ತುಮಕೂರು
ಪ್ರಧಾನಿ ಮೋದಿಯವರು ಕರೆ ನೀಡಿದ್ದ ಸ್ವಚ್ಛತಾ ಹೀ ಸೇವಾ ಹೈ ಅಭಿಯಾನ ಸಪ್ತಾಹದ ಅಂಗವಾಗಿ ಭಾನುವಾರ ಬೆಳಗ್ಗೆ ತುಮಕೂರು ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಸ್ವಚ್ಛತೆ ಬಗ್ಗೆ ಪ್ರಯಾಣಿಕರಲ್ಲಿ ಅರಿವು ಮೂಡಿಸಲಾಯಿತು. ಎಸ್.ಜಿ.ವಾಸುದೇವರಾವ್ ನೇತೃತ್ವದ ರೈಲ್ವೇ ಉದ್ಯೋಗಿಗಳ ಮಕ್ಕಳನ್ನೊಳಗೊಂಡ ಬೆಂಗಳೂರಿನ ಸ್ಕೌಟ್ ಅಂಡ್ ಗೈಡ್ಸ್ ತಂಡ, ತುಮಕೂರು ರೈಲ್ವೇ ಅಧಿಕಾರಿಗಳು, ರೈಲ್ವೇ ರಕ್ಷಣಾ ಪಡೆಯ ಸಿಬ್ಬಂದಿ ಹಾಗೂ ತುಮಕೂರು ಬೆಂಗಳೂರು ರೈಲ್ವೇ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ಭಾಗವಹಿಸಿದ್ದರು.
ವಾಣಿಜ್ಯ ಪರಿವೀಕ್ಷಕ ಧನಂಜಯ, ತುಮಕೂರು ರೈಲ್ವೇ ವ್ಯವಸ್ಥಾಪಕ ರಮೇಶ್ ಬಾಬು, ಆರ್ಪಿಎಫ್ ಇನ್ಸ್ಪೆಕ್ಟರ್ ಕುಬೇರಪ್ಪ, ವೇದಿಕೆ ಹಿರಿಯ ಉಪಾಧ್ಯಕ್ಷ ಪರಮೇಶ್ವರ್, ಕಾರ್ಯದರ್ಶಿ ಕರಣಂ ರಮೇಶ್, ಖಜಾಂಚಿ ಆರ್. ಬಾಲಾಜಿ, ಜಂಟಿ ನಿರ್ದೇಶಕರಾದ ಸಗರ ಚಕ್ರವರ್ತಿ, ರಾಜಶೇಖರ್ ಮತ್ತು ನಿರ್ದೇಶಕರಾದ ಸಿ.ನಾಗರಾಜ್, ರಾಮಾಂಜನೇಯ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








