ಕುಣಿಗಲ್:
ಯುವ ಸಂಘಗಳು ಹಳ್ಳಿಗಳ ಸಾಮುದಾಯಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇವುಗಳು ಸಮಾಜದಲ್ಲಿ ಜಾಗೃತಿಯುಂಟು ಮಾಡುವ ಮೂಲಕ ತಮ್ಮ ಜವಾಬ್ದಾರಿ ಮೆರೆಯಬೇಕು. ಗ್ರಾಮೀಣ ಸಮುದಾಯದ ಜನರನ್ನು ಒಳಗೊಳ್ಳುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರ ಏಳಿಗೆಗೆ ಶ್ರಮಿಸಬೇಕು ಎಂದು ಪ್ರಾಂಶುಪಾಲರಾದ ಡಾ. ನರಸಿಂಹನ್ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಣಿಗಲ್‍ನಲ್ಲಿ ನೆಹರೂ ಯುವಕೇಂದ್ರ ಹಮ್ಮಿಕೊಂಡಿದ್ದ ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಆರೋಗ್ಯಕರ ದೇಶ ನಿರ್ಮಾಣದಲ್ಲಿ ಯುವ ಸಂಘಗಳ ಪಾತ್ರವೂ ಮುಖ್ಯವಾಗಿದೆ ಎಂದರು.
ಹಿರಿಯ ಗ್ರಂಥಪಾಲಕರಾದ ಮಮತಾ.ಜೆ.ಎನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮನುಷ್ಯರು ಜಾತಿ ಅಂತಸ್ಥು, ಅಧಿಕಾರಗಳ ನಡುವಿನ ಅಸಮಾನತೆಯನ್ನು ನಿಲ್ಲಿಸಬೇಕು ಇಲ್ಲದಿದ್ದರೆ ದೇಶದ ಪ್ರಗತಿಯ ಮಾತುಗಳು ಬರೀ ಹುಸಿ ಆದರ್ಶಗಳಾಗುತ್ತವೆ ಎಂದರು.
ಸಾಹಿತಿ ಡಾ. ಎಂ.ಗೋವಿಂದರಾಯ ಮಾತನಾಡಿ ಯುವಕ ಸಂಘಗಳಿಗೆ ಕೇಂದ್ರ ಸರ್ಕಾರವು ಅನೇಕ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು ವಾರ್ಷಿಕ ಅತ್ಯುತ್ತಮ ಸಾಧನೆ ತೋರಿದ ಆದರ್ಶ ಯುವ ಸಂಘಗಳಿಗೆ ಜಿಲ್ಲಾಡಳಿತ ಅನೇಕ ಪುರಸ್ಕಾರಗಳನ್ನು ನೀಡುತ್ತಿದ್ದೆ. ಈ ಅವಕಾಶಗಳನ್ನು ಯುವ ಜನರು ಬಳಸಿಕೊಂಡು ನಾಯಕತ್ವ ಮತ್ತು ಸಂಘಟನಾ ಸಾಮಥ್ರ್ಯವನ್ನು ಗಳಿಸಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಯುವಕ ಸಂಘದ ಗೋವಿಂದರಾಜು ಆರ್.ಎನ್. ರಾಷ್ಟ್ರೀಯ ಯುವದಳ ಕಾರ್ಯಕರ್ತರಾದ ಕಲ್ಲೂರು ಗೋವಿಂದರಾಜು, ಶ್ವೇತಾ ಪ್ರಾಧ್ಯಾಪಕರುಗಳಾದ ಕೃಷ್ಣಪ್ಪ, ರಮೇಶ್ ಮಣ್ಣೆ, ವಿಶ್ವೇಶ್ವರಯ್ಯ, ಹಾಗೂ ವಿವಿಧ ಯುವ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ