ಕನಕ ಸಂಘದಿಂದ ಇನ್ಮುಂದೆ ಪ್ರತಿಭಾ ಪುರಸ್ಕಾರ

ಹುಳಿಯಾರು:

      ಹುಳಿಯಾರಿನ ಕನಕ ಪತ್ತಿನ ಸಹಕಾರ ಸಂಘದಿಂದ ಮುಂದಿನ ವರ್ಷದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸುವುದಾಗಿ ಸಂಘದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ತಿಳಿಸಿದರು.

       ಹುಳಿಯಾರಿನ ಎಸ್‍ಎಲ್‍ಆರ್ ಬಿಲ್ಡಿಂಗ್‍ನ ಸಂಘದ ಕಛೇರಿ ಬಳಿ ಭಾನುವಾರ ಕರೆಯಲಾಗಿದ್ದ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತದ 2017-18 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ವಾರ್ಷಿಕ ಆದಾಯದಲ್ಲಿ ಪ್ರತಿವರ್ಷ ವಿದ್ಯಾನಿಧಿ ಸಂಗ್ರಹಿಸಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಗುವುದು.

       ಅಲ್ಲದೆ ಮರಣವೊಂದಿದ ಸಂಘದ ಸದಸ್ಯರಿಗೆ ಹಾಲಿ ಕೊಡುತ್ತಿದ್ದ 2 ಸಾವಿರ ರೂ. ಶವ ಸಂಸ್ಕಾರ ಹಣವನ್ನು 3 ಸಾವಿರ ರೂ.ಗೆ ಏರಿಸಲಾಗುವುದು. 10 ಲಕ್ಷ ರೂ.ಗಳಿಗೆ ಈಗಾಗಲೇ ನಿವೇಶನ ಖರೀಧಿಸಿದ್ದು ಮುಂದಿನ ವರ್ಷದಲ್ಲಿ ಸ್ವಂತ ಕಟ್ಟಣ ನಿರ್ಮಿಸಿ ಅದೇ ಕಟ್ಟಡದಲ್ಲಿ ಸರ್ವ ಸದಸ್ಯರ ಸಭೆ ನಡೆಸುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.

       ಒಂಭತ್ತತ್ತು ವರ್ಷಗಳ ಹಳೆಯ ಸಹಕಾರ ಸಂಘವಾದರೂ ಹೇಳಿಕೊಳ್ಳುವ ಮಟ್ಟಿಗೆ ಆದಾಯ ಪ್ರಗತಿ ಸಾಧಿಸಿಲ್ಲ. ಇದಕ್ಕೆ ಸಾಲ ಮರುಪಾವತಿ ಆಗದಿರುವುದೇ ಮುಖ್ಯ ಕಾರಣವಾಗಿದೆ. ಕೆಲ ಸಾಲಗಾರರು ಊರು ಬಿಟ್ಟಿದ್ದಾರೆ, ಕೆಲವರ ವಿಳಾಸವೇ ಸಿಗದಾಗಿದೆ. ಕೆಲವರು ಹಳೆದ ನಿರ್ಧೆಶಕರನ್ನೇ ಕರೆ ತನ್ನಿ ಎನ್ನುತ್ತಿದ್ದಾರೆ. ಒಟ್ಟಾರೆ ಈಗಿನ ಸಾಲ ಶೇ.90 ರಷ್ಟು ವಸೂಲಿ ಆಗುತ್ತಿದ್ದರೂ.

       ಹಳೆಯ ಸಾಲ ವಸೂಲಿ ಸಂಪೂರ್ಣ ಇಲ್ಲದಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು. ಇದಕ್ಕೆ ಪ್ರತಿಯಾಗಿ ಜಾಮೀನು ಕೊಟ್ಟವರು ಹಾಗೂ ಸಾಲ ಕೊಡುವಂತೆ ಶಿಪಾರಸ್ಸು ಮಾಡಿರುವವರ ಮೇಲೆ ಕ್ರಮ ಕೈಕೊಳ್ಳುವಂತೆ ಸದಸ್ಯರು ಸಲಹೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಎಸ್.ನಾಗರಾಜು, ಎನ್.ಜಿ.ಬೋರಲಿಂಗಯ್ಯ, ಎಸ್.ಆರ್.ರೇಖಾ, ಎಸ್.ಸಿ.ಬೀರಲಿಂಗಯ್ಯ, ಎಸ್.ಕೆ.ರೇಖಾ, ಎಸ್.ಜಿ.ರಂಗನಾಥ್, ವ್ಯವಸ್ಥಾಪಕ ಎಸ್.ಜೆ.ದೇವಿಪ್ರಸಾದ್, ಸಿಬ್ಬಂಧಿಗಳಾದ ಕೆ.ಬಿ.ಗಂಗಾಧರಯ್ಯ, ಎಚ್.ಜಿ.ಪುಷ್ಪಾವತಿ, ಬಿ.ಜಯಣ್ಣ, ಎನ್.ಆನಂದ್ ಶಿಕ್ಷಕ ಬೀರಯ್ಯ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link