ಚಿಕ್ಕಮ್ಮನನ್ನೇ ಕೊಂದ ಚಿತ್ರ ನಟ

ಬೆಂಗಳೂರು

        ಆಸ್ತಿ ವಿಚಾರಕ್ಕೆ ಉಂಟಾದ ಜಗಳದಲ್ಲಿ ಅಂಗವಿಕಲರಾಗಿದ್ದ ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿ ಬೆದರಿಸಿದ್ದ ಆಪರೇಷನ್ ಅಲಮೇಲಮ್ಮ ಚಿತ್ರದ ನಾಯಕ ನಟ ರಿಷಿ ಯನ್ನು ಎರಡನೇ ಆರೋಪಿಯಾಗಿಸಿ ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

       ಇದೇ ತಿಂಗಳ 11 ರಂದು ನಡೆದಿದ್ದ ಜಗಳದ ಸಂಬಂಧ ಎನ್‍ಸಿಆರ್‍ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ವಿಚಾರಣೆ ನಡೆಸಿ ರಿಷಿಯ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

     ಹಲ್ಲೆ ಮಾಡಿರುವ ಆರೋಪದಡಿಯಲ್ಲಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ನಟ ರಿಷಿ, ತಂದೆ ನಾಗರಾಜ್, ತಾಯಿ ಅನಲಾ ವಿರುದ್ಧ ಅಂಗವಿಕಲೆ ಶಾಲಿನಿ ಗೋಪಿನಾಥ್ ದೂರು ನೀಡಿದ್ದರು.

       ಕೃತ್ಯದ ವಿವರ: ನಟ ರಿಷಿ ಕುಟುಂಬಸ್ಥರು ಬಸವೇಶ್ವರ ನಗರದಲ್ಲಿ ತಾತನ ಮನೆಯಲ್ಲಿ ವಾಸವಾಗಿದ್ದಾರೆ. ನಟನ ಚಿಕ್ಕಮ್ಮ ಶಾಲಿನಿ ಗೋಪಿನಾಥ್ ವಿಶಿಷ್ಟ ಚೇತನರಾಗಿದ್ದು, ತಂದೆಯನ್ನು ನೋಡುವ ಸಲುವಾಗಿ ಅ. 10ರಂದು ಬಸವೇಶ್ವರದ ನಗರದ ಮನೆಗೆ ಬಂದಿದ್ದರು.
ಈ ವೇಳೆ ಆಕೆಯನ್ನು ರಿಷಿ ಕುಟುಂಬದವರು ಮನೆಯೊಳಗೆ ಬಿಡದೆ ಸ್ಟಾಂಪ್ ಪೇಪರ್ ಮೇಲೆ ಸಹಿ ಹಾಕಿದರೆ ಮಾತ್ರ ಮನೆ ಒಳಗೆ ಬಿಡುತ್ತೇವೆ ಎಂದು ಹೆದರಿಸಿದ್ದರು ಎನ್ನಲಾಗಿದೆ. ಈ ವೇಳೆ ಶಾಲಿನಿ ಜೋರಾಗಿ ಕೂಗಿಕೊಂಡಾಗ ರಿಷಿ ತಾಯಿ ಅನಲಾ ತನ್ನ ಬಾಯಿಗೆ ಕರ್ಚೀಫ್ ತುರುಕಿದ್ದರು. ಅಲ್ಲದೆ, ರಿಷಿ ಮಚ್ಚಿನಿಂದ ಹೆದರಿಸಿ ಖಾಲಿ ಪತ್ರಕ್ಕೆ ಸಹಿ ಮಾಡುವಂತೆ ಬೆದರಿಸಿದ್ದಾರೆ ಎಂದು ಶಾಲಿನಿ ದೂರಿನಲ್ಲಿ ತಿಳಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link