ಹೊಸದುರ್ಗ:
ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರರಾಟ ಮಾಡುವುದು ಹಾಗೂ ಅಪ್ರಾಪ್ತ ವಯಸ್ಕರಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಕಲಹಾಗಾರರಾದ ಪ್ರಭುದೇವ ಬಿ.ಎಂ ತಿಳಿಸಿದರು.ತರೀಕೆರೆ ರಸ್ತೆಯಲ್ಲಿರುವ ತಂಬಾಕು, ಬೀಡಿ, ಸೀಗರೇಟ್, ಮಾರಟ ಮಾಡುವ ಅಂಗಡಿಗಳ ಮಾಲೀಕರಿಗೆ ತಿಳಿಸಿದರು.
ತಂಬಾಕು ಮಾರಟ ಮಾಡುವವರು ಆರೋಗ್ಯ ಎಚ್ಚರಿಕೆ ನಾಮಫಲಕವನ್ನು ಕಡ್ಡಾಯವಾಗಿ ಹಾಕಬೇಕು. ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಉತ್ತೇಜನ ಪ್ರಾಯೋಜಕತೆ ನಿಷೇಧ ಎಂದು ಹೇಳಿದರು.ಇದೇ ವೇಳೆ ಸೋಷಿಯಲ್ ವರ್ಕರ್ ತಿಪ್ಪೇಸ್ವಾಮಿ, ಸೀನಿಯರ್ ಹೆಲ್ತ್ ಇನ್ಸೆಪ್ಟರ್ ಸಿದ್ದರಾಮಸ್ವಾಮಿ, ಪೊಲೀಸ್ ಸಿಬ್ಬಂದಿ ಗೌಸ್ ಸಾಹೇಬ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
