ತುಮಕೂರು
ಜಿಲ್ಲೆಯ ಜೀವನಾಡಿ ಹೇಮಾವತಿ ನದಿ ನೀರು ಸಮಪರ್ಕವಾಗಿ ಜಿಲ್ಲೆಗೆ ಹರಿಸದೇ ಇದ್ದಾಗ ನಮ್ಮ ಪಾಲಿನ ಹೇಮಾವತಿ ನೀರಿಗಾಗಿ ನಿರಂತರವಾಗಿ ಹೋರಾಟ ಪ್ರತಿಭಟನೆಗಳನ್ನು ಮಾಡಿಕೊಂಡು ಬರಲಾಗಿದೆ, ಕಳೆದೆರಡು ವರ್ಷಗಳ ಹಿಂದೆ ಹೇಮಾವತಿ ನೀರಿಗಾಗಿ ಪ್ರತಿಭಟನೆ ಮಾಡಿದ್ದ ಹಿನ್ನೆಲೆಯಲ್ಲಿ ಪೋಲೀಸ್ ಇಲಾಖೆ ನನ್ನೂ ಸೇರಿದಂತೆ 38 ಜನರ ಮೇಲೆ ಕೇಸು ದಾಖಲಿಸಿದ್ದು ಇದರ ಸಂಬಂದ ಕೋರ್ಟಿಗೆ ಬಂದಿರುವುದಾಗಿ ತಿಳಿಸಿದ ಮಾಜೀ ಶಾಸಕರು ಜಿಲ್ಲೆಯ ಜನತೆಯ ಹಿತ ಕಾಪಾಡಲು ಸದಾ ಸಿದ್ದ ಜಿಲ್ಲೆಯ ಜನತೆಯ ಹಿತ ದೃಷ್ಟಿಯಿಂದ ಹೇಮಾವತಿ ನೀರಿಗಾಗಿ ಜೈಲಿಗೆ ಹೋಗಲು ಕೂಡಾ ಬದ್ದ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ತಿಳಿಸಿದರು.
ದಿನಾಂಕ 15-12-2018 ಕ್ಕೆ ಕೋರ್ಟು ವಿಚಾರಣೆ ಮುಂದೂಡಿರುವುದಾಗಿ ತಿಳಿಸಿದರು,ನಿನ್ನೆ ತುಮಕೂರು ನಗರದ ಜೆಎಂಎಫ್‍ಸಿ 4 ನೇ ಕೋರ್ಟಿನಲ್ಲಿ ವಿಚಾರಣೆಗೆ ಹಾಜರಾಗಿದ್ದ ಮಾಜಿ ಶಾಸಕ ಬಿ.ಸುರೇಶಗೌಡರು ಸುದ್ದಿಗಾರರ ಜೊತೆ ಮಾತನಾಡಿದರು,ಕಾವೇರಿ ನ್ಯಾಯಾಧಿಕರಣದ ತೀರ್ಪಿನಂತೆ ನಮ್ಮ ಜಿಲ್ಲೆಗೆ ನಿಗದಿ ಆಗಿರುವ ಹೇಮಾವತಿ ನೀರು ಪಡೆದುಕೊಳ್ಳಲು ನಾವು ಹೋರಾಟ ಮಾಡಬೇಕಾಗಿರುವ ಅನಿವಾರ್ಯ ಪರಿಸ್ಥಿತಿಗೆ ಬಂದು ನಿಂತಿದ್ದೇವೆ,
ಇದು ಆಗಬಾರದು ನಮ್ಮ ಪಾಲಿನ ನೀರು ನಮಗೆ ಸಮರ್ಪಕವಾಗಿ ಹರಿಸದೆ ಅಧಿಕಾರಿಗಳು ಹಾಸನಿ ಜಿಲ್ಲೆಯ ಪ್ರಮುಖ ರಾಜಕಾರಣಿಗಳ ಕುಮ್ಮಕ್ಕಿಗೆ ಒಳಗಾಗಿ ತುಮಕೂರು ಜಿಲ್ಲೆಗೆ ಮಲತಾಯಿ ದೋರಣೆ ತೋರಿದ ಸಂದರ್ಭದಲ್ಲಿ ನಾವು ಹೋರಾಟ ಮಾಡಿ ನೀರು ಪಡೆಯಬೇಕಾಯಿತು, ಎಂದು ಮಾಜಿ ಶಾಸಕ ಬಿ.ಸುರೇಶಗೌಡ ತಿಳಿಸಿದರು,
ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಕೂಡಾ ಬರ ಬಂದಿದೆ ಒಂದು ಕಡೆ ಅನಾವೃಷ್ಟಿ ಒಂದು ಕಡೆ ಅತೀವೃಷ್ಟಿ ನಮ್, ಜಿಲ್ಲೆಯಲ್ಲಿ 10 ತಾಲ್ಲೂಕುಗಳು ಕೂಡಾ ಬರಗಾಲ ಪೀಡಿತ ಪ್ರದೇಶವಾಗಿದ್ದು ಸರ್ಕಾರ ಇದುವರಗೂ ಕೂಡಾ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಕುಡಿಯುವ ನೀರಿಗಾಗಿ ಜಿಲ್ಲೆಯ ಜನತೆ ಖಾಸಗೀ ಕೊಳವೆ ಬಾವಿಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.
ಈಗಿದ್ದೂ ಕೂಡಾ ಹೇಮಾವತಿ ನದಿ ನೀರು ಇದುವರಗೂ ಸಮದ್ರದ ಪಾಲಾಯಿತು ಅದರೂ ಸದರೀ ನೀರನ್ನು ಜಿಲ್ಲೆಯ ಕುಡಿಯುವ ನೀರಿನ ಕೆರೆಗಳಿಗೆ ಮೊದಲ ಆಧ್ಯತೆಯಾಗಿ ಹರಿಸುವ ಪ್ರಯತ್ನ ಹೇಮಾವತಿ ನಾಲೆಯ ಅಧಿಕಾರಿಗಳು ಮಾಡಲಿಲ್ಲ, ಈಗಿದ್ದೂ ಕೂಡಾ ಇದುವರೆಗೆ ಒಂದೇ ಒಂದು ಕೆರೆ ಕೂಡಾ ಸಮರ್ಪಕವಾಗಿ ತುಂಬಲಿಲ್ಲ,
ಹೇಮಾವತಿ ನೀರಿಗಾಗಿ ಆಡಳಿತ ಪಕ್ಷದ ಶಾಸಕರೊಬ್ಬರು ಪಂಪು ಹೌಸ್‍ನಲ್ಲಿ ಕೂತು ದರಣಿ ಮಡಬೇಕಾಯಿತು ನಮ್ಮದೇ ಪಕ್ಷದ ಶಾಸಕರೊಬ್ಬರು ಉಪವಾಸ ಕೂರಬೇಕಾದ ಸ್ಥಿತಿ ನಿರ್ಮಾಣ ಆಗಿದೆ, ಇಷ್ಟಾದರೂ ಇಲಾಖಾ ಅಧಿಕಾರಿಗಳು ನಮ್ಮ ಪಾಲಿನ ನೀರನ್ನು ಜಿಲ್ಲೆಗೆ ತರಲು ವಿಫಲರಾಗಿದ್ದಾರೆ, ಎಂದು ಮಾಜೀ ಶಾಸಕ ಬಿ.ಸುರೇಶಗೌಡ ಕೆಂಡಕಾರಿದರು,
ಎಂಪಿ ಚುನಾವಣೆಗೆ ಸ್ಪರ್ಧಿಸುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಜೀ ಶಾಸಕ ಬಿ.ಸುರೇಶಗೌಡ ನಾನು ಪಕ್ಷದ ಶಿಸ್ತಿನ ಸಿಪಾಯಿ, ನಾನೊಬ್ಬ ಸಾಮಾನ್ಯ ಕಾರ್ಯಕರ್ತ,ಸದ್ಯಕ್ಕೆ ಆ ರೀತಿಯ ಯೋಚನೆ ಇಲ್ಲ ಪಕ್ಷದ ನಿರ್ಣಯಕ್ಕೆ ಬದ್ದನಾಗಿರುವೆ ಎಂದು ತಿಳಿಸಿದರು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
