ಜಗಳೂರು:
ಪ್ರಧಾನಿ ನರೇಂದ್ರಮೋಧಿ ನೇತೃತ್ವದ ಸರ್ಕಾರ 2022 ನೇ ಇಸ್ವೀಗೆ ಇಡಿ ದೇಶದಲ್ಲಿ ಪ್ರತಿಯೊಬ್ಬರಿಗೂ ಸೂರು, ಜಾಗ ಇಲ್ಲದವರಿಗೆ ಜಾಗ ನೀಡುವ ಮೂಲಕ ನಿವೇಶನಗಳನ್ನು ನೀಡಬೇಕೆಂಬ ಸಂಕಲ್ಪ ಮಾಡಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ರೂ. 1.50 ಕೋಟಿ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬಡವರಿಗೆ ಗ್ಯಾಸ್‍ವಿತರಣೆಯನ್ನು ಹಂತ ಹಂತವಾಗಿ ನೀಡುತ್ತಾ ಬಂದಿದೆ. ವಿದ್ಯುತ್ ಕಾಣದ ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸಿ ಕೊಡಲಾಗಿದೆ. ತೆರೆ ಸಾಲು ಭಾಗದ ಜನರ ಬಹುದಿನಗಳ ಬೇಡಿಕೆಯಾದ ಅಪ್ಪರ್ ಭದ್ರಾಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.18 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾದ ಕಾಮಗಾರಿಯನ್ನು ಹಿಂದಿನ ಸರ್ಕಾರ ಕಾಮಗಾರಿ ಕೆಲಸ ಮಾಡದೇ ಹೇಳಿಕೆಗಳಲ್ಲೇ ಐದು ವರ್ಷ ಕಾಲ ಕಳೆದಿದೆ ಎಂದವರು ಕಾಂಗ್ರೇಸ್ ವಿರುದ್ದ ತರಾಟೆ ತೆಗೆದುಕೊಂಡರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಮಲ್ಲಾಪುರ ಗ್ರಾಮಕ್ಕೆ ಸೊಸೈಟಿ ಕೇಂದ್ರದ ಸ್ಥಾಪನೆಯ ಜೊತೆಗೆ ಕಟ್ಟಡಕ್ಕೆ ರೂ.5 ಲಕ್ಷ ಅನುಧಾನ ನೀಡುವುದಾಗಿ ಅವರು ಭರವಸೆ ನೀಡಿದರು. ಈ ಭಾಗದ ಕೆರೆಗಳು ಸೇರಿದಂತೆ 52 ಕೆರೆಗಳಿಗೆ ನೀರು ತುಂಭಿಸುವ ಯೋಜನೆ ಹಾಗೂ ಅಪ್ಪರ್ ಭದ್ರಾ ಯೋಜನೆಯ ಜಾರಿಗೆ ಸಂಬಂಧ ಸಿರಿಗೆರೆ ಶ್ರೀಗಳು 28 ರಂದು ಸಭೆ ಕೆರೆದಿದ್ದಾರೆ. ಸ್ವಾಮೀಜಿಗಳ ಮೂಲಕ ಕ್ಷೇತ್ರದ ಜನರ ರವಾಗಿ ನಾವು ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಯ ಜಾರಿಗೆ ಪ್ರಯತ್ತಿಸುತ್ತೇವೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರಶ್ಮೀರಾಜಪ್ಪ, ಸದಸ್ಯರಾದ ಎಸ್.ಕೆ.ಮಂಜುನಾಥ್, ಸವಿತಾಕಲ್ಲೇಶಪ್ಪ, ಶಾಂತಕುಮಾರಿ, ಎಪಿಎಂಸಿ ಅಧ್ಯಕ್ಷ ಹನುಮಂತಪ್ಪ, ತಾಲ್ಲೂಕು ವೈದ್ಯಾಧಿಕಾರಿ ನಾಗರಾಜು, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ, ಸದಸ್ಯ ಬಸವರಾಜ್, ಬಿಜೆಪಿ ತಾಲೂಕು ಅಧ್ಯಕ್ಷ ಡಿ.ವಿ.ನಾಗಪ್ಪ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಬಿಸ್ತುವಳ್ಳಿ ಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ರಘುರಾಮರೆಡ್ಡಿ, ಅಮರೇಂದ್ರಪ್ಪ, ಇಂದ್ರೇಶ್, ಸೋಮನಹಳ್ಳಿ ಶ್ರೀನಿವಾಸ್, ಗ್ರಾ.ಪಂ.ಸದಸ್ಯರು, ಗ್ರಾಮದ ಮುಖಂಡರುಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
