ತುರುವೇಕೆರೆ:
ಪಟ್ಟಣದ ಸಮೀಪ ಮಾಯಸಂದ್ರ ರಸ್ತೆಯ ಬೆಳ್ಳಿ ಪೆಟ್ರೋಲ್ ಬಂಕ್ ಬಳಿ ಅತೀ ವೇಗದಲ್ಲಿ ಚಲಿಸಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದು ಓರ್ವನಿಗೆ ತೀವ್ರತರ ಪೆಟ್ಟಾದ ಘಟನೆ ಶನಿವಾರ ರಾತ್ರಿ ನೆಡೆದಿದೆ.
ಮೃತ ದುರ್ದೈವಿ ಕಿಶೋರ್ (29) ಎಂದು ತಿಳಿದು ಬಂದಿದ್ದು ತಾಲೂಕಿನ ಹುಲಿಕೆರೆ ಗ್ರಾಮದವನಾಗಿದ್ದು ಪಟ್ಟಣದಲ್ಲಿ ಸೈಬರ್ ಸೆಂಟರ್ ನೆಡೆಸುತ್ತಿದ್ದನು. ಶನಿವಾರ ರಾತ್ರಿ ಮಾಯಸಂದ್ರ ಕಡೆಗೆ ಸ್ನೇಹಿತರೊಂದಿಗೆ ಅತೀ ವೇಗದಲ್ಲಿ ಕಾರಿನಲ್ಲಿ ತೆರಳುವಾಗ ಆಯಾ ತಪ್ಪಿ ವಿದ್ಯುತ್ ಕಂಬಕ್ಕ ಗುದ್ದಿದೆ. ಕಾರಿನಲ್ಲಿದ್ದ ಕಿಶೋರ್ (25) ಸಾವನ್ನಪ್ಪಿದ್ದು.
ಇನ್ನೊಬ್ಬ ಯುವಕ ವಿಠಲದೇವರಹಳ್ಳಿ ಶಿವರಾಜುಪಟೇಲ್ (30) ತೀವ್ರತರ ಪೆಟ್ಟಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಗುದ್ದಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ