ಬೆಂಗಳೂರು
ಅಪ್ರಾಪ್ತ ಬಾಲಕರೊಂದಿಗೆ ಸೇರಿ ನಗರದ ಹೊರವಲಯದ ರಸ್ತೆಗಳು ನೈಸ್ ರಸ್ತೆಗಳಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ, ಕನ್ನಗಳವು, ದ್ವಿಚಕ್ರ ವಾಹನ ಕಳವು ಮಾಡಿ ಮೋಜು ಮಾಡುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೆÇಲೀಸರು ಬಂಧಿಸಿದ್ದಾರೆ.
ಗಾರ್ವೆಭಾವಿ ಪಾಳ್ಯದ ಉದಯ್ ಅಲಿಯಾಸ್ ಕಲಾಕಾರ್ (18) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 7 ದ್ವಿಚಕ್ರ ವಾಹನಗಳು, 40 ಸಾವಿರ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು, 10 ಸಾವಿರ ನಗದು, 3 ಮೊಬೈಲ್ಗಳು ಸೇರಿ 11 ಲಕ್ಷ 20 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಆರೋಪಿಯು ಪೀಣ್ಯಾದಲ್ಲಿ 3, ತಲಘಟ್ಟಪುರ, ಬ್ಯಾಟರಾಯನಪುರದಲ್ಲಿ ತಲಾ 1 ಸೇರಿ 5 ಸುಲಿಗೆ ಪ್ರಕರಣಗಳು, ಬೇಗೂರಿನಲ್ಲಿ 2 ದೇವಸ್ಥಾನದ ಕನ್ನಗಳವು, ಪರಪ್ಪನ ಅಗ್ರಹಾರ, ಅತ್ತಿಬೆಲೆ, ಆನೇಕಲ್, ಹಾಸನ, ಹೆಚ್.ಎಸ್.ಆರ್ ಲೇಔಟ್ , ಬೇಗೂರಿನ ತಲಾ 1 ದ್ವಿಚಕ್ರ ವಾಹನ ಕಳವು ಸೇರಿದಂತೆ 14ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಆರೋಪಿಯು ನಾಲ್ವರು ಅಪ್ರಾಪ್ತ ಬಾಲಕರೊಂದಿಗೆ ಸೇರಿಕೊಂಡು ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ನಗರದ ಹೊರವಲಯದ, ನೈಸ್ ರಸ್ತೆಗಳಲ್ಲಿ ಮಾರಕಾಸ್ತ್ರಗಳನ್ನಿಟ್ಟುಕೊಂಡು ಸಂಚರಿಸುತ್ತ ಸಾರ್ವಜನಿಕರನ್ನು ಅಡ್ಡಗಟ್ಟಿ, ಬೆದರಿಸಿ ನಗದು, ಚಿನ್ನಾಭರಣ ಸೇರಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು.
ದೇವಸ್ಥಾನಗಳ ಬಾಗಿಲು ಮುರಿದು ಗರ್ಭಗುಡಿಯಲ್ಲಿನ ಚಿನ್ನಾಭರಣಗಳನ್ನು ದೋಚಿರುವುದು ಪತ್ತೆಯಾಗಿದೆ. ಖಚಿತ ಮಾಹಿತಿಯಾಧರಿಸಿ ಎಸಿಪಿ ಕಾಂತರಾಜ್ ನೇತೃತ್ವದ ತಲಘಟ್ಟಪುರ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
