನಗರ ಮಟ್ಟದಲ್ಲಾದರೆ ನಗರಸಭೆ, ಪುರಸಭೆಗಳನ್ನು ಸಂಪರ್ಕ ಮಾಡಬಹುದಾಗಿದೆ ಎಂದರು.

        ಸ್ವಚ್ಚತೆ ಉತ್ತಮ ಆರೋಗ್ಯದ ಮತ್ತೊಂದು ರೂಪವಾಗಿದೆ. ಎಲ್ಲಿ ಸ್ವಚ್ಚತೆ ಇರುವುದಿಲ್ಲವೂ ಅಲ್ಲಿ ರೋಗಗಳಿಗೆ ಆಹ್ವಾನವಾಗುತ್ತದೆ ಇದರಿಂದ ಸ್ವಚ್ಚತೆಗೆ ಹೆಚ್ಚನ ಆದ್ಯತೆಯನ್ನು ನೀಡಬೇಕಿದೆ ಇದರಿಂದ ರೋಗಗಳು ದೂರವಾಗುತ್ತದೆ, ನಮ್ಮ ಮನೆ, ಕಾಲೋನಿ, ಬಡಾವಣೆ, ನಗರ ಸೇರಿದಂತೆ ಎಲ್ಲಡೆ ಸ್ವಚ್ಚತೆಯನ್ನು ಕಾಪಾಡಬೇಕಿದೆ ಇದು ನಗರಸಭೆಯ ಕೆಲಸ ಎನ್ನದೆ ನಮ್ಮ ಮನೆಯ ಸುತ್ತಾ-ಮುತ್ತಲ್ಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

        ಇದೇ ಸಂದರ್ಭದಲ್ಲಿ ಶಾಲೆಗೆ ಅಗತ್ಯವಾಗಿ ಬೇಕಾದ ವಿವಿಧ ರೀತಿಯ ಬೇಡಿಕೆಗಳನ್ನು ಸಂಸದರಿಗೆ ನೀಡಲಾಯಿತು, ಇದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

         ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಫಾತ್ಯರಾಜನ್, ಚಿತ್ರದುರ್ಗ ನಗರಸಭೆಯ ಆಯುಕ್ತರಾದ ಚಂದ್ರಪ್ಪ, ಕಾನ್ವೆಂಟ್ ಶಾಲೆಯ ಉಪಾಧ್ಯರು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ಮಕ್ಕಳು ಕುಡಿಯುವ ನೀರಿನ ಆದ್ಯತೆ ಬಗ್ಗೆ ನೃತ್ಯ ಮಾಡಿದರು.

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap