ಲೋಕಸಭೆ ಚುನಾವಣೆ : ಆಂಧ್ರದಲ್ಲಿ ಆಯೋಗದ ಆದೇಶಕ್ಕೆ ಹಿನ್ನೆಡೆ…!!

ಅಮರಾವತಿ:

        ಭಾರತದ ಚುನಾವಣಾ ಆಯೋಗ ಚುನಾವಣೆ ದೃಷ್ಥಿಯಿಂದ ನೀಡಿದ್ದ ಆದೇಶವನ್ನು ನಾಯ್ಡು ಸರ್ಕಾರ ವಿರೋಧಿಸಿದೆ  ಚುನಾವಣಾ ಆಯೋಗವು ಆಂಧ್ರಪ್ರದೇಶ ಡೈರೆಕ್ಟರ್ ಜನರಲ್ ಆಫ್ ಇಂಟೆಲಿಜೆನ್ಸ್ ಎ ಬಿ ವೆಂಕಟೇಶ್ವರ ರಾವ್ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಿತ್ತು ಆದರೆ ನಾಯ್ಡು ಅವರು ಚುನಾವಣಾ ಆಯೋಗದ ಮಾತಿಗೆ ಬೆಲೆ ಕೊಡದೆ ಸುಮ್ಮನಾಗಿದ್ದಾರೆ.

       ಮುಖ್ಯ ಕಾರ್ಯದರ್ಶಿ ಅನಿಲ್ ಚಂದ್ರ ಪುನೆಥಾ ನೂತನವಾಗಿ ಹೊರಡಿಸಿರುವ ಆದೇಶದಂತೆ ಮಂಗಳವಾರ ರಾತ್ರಿ ವಿತರಿಸಿದ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ. ಇತ್ತೀಚಿನ ಆದೇಶದಂತೆ, ಕೇವಲ ಶ್ರೀಕಾಕುಲಂ ನ ಪೊಲೀಸ್ ವರಿಷ್ಠಾಧಿಕಾರಿ ವೆಂಕಟಾ ರತ್ನಂ ಮತ್ತು ಕಡಪ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಹುಲ್ ದೇವ್ ಶರ್ಮಾ ಅವರನ್ನು ಮಾತ್ರ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

          ಚುನಾವಣಾ ಆಯೋಗದ ವ್ಯಾಪ್ತಿಯಿಂದ ಚುನಾವಣಾ ಕರ್ತವ್ಯಕ್ಕೆ ಸಂಬಂಧಿಸಿದ ಡಿಜಿ, ಗುಪ್ತಚರ ಮತ್ತು ಇತರ ಅಧಿಕಾರಿಗಳನ್ನು ಹೊರತುಪಡಿಸಿ ಮುಖ್ಯ ಕಾರ್ಯದರ್ಶಿ ಪ್ರತ್ಯೇಕವಾಗಿ ನೂತನ ಆದೇಶ ಜಾರಿಗೊಳಿಸಿದ್ದಾರೆ.

         

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link