ಹರಪನಹಳ್ಳಿ :
ತಾಲ್ಲೂಕಿನ ಅರಸಿಕೆರೆ ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಅಂಚೆ ಇಲಾಖೆ ಮೇಲೆ ನೀಡಿದ್ದ ದೂರನ್ನು ಪರಿಗಣಿಸಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಖದ್ದು ಬೇಟಿ ನೀಡಿ ನೌಕರರೊಂದಿಗೆ ಸಮಸ್ಯೆಯನ್ನು ಆಲಿಸಿದರು.
ಗ್ರಾಮದ ಅಂಚೆ ಕಛೇರಿಗೆ ಮಂಗಳವಾರವೇ ಬೇಟಿ ನೀಡಿದ ಅವರು, ತಾವೇ ಸಮಸ್ಯೆಯ ಜಾಡನ್ನು ಪತ್ತೆ ಹಚ್ಚಲು ಅಂಚೆ ನೌಕರರೊಂದಿಗೆ ಕಾಂಪ್ಯೂಟರ್ ಹಾಗೂ ಅಂರ್ತಜಾಲದ ತೊಂದರೆಯನ್ನು ಅರಿತರು. ಇಲಾಖೆಯಲ್ಲಿ ನೌಕರರ ಕೊರತೆ ಹಾಗೂ ತಂತ್ರಜ್ಞಾನದ ತೊಂದರೆÉಯನ್ನು ಶೀಘ್ರ ಪರಿಹರಿಸಿ ಸಾರ್ವಜನಿಕರಿಗೆ ಅವಶ್ಯವಾದ ಸಂಧ್ಯಾಸುರಕ್ಷೆ, ವಿಧವಾ ವೇತನ ಹಾಗೂ ಮುಂತಾದ ಸಮಾಜಿಕ ಭದ್ರತೆಯ ನೆರವನ್ನು ಅರ್ಹರಿಗೆ ತಲುಪಿಸಲು ಶ್ರಮಸಬೇಕು ಎಂದು ಸಲಹೆ ನೀಡಿದರು.
ನೌಕರ ವಿಶ್ವನಾಥ ಡಿಸಿ ಅವರು ಕೇಳಿದ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳನ್ನು ನೀಡಿ, ಇಲಾಖೆಯಲ್ಲಿ ನೌಕರರ ಕೊರತೆ ಇದೆ. ಜೂನ್ ತಿಂಗಳಿಂದ ಇಲ್ಲಿಯವರೆಗೂ ಕಡತಗಳನ್ನು ವರ್ಗಾವಣೆ ಮಾಡಲು ಸೂಕ್ತ ಕ್ರಮ ಜರುಗಿಸಲಾಗಿದೆ. ಅತೀ ಶೀಘ್ರದಲ್ಲೇ ತಂತ್ರಜ್ಞಾನದ ನವೀಕರಣವಾಗಲಿದ್ದು ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದರು.ಎಸಿ ಎಸ್.ನಜ್ಮಾ, ತಹಶೀಲ್ದಾರ ಡಾ.ಮಧು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ