ನಿರಾಶ್ರಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಇಂಜಿನಿಯರ್

ತುಮಕೂರು

   ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆಯಡಿ ನೂತನವಾಗಿ ನಿರ್ಮಿಸಲ್ಪಟ್ಟಿರುವ “ವಸತಿ ರಹಿತರ ಆಶ್ರಯ ಕೇಂದ್ರ”ದಲ್ಲಿ ರಾತ್ರಿ ವೇಳೆ ತಂಗುವ ನಿರಾಶ್ರಿತರ ಜೊತೆಯಲ್ಲಿ ಪಾಲಿಕೆಯ ನಗರ ಜೀವನೋಪಾಯ ಕೇಂದ್ರದ ಯೋಜನಾ ಇಂಜಿನಿಯರ್ ಮಂಜುನಾಥ್ ಅವರು ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.

     ಈ ಕೇಂದ್ರ ಇತ್ತೀಚೆಗೆ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಇಂತಹುದೊಂದು ಕಾರ್ಯಕ್ರಮ ಇಲ್ಲಿ ನಡೆದಿದೆ.ಅಂದು ರಾತ್ರಿ ಇಲ್ಲಿ ಆಶ್ರಯ ಪಡೆದಿದ್ದ ಎಲ್ಲ ನಿರಾಶ್ರಿತರಿಗೆ ಮಂಜುನಾಥ್ ಅವರು ಸಿಹಿ ಊಟದ ವ್ಯವಸ್ಥೆ ಮಾಡಿದ್ದಲ್ಲದೆ, ಎಲ್ಲರಿಗೂ ಹೊಸ ಉಡುಪುಗಳನ್ನು ವಿತರಿಸಿದರು. ಜೊತೆಗೆ ವಸತಿ ರಹಿತರ ಆಶ್ರಯ ಕೇಂದ್ರದ ಆವರಣದಲ್ಲಿ ಹೊಸದಾಗಿ ಗಿಡಗಳನ್ನು ನೆಡುವ ಮೂಲಕ ಸಂತಸವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಪಾಲಿಕೆಯ ಸಮುದಾಯ ಸಂಘಟನಾಧಿಕಾರಿ ರಾಮಾಂಜಿನಪ್ಪ, ನಗರ ವಸತಿರಹಿತರ ಆಶ್ರಯ ಕೇಂದ್ರದ ಸಮಾಲೋಚಕ ಶಿವಕುಮಾರ್, ಕೇಂದ್ರದ ಕೇರ್‍ಟೇಕರ್ ರಾಜೇಂದ್ರ ಪ್ರಸಾದ್ ಮೊದಲಾದವರು ಇದ್ದರು.

     ಪಾಲಿಕೆ ಆವರಣದಲ್ಲಿರುವ ಈ “ವಸತಿ ರಹಿತರ ಆಶ್ರಯ ಕೇಂದ್ರ”ದಲ್ಲಿ ಪುರುಷ ಮತ್ತು ಮಹಿಳಾ ನಿರಾಶ್ರಿತರಿಗೆ ರಾತ್ರಿ ವೇಳೆಯಲ್ಲಿ ಉಚಿತವಾಗಿ ತಂಗಲು ಪ್ರತ್ಯೇಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ನಗರದ ರಸ್ತೆ ಬದಿಯಲ್ಲಿ, ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ರಾತ್ರಿ ವೇಳೆ ನಿದ್ರಿಸುವವರನ್ನು ಗುರುತಿಸಿ ಈ ಕೇಂದ್ರದಲ್ಲಿ ನಿದ್ರಿಸಲು ಅವಕಾಶ ಮಾಡಿಕೊಡಲಾಗಿದೆ. ಇಲ್ಲಿ ಶೌಚಾಲಯ, ಸ್ನಾನಗೃಹ ಮೊದಲಾದ ಸೌಲಭ್ಯಗಳಿದ್ದು, ಎಲ್ಲವೂ ಉಚಿತವಾಗಿ ದೊರಕುತ್ತಿದೆ. ಪ್ರಸ್ತುತ ಪ್ರತಿನಿತ್ಯ ಸುಮಾರು 25 ಜನರಿಗೂ ಹೆಚ್ಚು ಜನರು ಇದರ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link