ಕೆಎಸ್‍ಆರ್‍ಟಿಸಿ ಬಸ್ ಸ್ಥಗಿತಕ್ಕೆ ನಡೆಯುತ್ತಿರುವ ಹುನ್ನಾರ ಖಂಡಿಸಿ ಪ್ರತಿಭಟನೆ

ಜಗಳೂರು :

     ಕೆಎಸ್‍ಆರ್‍ಟಿಸಿ ಬಸ್ ಸ್ಥಗಿತಕ್ಕೆ ನಡೆಯುತ್ತಿರುವ ಹುನ್ನಾರ ಖಂಡಿಸಿ ಹಾಗೂ ಡಿಪೋ ಸ್ಥಾಪನೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮಂಗಳವಾರ ಎಸ್‍ಎಫ್‍ಐ, ಎಐಎಸ್‍ಎಫ್, ಕರ್ನಾಟಕ ರಕ್ಷಣಾ ವೇದಿಕೆ, ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ, ದಲಿತ ಸಂಘರ್ಷ ಸಮತಿ, ಮಾನವ ಬಂಧುತ್ವ ವೇದಿಕೆ, ಹಿರಿಯ ನಾಗರೀಕರ ಸಂಘ, ಕಂದಾಯ ಇಲಾಖೆ, ಕೆಇಬಿ, ಕ.ರಾ.ಸ.ನೌ. ಸಂಘದ ನೌಕರರು ಸೇರಿದಂತೆ ವಿವಿಧ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಾಯಿತು.

     ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಖಾಸಗಿ ಬಸ್‍ಗಳ ಹುನ್ನಾರದಿಂದ ಸರ್ಕಾರಿ ಬಸ್‍ಗಳ ಸೇವೆ ಸ್ಥಗಿತ ಗೊಳ್ಳುವ ಸಾದ್ಯತೆ ಇದೆ.ಯಾವುದೇ ಕಾರಣಕ್ಕೂ ಬಸ್‍ಗಳನ್ನು ನಿಲ್ಲಿಸಬಾರದು, ಅಲ್ಲದೇ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಲಿಯಲು ಪಟ್ಟಣಕ್ಕೆ ಬರಲು ಸಾರಿಗೆ ಸೌಲಭ್ಯವಿಲ್ಲದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರತಿಯೊಂದು ಹಳ್ಳಿಗಳಿಂದಲೂ ಸರ್ಕಾರಿ ಬಸ್ ಸೇವೆ ಆರಂಭವಾಗಬೇಕು. ಐದಾರು ವರ್ಷಗಳಿಂದ ಡಿಪೋ ತೆರೆಯುವು ದಾಗಿ ಭರವಸೆಯಾಗಿಯೆ ಉಳಿದಿದೆ, ಶೀಘ್ರವೇ ಡಿಫೋ ಸ್ಥಾಪಿಸಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

     ವಕೀಲ ಓಬಳೇಶ್, ಮಾತನಾಡಿ ಹರಿಹರ ಮಾಜಿ ಶಾಸಕ ಶಿವಶಂಕರ್ ಖಾಸಗಿ ಬಸ್ ಮಾಲೀಕರ ಜೊತೆ ಕೈ ಜೋಡಿಸಿ ಕೆಎಸ್‍ಆ ರ್‍ಟಿಸಿ ಬಸ್ ನಿಲ್ಲಿಸುವ ಪ್ರಯತ್ನ ಮಾಡುತ್ತಿರು ವುದು ಖಂಡನೀಯವಾಗಿದ್ದು, ಖಾಸಗಿ ಬಸ್‍ಗಳ ಮಾಲೀಕರ ಲಾಬಿಯಿಂದ ಸರ್ಕಾರಿ ಬಸ್‍ಗಳು ಸಂಚರಿಸುವುದು ಕಷ್ಟವಾಗಿದೆ. ಕೆಲವು ಅಧಿಕಾರಿಗಳಿಗೆ ಹಣದ ಆಮೀಷ ತೋರಿಸಿ ದಿಕ್ಕು ತಪ್ಪಿಸುತ್ತಿದ್ದಾರೆ. ಆದ್ದರಿಂದ ಕೆಎಸ್‍ಆರ್‍ಟಿಸಿ ವಿಭಾಗದ ಜಿಲ್ಲಾಧಿಕಾರಿಗಳು ಪರಿಪೂರ್ಣವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು, ಬಸ್‍ಗಳ ಸೇವೆಯನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

     ಕೆಎಸ್‍ಆರ್‍ಟಿಸಿ ಡಿಟಿಒ ಜಿ.ಬಿ ಮಂಜುನಾಥ್ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಿಲು ಮಾರ್ಗದ ನಕ್ಷೆಯನ್ನು ತಯಾರಿಸಲಾಗಿದ್ದು ಶೀಘ್ರವೇ ಸೇವೆ ಆರಂಭಿಸಲಾಗುವುದು. ದಾವಣಗೆರೆ ಮತ್ತು ಜಗಳೂರು ಮಾರ್ಗದ ಬಸ್‍ಗಳ ಸಂಚಾರವನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ವೆಂದರು.

     ಸ್ಥಳಕ್ಕೆ ಆರ್ ಟಿ ಓ ಬಾರುವವರೆಗೂ ನಾವು ಕದಲುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಾಗ ಸಿಪಿಐ ಬಿ.ಕೆ.ಲತಾ ಮಧ್ಯ ಪ್ರವೇಶಿಸಿ ನಾಳೆ ಆರ್ ಟಿ ಓ ಅಧಿಕಾರಿಗಳು ಬಾರುತ್ತಾರೆ ಎಂಬ ಭರವಸೆಯ ಮೇರೆಗೆ ಪ್ರತಿಭನೆಯನ್ನು ಹಿಂಪಡೆಯಲಾಯಿತು. ತಹಶೀಲ್ದಾರ್ ಶ್ರೀಧರಮೂರ್ತಿ ರವರಿಗೆ ಮನವಿ ನೀಡಲಾಯಿತು.

     ಈ ಸಂದರ್ಭದಲ್ಲಿ ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ವಿಠ್ಠಲ್‍ಶ್ರೇಷ್ಠಿ, ರೈತ ಸಂಘದ ಅಧ್ಯಕ್ಷ ಕೊಟ್ರೇಶ್, ಹೋರಾಟಗಾರ ನಾಗಲಿಂಗಪ್ಪ ಎಐಎಸ್‍ಎಫ್ ಮಹಿಳಾ ಘಟಕದ ರಾಜ್ಯ ಮುಖಂಡೆ ವೀಣಾ, ಎಸ್ ಎಸ್ ಐ ನ ತಾಲೂಕು ಅಧ್ಯಕ್ಷ ಮೈಲೇಶ್ , ಎ ಐಎಸ್ ಎಫ್ ನ ತಾಲೂಕು ಅಧ್ಯಕ್ಷ ಮಧು, ಕರವೇ ಅಧ್ಯಕ್ಷ ಮಹಾಂತೇಶ್, ನಾಗಲಿಂಗಪ್ಪ,ಮಾನವ ಬಂಧುತ್ವ ವೇದಿಕೆ ಮುಖಂಡ ಧನ್ಯಕುಮಾರ್, ದಲಿತ ಒಕ್ಕೂಟಗಳ ಅಧ್ಯಕ್ಷ ಎಂ ರಾಜಪ್ಪ, ಲಿಂಗರಾಜ್, ದಸಂಸ ಸಂಚಾಲಕ ರಾದ ಶಿವಮೂರ್ತಿ, ಸಯಿದ್ ವಾಸಿಂ, ಬಸವರಾಜಪ್ಪ, ಸತೀಶ್ ಸೇರಿದಂತೆ ಮತ್ತಿತರಿದ್ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap