ಚಿತ್ರದುರ್ಗ
ಜಿಲ್ಲಾ ಆಸ್ಪತ್ರೆಯಲ್ಲಿ ಲಂಚದ ಹಾವಳಿ ಹೆಚ್ಚಾಗಿದ್ದು ಹಣ ಇಲ್ಲದೆ ಚಿಕಿತ್ಸೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಇದರ ಬಗ್ಗೆ ಕ್ರಮ ಕೈಗ್ಗೊಳ್ಳದಿದ್ದರೆ ನಾವೇ ಬೀದಿಗೆ ಇಳಿದು ಹೋರಾಟವನ್ನು ಮಾಡುವುದಾಗಿ ಜಿಲ್ಲಾ ಸರ್ಜನ್‍ಗೆ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಸದಸ್ಯರು, ಸಾರ್ವಜನಿಕರಿಗೆ ಈ ಆಸ್ಪತ್ರೆಯಲ್ಲಿ ಸೂಕ್ತ ರೀತಿಯ ಚಿಕಿತ್ಸೆ ದೊರೆಯುತ್ತಿಲ್ಲ. ಜೊತೆಗೆ ಹಣ ಕೊಡದಿದ್ದರೆ ಯಾವ ಸಿಬ್ಬಂದಿಯೂ ರೋಗಿಗಳನ್ನು ನೋಡುವುದಿಲ್ಲವೆಂದು ದೂರಿದರು
ವೈದ್ಯರು ರೋಗಿಗಳನ್ನು ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುವುದಿಲ್ಲ ಅಲ್ಲದೆ ರಾತ್ರಿ ಸಮಯದಲ್ಲಿ ವೈದ್ಯರು ಲಭ್ಯವಾಗುವುದಿಲ್ಲ ಅಲ್ಲದೆ ಅಲ್ಲಿ ಇರುವ ನರ್ಸಗಳು ಸಹಾ ರೋಗಿಗಳನ್ನು ಮುಟ್ಟಿ ನೋಡುವುದೇ ಇಲ್ಲ ಅವರಿಂದ ಹಣ ಬಂದರೆ ಮಾತ್ರವೇ ಚಿಕಿತ್ಸೆ ಪ್ರಾರಂಭ ಮಾಡುತ್ತಾರೆ ಇದು ಬೇರೆಯವರು ಹೇಳಿದ ಮಾತಲ್ಲ ನನಗೂ ಅಂತಹ ಅನುಭವವಾಗಿದೆ. ಎಂದು ಸದಸ್ಯರಾದ ಸುರೇಶ್ ನಾಯ್ಕೆ ಮತ್ತು ಸುರೇಶ್ ಕರಿಯಪ್ಪ ಸಭೆಯ ಗಮನ ಸೆಳೆದರು.
ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷ ವೇಣುಗೋಪಾಲ್ ಈ ಆನುಭವ ನನಗೂ ಸಹಾ ಆಗಿದೆ, ರಾತ್ರಿ ವೇಳೆಯಲ್ಲಿ ವೈದ್ಯರು ಎರ್ಮಜೆನ್ಸಿಯಲ್ಲಿ ಇರುವುದಿಲ್ಲ ಪೋನ್ ಮಾಡಿ ಕರೆಸಬೇಕಿದೆ. ಇಲ್ಲ ಬೇರೆ ಮೇಲ್ಪಟ್ಟ ಆಧಿಕಾರಿಗಳ ಗಮನಕ್ಕೆ ತಂದು ಅವರನ್ನು ಕರೆಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆ ಎಂದು ಹೆಸರಿಗೆ ಮಾತ್ರ ಇಲ್ಲ ಸೌಲಭ್ಯಗಳ ಕೊರತೆ ಅಗಾಧವಾಗಿದೆ. ಸರಿಯಾದ ರೀತಿಯಲ್ಲಿ ವೆಂಟಿಲೇಟರ್‍ಗಳು ಇಲ್ಲ, ಇದ್ದರೂ ಸಹಾ ಅವುಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಆಸ್ಪತ್ರೆಯ ಮುಖ್ಯಸ್ಥರಾಗಿ ನಿಮ್ಮ ಜವಾಬ್ದಾರಿ ಎನು ಎಂದು ಸದಸ್ಯರು ಜಿಲ್ಲಾ ಸರ್ಜನ್‍ನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಕೆಲವು ಕಡೆ ಆರಂಭಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇವು ಇತ್ತೀಚೆಗಷ್ಟೆ ಆರಂಭವಾಗಿದ್ದರೂ ಸದ್ಯಕ್ಕೆ ಸ್ಥಗಿತಗೊಂಡಿವೆ. ಇವುಗಳ ಬಳಿಯೇ ಖಾಸಗಿಯವರು ಪ್ರಾರಂಭಿಸಿರುವ ನೀರಿನ ಘಟಕಗಳು ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿವೆ ಎಂದು ಸದಸ್ಯ ಶಿವಮೂರ್ತಿ ಸಭೆಯ ಗಮನ ಸೆಳೆದರು
ಇದಕ್ಕೆ ದ್ವನಿಗೂಡಿಸಿದ ಮತ್ತೊಬ್ಬ ಸದಸ್ಯೆ ಚಂದ್ರಕಲಾ ಅವರು, ನನ್ನ ಕ್ಷೇತ್ರದಲ್ಲಿಯೂ ಇದೆ ರೀತಿಯ ಸಮಸ್ಯೆಗಳಿವೆ. ಈ ಬಗ್ಗೆ ಅಧಿಕಾರಿಗಳು ಸಬೂಬು ಹೇಳುವುದನ್ನು ಬಿಟ್ಟು ಸಮಸ್ಯೆ ಬಗೆಹರಿಸುತ್ತಿಲ್ಲವೆಂದು ದೂರಿದರು.
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶ್ರೀಮತಿ ಶೋಭಾ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಬೋರಯ್ಯ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾನಾಯ್ಕ್, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕರಾದ ಹನುಮಂತಪ್ಪ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ